ಸಾಕಷ್ಟು ಜನರಿಗೆ ಉಸಿರಾಟದ ಸಮಸ್ಯೆ ಇರುತ್ತೆ. ಅದರಲ್ಲೂ ಚಳಿಗಾಲ ಬಂತು ಅಂದ್ರೆ ಸಾಕು ಕಫ ಜಾಸ್ತಿ ಆಗುತ್ತೆ, ಉಸಿರಾಡೋದಕ್ಕೂ ಸಮಸ್ಯೆ ಆಗಿತ್ತೆ. ಇದಕ್ಕೆಲ್ಲ ಮನೆ ಮದ್ದುಗಳಿಂದಾನೇ ಪರಿಹಾರವನ್ನ ಮಾಡಿಕೊಳ್ಳಬಹುದು. ಈ ಹಿಂದೆಲ್ಲಾ ಅಡುಗೆ ಮನೆಯಲ್ಲಿರುವ ಅಡುಗೆ ಪದಾರ್ಥದಿಂದಾನೇ ಅದೆಷ್ಟೋ ಕಾಯಿಲೆಗಳಿಗೆ ಮದ್ದನ್ನ ನೀಡ್ತಾ ಇದ್ರು. ಈಗ ಕಾಲ ಬದಲಾಗಿದೆ, ಆಸ್ಪತ್ರೆ ತಿರುಗಾಟ ಜಾಸ್ತಿಯಾಗಿದೆ ಅಷ್ಟೆ. ಹಾಗಾದ್ರೆ ನಿಮ್ಗೆ ಉಸಿರಾಡುವುದಕ್ಕೆ ಕಷ್ಟ ಎನಿಸಿದರೆ ಈ ಟಿಪ್ಸ್ ಅನ್ನು ಫಾಲೋ ಮಾಡಿ.
ಒಂದು ಸ್ಪೂನ್ ಸಾಸಿವೆ ಎಣ್ಣೆ ಒಂದು ಸ್ಪೂನ್ ಬೆಲ್ಲ ತೆಗೆದುಕೊಳ್ಳಿ. ಈಗ ಎರಡನ್ನು ಚೆನ್ನಾಗಿ ಮಿಕ್ಸ್ ಮಾಡಿ. ಅದು ಲೇಹದ ರೂಪಕ್ಕೆ ಬರಬೇಕು. ಬಳಿಕ ಅದನ್ನ ಬೆಳಗ್ಗೆ ಒಂದು ಸಲ ರಾತ್ರಿಒಂದು ಸಲ ತಿನ್ನಿ. ನೀವೂ ತಿನ್ನುವಾಗ ಈ ಲೇಹವನ್ನ ಫ್ರೆಶ್ ಆಗಿನೇ ಮಾಡಿಕೊಳ್ಳಿ. ಆಗ ರಿಸಲ್ಟ್ ಇನ್ನು ಚೆನ್ನಾಗಿಯೇ ಸಿಗಲಿದೆ. ಹೀಗೆ ದಿನಕ್ಕೆ ಎರಡು ಸಲ ಪ್ರತಿ ದಿನ ಸೇವಿಸುತ್ತಾ ಬಂದರೆ ಖಂಡಿತ ಯಾವುದೇ ರೀತಿಯ ಉಸಿರಾಟದ ಸಮಸ್ಯೆ ಇದ್ದರು, ಅದರಿಂದ ಮುಕ್ತಿ ಸಿಗಲಿದೆ.
ಈ ಬೆಲ್ಲ ಹಾಗೂ ಸಾಸಿವೆ ಎಣ್ಣೆಯ ಮಿಕ್ಸ್ ಆದರೆ ಅದರಲ್ಲಿ ಉಸಿರಾಟದ ಸಮಸ್ಯೆಯನ್ನು ಪ್ಯೂರ್ ಮಾಡುವಂತ ಶಕ್ತಿ ಇರುತ್ತದೆ. ಈ ಪದಾರ್ಥವನ್ನ ಸಾಮಾನ್ಯವಾಗಿಯೇ ಎಲ್ಲರೂ ತೆಗೆದುಕೊಳ್ಳಬಹುದು. ಇದರಿಂದ ಯಾವುದೇ ಸೈಡ್ ಎಫೆಕ್ಟ್ ಇಲ್ಲ. ಆದರೆ ಶುಗರ್ ಇರುವವರು ಮಾತ್ರ ವೈದ್ಯರನ್ನ ಕಾಂಟ್ಯಾಕ್ಟ್ ಮಾಡಿ ಇದನ್ನ ತೆಗೆದುಕೊಳ್ಳುವುದು ಉತ್ತಮ. ಯಾಕಂದ್ರೆ ಬೆಲ್ಲದಲ್ಲೂ ಶುಗರ್ ಕಂಟೆಂಟ್ ಇರುವ ಕಾರಣ, ಮಧುಮೇಹಿಗಳಿಗೆ ಎಷ್ಟು ಉತ್ತಮ ಅನ್ನೋದು ಗೊತ್ತಿಲ್ಲ. ಹೀಗಾಗಿ ಮಧುಮೇಹಿಗಳನ್ನ ಬೇರೆ ಯಾರೇ ಈ ರೆಮಿಡಿಯನ್ನ ತೆಗೆದುಕೊಂಡರು ಸೈಡ್ ಎಫೆಕ್ಟ್ ಆಗಲ್ಲ.






