ಚಾಮುಂಡಿ ಬೆಟ್ಟವನ್ನ ವಕ್ಫ್ ಮಂಡಳಿಗೆ ಕೊಡುವುದಕ್ಕೆ ಹೊರಟಿದ್ದೀರಾ..? ಇಂಗ್ಲಿಷ್ ನಲ್ಲಿ ಡಿಕೆಶಿಗೆ ಶೋಭ ಕರಂದ್ಲಾಜೆ ಕ್ಲಾಸ್

1 Min Read

ಮೈಸೂರು: ಡಿಕೆ ಶಿವಕುಮಾರ್ ಮಾತಿಗೆ ಇಂದು ಶೋಭ ಕರಂದ್ಲಾಜೆ ಗರಂ ಆಗಿದ್ದಾರೆ. ಯಾವಾಗ ಆರ್ ಎಸ್ ಎಸ್ ಪ್ರಾರ್ಥನೆಯನ್ನ ಹೇಳಿದ್ರಿ ಆಗ ನಿಮ್ಮ ಹೈಕಮಾಂಡ್ ನಿಮ್ಮ ಮೇಲೆ ಕೋಪ ಮಾಡಿಕೊಳ್ತು. ನಿಮ್ಗೆ ಸೂಚನೆ ಬಂದಿದೆ ಇದರಿಂದ ಹೊರಗೆ ಬರಬೇಕು ಅಂತ. ಅದಕ್ಕಾಗಿ ನೀವೂ ಚಾಮುಂಡಿ ಬೆಟ್ಟದ ಬಗ್ಗೆ ಕಾಂಟ್ರೂವರ್ಸಿ ಸೃಷ್ಟಿ ಮಾಡ್ತಾ ಇದ್ದೀರಾ. ನಿಮ್ಮ ಬಾಸ್ ಗಳಿಗೆ ಹೇಳಿ. ಯಾರೂ ಸೃಷ್ಟಿ ಮಾಡ್ತಾ ಇದ್ದಾರೆ ಈ ಕಾಂಟ್ರವರ್ಸಿಯನ್ನ. ಆರ್ ಎಸ್ ಎಸ್ ಬಗ್ಗೆ ಹೇಳಿರುವುದನ್ನ ಮರೆತೋಗಬೇಕು, ಹೊಸ ವಿವಾದವನ್ನ ಹುಟ್ಟು ಹಾಕಬೇಕು. ಇದು ಕಾಂಗ್ರೆಸ್ ನ ಮಾನಸಿಕತೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಸಿದ್ದರಾಮಯ್ಯ ಅವರದ್ದು ಇದೇ ಮಾನಸಿಕತೆ. ನೀವೂ ಹಿಂದೂಗಳನ್ನು, ದೇವಸ್ಥಾನಗಳ ಒಪ್ಪಿಕೊಳ್ಳುವುದಕ್ಕೆ ರೆಡಿ ಇಲ್ಲ. ಅದೇ ಮಾನಸಿಕತೆಗೆ ಇಂದು ಡಿಕೆ ಶಿವಕುಮಾರ್ ಹೋಗ್ತಾ ಇದ್ದಾರೆ. ನೀವೂ ಏನು ಮಾಡುವವರಿದ್ದೀರಿ ಚಾಮುಂಡಿ ಬೆಟ್ಟವನ್ನ..? ವಕ್ಫ್ ಪ್ರಾಒರ್ಟಿ ಅಂತ ಘೋಷಣೆ ಮಾಡುವವರಿದ್ದೀರಾ..? ಏನು ನಿಮ್ಮ ಷಡ್ಯಂತ್ರ..? ಏನು ನಿಮ್ಮ ಹುನ್ನಾರ..? ಅದರ ಮೊದಲ ಭಾಗವಾಗಿ ನೀವೂ ಬಾನು ಮುಷ್ತಾಕ ಅವರನ್ನ ಕರೆದಿದ್ದೀರಾ..?

ಏನನ್ನ ನಡೆಸುವುದಕ್ಕೆ ಹೊರಟಿದ್ದೀರಿ ಕರ್ನಾಟಕದಲ್ಲಿ. ಹಿಂದೂ ಹಬ್ಬ ಮಾಡುವುದಕ್ಕೆ ಬಿಡಲ್ಲ, ಗಣೇಶನನ್ನ ಇಡುವುದಕ್ಕೆ ಬಿಡಲ್ಲ, ಹಾಡಾಕೋಕೆ ಬಿಡಲ್ಲ, ಮೆರವಣಿಗೆ ಮಾಡುವುದಕ್ಕೆ ಬಿಡಲ್ಲ. ಏನು ಮಾಡುವುದಕ್ಕೆ ಹೊರಟಿದ್ದೀರಿ. ಬೇರೆಯವರಿಗೆ ಇದು ಅನ್ವಯ ಆಗಲ್ಲ. ಎಷ್ಟು ಧೈರ್ಯ ನಿಮಗೆ. ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಅಂತ ಹೇಳುವುದಕ್ಕೆ ಹೊರಟಿದ್ದೀರಿ ಎಷ್ಟು ಧೈರ್ತ ನಿಮಗೆ. ಸಿದ್ದರಾಮಯ್ಯ ಅವರು ಹಾಗೂ ಡಿಕೆ ಶಿವಕುಮಾರ್ ಅವರು ಮಾನಸಿಕವಾಗಿ ದಿವಾಳಿಯಾಗಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks