ಬೆಂಗಳೂರು: ಪಿಎಸ್ಐ ನೇಮಕಾತಿ ಹಗರಣ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿದ್ದು, ಇಡೀ ದೇಶದಲ್ಲಿ ಕರ್ನಾಟಕದ ಆಡಳಿತಕ್ಕೆ ಕಪ್ಪು ಚುಕ್ಕಿ ಇದು. ಇಂದು ನ್ಯಾಯಾಲಯ ಜನಸಾಮನ್ಯರ ರಕ್ಷಣೆಗೆ ಬಂದಿದೆ. ಪ್ರಜಾಪ್ರಭುತ್ವ ಉಳಿಸ ಬೇಕಾಗಿದ್ದು ನ್ಯಾಯಾಂಗ. ಪಕ್ಷದ ಪರವಾಗಿ ನ್ಯಾಯಾಂಗಕ್ಕೆ ಸಾಷ್ಠಾಂಗ ನಮಸ್ಕಾರ ಮಾಡ್ತಿನಿ. ನ್ಯಾಯಾಂಗಕ್ಕೂ ರಕ್ಷಣೆ ಇಲ್ಲದಂತಾಗಿದೆ. ಜಡ್ಜ್ ತಮ್ಮ ಸ್ಥಾನಕ್ಕೆ ಕಂಟಕ ಬರುವ ರೀತಿ ತಮ್ಮ ದುಗುಡ ಹೇಳಿಕೊಂಡಿದ್ದಾರೆ. ನ್ಯಾಯಾಂಗಕ್ಕೆ ಸರ್ಕಾರ ಏನ್ ಹೇಳಿದೆ. ಆದರೆ ಸರ್ಕಾರ ಏನ್ ಮಾಡಿದೆ ಎಂಬುದು ಹೇಳಿದೆ. ನ್ಯಾಯಲಯದ ಆದೇಶದ ಮೇಲೆ ನಿನ್ನೆ ಇಬ್ಬರು ಅಧಿಕಾರಿಗಳನ್ನ ಬಂಧಿಸಿದ್ದಾರೆ.
ನಮ್ಮ ನಾಯಕ ರಾಹುಲ್ ಗಾಂಧಿಯನ್ನ ಎಷ್ಟೊತ್ತು ವಿಚಾರಣೆ ಮಾಡಿದ್ದಿರಿ. ಕುಮಾರಸ್ವಾಮಿ ೨೦೦ ಕೋಟಿ ಹಗರಣ ಅಂದಿದ್ದಾರೆ. ಸುಮ್ನೆ ಹೇಳ್ತಾರಾ ಅವರು. ಸರಕಾರ ಜನರ ಕಣ್ಣು ಒರೆಸಲು ಇಂತಹ ಕೆಲಸ ಮಾಡ್ತಾ ಇದೆ. ಮೊದಲಿನಿಂದಲು ನಾವು ಹಿರಿಯ ಅಧಿಕಾರಿ ಬಂಧನ ಆಗಬೇಕು ಅಂತಾ ಹೇಳಿದ್ವಿ. ಸಿಎಂ ಇದಕ್ಕೆ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು. ಗೃಹ ಸಚಿವ ಸದನದಲ್ಲಿ ೬ ಬಾರಿ ನಿಯಮಕ್ಕೆ ಅನುಗುಣವಾಗಿ ನೇಮಕಾತಿ ಆಗಿದೆ ಎಂದಿದ್ದಾರೆ. ಗೃಹ ಸಚಿವರ ಮೇಲೂ ಕೇಸ್ ಹಾಕಿಬೇಕು.
ನಮ್ಮ ಪಕ್ಷದ ಶಾಸಕ ಪ್ರಿಯಾಂಕ್ ಹಗರಣದ ಬಗ್ಗೆ ಗಮನಕ್ಕೆ ತಂದರೆ ನಾಲ್ಕು ಬಾರಿ ನೋಟಿಸ್ ಕೊಟ್ರಿ. ಏನ್ ಹೆದರಿಸ್ತೀರಾ… ಈಗ ಏನಾಯ್ತು…?. ಓಎಮ್ ಆರ್ ಶೀಟ್ ಅನ್ನ ಓಪನ್ ಮಾಡಿ ೨೦ ಮಾರ್ಕ್ಸ್ ತೆಗೆದುಕೊಳ್ಳದವನಿಗೆ ೧೦೦ ಮಾರ್ಕ್ಸ್ ಕೊಟ್ಟಿದ್ದಾರೆ. ದೇಶದಲ್ಲಿ ಇಂತಹದನ್ನ ಎಲ್ಲಾದರೂ ನೋಡಿದ್ದೀರಾ?. ದೇಶದಲ್ಲೇ ಇದು ಅತ್ಯಂತ ಭ್ರಷ್ಟಸರ್ಕಾರ. ಕಾಂಗ್ರೆಸ್ ಇದನ್ನ ಮುಂದಿಟ್ಟು ಹೋರಾಟ ನಡೆಸುತ್ತೆ
ಉಪ್ಪಿನ ಅಂಗಡಿ ಓಪನ್ ಆಗಿತ್ತು. ಅದಕ್ಕೆ ಜನ ಕೊಂಡುಕೊಳ್ಳಲು ಹೋದರು. ಉಪ್ಪಿನ ಅಂಗಡಿ ಓಪನ್ ಮಾಡಿದವರು ಯಾರು?. ಸರ್ಕಾರ ಶಾಮೀಲಾಗಿ ಉಪ್ಪಿನ ಅಂಗಡಿ ಓಪನ್ ಮಾಡಿದವರನ್ನ ಬಂಧಿಸಿಲ್ಲ. ಆದರೆ ಖರೀದಿ ಮಾಡಿದವರನ್ನ ಬಂಧಿಸಿಲ್ಲ. ನಿನ್ನೆ ಹಿರಿಯ ಅಧಿಕಾರಿಯನ್ನ ಬಂಧಿಸಿ ಅರ್ಧ ಗಂಟೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ. ಅವರನ್ನ ಯಾವುದೇ ತನಿಖೆ ಮಾಡಿಲ್ಲ. ಹಿಂದೆ ಯಾರಿದ್ದಾರೆ,ದಾಖಲೆ ಆಗಬೇಕು, ಡಿಕ್ಲರೇಷನ್ ಆಗಬೇಕು. ಏನಾಗಿದೆ ಎಂಬುದರ ವಿಚಾರಣೆ ಮಾಡಿಬೇಕು.ಕಣ್ಣು ಒರೆಸಲು ಸುಮ್ಮನೆ ಬಂಧನ ಮಾಡಲಾಗಿದೆ ಎಂದು ಹರಿಹಾಯ್ದಿದ್ದಾರೆ.