ಚಿಕ್ಕಬಳ್ಳಾಪುರ: ಒಳ ಮೀಸಲಾತಿ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದೆ ತಡ, ಇಂದು ಬಂಜಾರ ಸಮುದಾಯದವರು ಶಿವಮೊಗ್ಗದಲ್ಲಿ ದಂಗೆ ಎದ್ದಿದ್ದರು. ಪ್ರತಿಭಟನಾಕಾರರು ಆಕ್ರೋಶದಿಂದ ಶಿಕಾರಿಪುರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಇದೀಗ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಕ್ಲಾರಿಟಿಯೊಂದನ್ನು ನೀಡಿದ್ದಾರೆ. ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಸಲಹೆ ನೀಡಿದ್ದಾರೆ.
ಬೋವಿ, ಲಂಬಾಣಿ, ಕೊರವ, ಕೊರಚಿ ಜನಾಂಗದವರು ಎಸ್ಸಿ ಮೀಸಲಾತಿಯಲ್ಲಿಯೇ ಇರುತ್ತೀರಿ. ಆತಂಕ ಪಡುವ ಅಗತ್ಯವಿಲ್ಲ. ತೆಗೆದು ಹಾಕುವ ಪ್ರಶ್ನೆಯೇ ಇಲ್ಲ. ನಾನೇ ಸ್ವತಃ ಆದೇಶ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಟ್ಟಿದ್ದೇನೆ. 3% ಮೀಸಲಾತಿಯನ್ನು ನಾಲ್ಕೂವರೆ ಪರ್ಸೆಂಟ್ ಗೆ ಹೆಚ್ಚಿಸಿದ್ದೇವೆ.
ಸದಾಶಿವ ಆಯೋಗ ವರದಿಯ ಶಿಫಾರಸ್ಸಿನ ಅನ್ವಯ ಇದನ್ನು ಮಾಡಿಲ್ಲ. ನಮ್ಮ ಕ್ಯಾಬಿನೆಟ್ ಉಪಸಮಿತಿಯಿಂದ ಮಾಡಿದ್ದೇವೆ. ಆಯೋಗದ ವರದಿಯ ಅಗತ್ಯವಿಲ್ಲ. ಬೇಡಿಕೆಗಳ ಅನುಗುಣವಾಗಿಯೇ ನಾವೂ ಮೀಸಲಾತಿ ಹಂಚಿದ್ದೇವೆ. ಯಾವುದೇ ಗೊಂದಲಬೇಡ. ಎಲ್ಲಾ ಸಮುದಾಯದ ಹಿತರಕ್ಷಣೆ ಮಾಡಿದ್ದೇವೆ. 2 ಲಕ್ಷದ ಹಕ್ಕು ಪತ್ರಗಳನ್ನು ತಾಂಡಾದ ಜನರಿಗೆ ನೀಡಿದ್ದೇವೆ. ಬಿಜೆಪಿ ಸರ್ಕಾರ ನಿಮ್ಮ ಪರವಾಗಿ ಇರುವ ಸರ್ಕಾರ. ತಾಂಡಾ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು. ತಾಂಡಾದ ಜನರಿಗೆ ಮೂಲ ಸೌಕರ್ಯ ಕಲ್ಪಿಸಿಕೊಟ್ಟಿದ್ದು ಯಡಿಯೂರಪ್ಪ ಅವರು ಎಂದಿದ್ದಾರೆ.