ನವದೆಹಲಿ: ಜ್ಞಾನವ್ಯಾಪಿ ಮಸೀದಿ ಸರ್ವೆ ಪ್ರಶ್ನಿಸಿ ಕೋರ್ಟ್ ಗೆ ಅರ್ಜಿ ಸಲ್ಲಿಕೆಯಾಗಿದ್ದು, ಇಂದು ಕೂಡ ಅರ್ಜಿಯ ವಿಚಾರಣೆ ನಡೆದಿದೆ. ಈ ವೇಳೆ ಮಸೀದಿ ಪರ ವಕೀಲರಿಗೆ ಸುಪ್ರೀಂ ಕೋರ್ಟ್ ಒಂದಷ್ಟು ಪ್ರಶ್ನೆಗಳನ್ನು ಕೇಳಿದೆ. ಇವು ಸಂಕೀರ್ಣವಾದ ಸಾಮಾಜಿಕ ಸಮಸ್ಯೆಗಳು ಎಂದು ಸುಪ್ರೀಂ ತಿಳಿಸಿದೆ.
ಮಾನವನ ಯಾವುದೇ ಪರಿಹಾರ ಪರಿಪೂರ್ಣವಾಗುವುದಿಲ್ಲ. ಆದರೆ ಶಾಂತಿ ಕಾಪಾಡಿಕೊಳ್ಳುವುದು ನಮ್ಮ ಆದೇಶವಾಗಿದೆ. ಮಧ್ಯಂತರ ಆದೇಶ ಸದ್ಯಕ್ಕೆ ನೋವು ಕಡಿಮೆ ಮಾಡಬಹುದು ಎಂದಿರುವ ಸುಪ್ರೀಂ ಮಸೀದಿ ಸರ್ವೆ ವರ್ಷದ ದಿ ಸೋರಿಕೆಯಾಗಿರುವುದಕ್ಕೆ ಗರಂ ಆಗಿದೆ.
ಈ ಬಗ್ಗೆ ಎಚ್ಚರಿಕೆ ನೀಡಿದ್ದು, ಯಾವುದೇ ಕಾರಣಕ್ಕೂ ವರದಿ ಸೋರಿಕೆಯಾಗಬಾರದು. ಆಯೋಗದ ಸರ್ವೆ ವರದಿ ಕೋರ್ಟ್ ಗೆ ಮಾತ್ರ ಸಲ್ಲಿಕೆಯಾಗಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾ. ಡಿ ವೈ ಚಂದ್ರಚೂಡ್ ನಿರ್ದೇಶನ ಮಾಡಿದ್ದಾರೆ.
ಇದೇ ವೇಳೆ ಮಸೀದಿ ಪರ ವಕೀಲ ವಾದ ಮಾಡಿದ್ದು, ಮಸೀದಿ ಒಳಗೆ ನಮಗೆ ಮಿತಿಗಳನ್ನು ಹೇರಿದ್ದಾರೆ ಎಂದಾಗ ಸುಪ್ರೀಂ ಕೋರ್ಟ್ ನಿಮಗೆ ನಮಾಜ್ ಗೆ ಅವಕಾಶ ಮಾಡಿಕೊಡಲಾಗಿದೆ ತಾನೆ ಎಂದು ಕೋರ್ಟ್ ಪ್ರಶ್ನಿಸಿದೆ. ಇದಕ್ಕೆ ಮಸೀದಿ ಪರ ವಾದ ಮಾಡಿದ ವಕೀಲ, ನಮಾಜ್ ಗೆ ಅವಕಾಶ ನೀಡಲಾಗಿದೆ. ಆದರೆ ವುಜು ಪ್ರದೇಶವನ್ನು ಸೀಲ್ ಮಾಡಲಾಗಿದೆ. ನಮಾಜ್ ಗಾಗಿ ಉಪಯೋಗಿಸುವ ಒಂದು ಕೊಳ ಅದು. ವುಜು ಕೊಳವನ್ನು ಸೀಲ್ ಮಾಡಲಾಗಿದೆ. ವುಜು ಸ್ಥಳಕ್ಕೆ ಕಬ್ಬಿಣದ ಗೇಟ್ ಗಳನ್ನು ಹಾಕಿದ್ದಾರೆಂದು ವಕೀಲ ಅಹ್ಮದಿ ವಾದ ಮಾಡಿದ್ದಾರೆ.