#CBSCinsultwomen ಹ್ಯಾಶ್ ಟ್ಯಾಗ್ ವೈರಲ್ : ಇಂಥ ಅಸಂಬದ್ಧ ಶಿಕ್ಷಣ ಕೊಡಲಾಗಿದೆಯಾ ಎಂದ ಪ್ರಿಯಾಂಕ ಗಾಂಧಿ..!

l

ನವದೆಹಲಿ: ಸೋಷಿಯಲ್ ಮೀಡಿಯಾದಲ್ಲೆಲ್ಲಾ ನಿನ್ನೆ ನಡೆದ ಸಿಬಿಎಸ್ಸಿ ಹತ್ತನೇ ತರಗತಿ ಪ್ರಶ್ನೆ ಪತ್ರಿಕೆಯದ್ದೇ ಚರ್ಚೆ. ಆ ಪ್ರಶ್ನೆ ಪತ್ರಿಕೆಯಲ್ಲಿ ನೀಡಿದ ಆ ಒಂದು ಪ್ರಶ್ನೆಯಿಂದ #CBSCinsultwomen ಅನ್ನೋ ಹ್ಯಾಶ್ ಟ್ಯಾಗ್ ಕೂಡ ಟ್ರೆಂಡಿಂಗ್ ನಲ್ಲಿದೆ. ಕಾರಣ ಆ ಪ್ರಶ್ನೆ ಪತ್ರಿಕೆಯಲ್ಲಿ ಮಹಿಳೆಯರ ಬಗ್ಗೆ ನೀಡಿದ್ದ ಪ್ರಶ್ನೆ.

ಈ ಪ್ರಶ್ನೆ ಪತ್ರಿಕೆಯನ್ನ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಸಂಪೂರ್ಣವಾಗಿ ಶೇರ್ ಮಾಡಿಕೊಂಡಿದ್ದಾರೆ. ಆ ಪ್ರಶ್ನೆ ಪತ್ರಿಕೆಯಲ್ಲಿ ಪ್ರಶ್ನೆಯೊಂದು ಹೀಗಿದೆ. ಮಹಿಳೆಯರಿಗೆ ನೀಡುವ ಸ್ವಾತಂತ್ರ್ಯ ಮಕ್ಕಳ ಪಾಲಕರ ಮೇಲಿನ ಅಧಿಕಾರವನ್ನು ನಾಶ ಮಾಡುತ್ತದೆ ಎಂದು ಜನರ ಗ್ರಹಿಕೆಗೆ ಹಿಂದೆ ಬಿದ್ದಿದೆ. ಒಂದು ಶತಮಾನದ ಹಿಂದೆ ಮಹಿಳೆಯು ಯಜಮಾನನಾಗಿದ್ದ ಪುರುಷನಿಗೆ ಹೇಗೆ ಅಧೀನಳಾಗಿದ್ದಳು ಎಂಬುದು ಪ್ರಶ್ನೆಯ ಸಾರಾಂಶವಾಗಿದೆ. ಅದಕ್ಕೆ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ. ಮಕ್ಕಳಲ್ಲಿ ಅಶಿಸ್ತು ಹೆಚ್ಚಿದ್ದಕ್ಕೆ ಯಾರು ಜವಾಬ್ದಾರರು? 2)ಮನೆಯಲ್ಲಿ ಶಿಸ್ತು ಕುಸಿದಿದೆ 3)ಮನೆಯಲ್ಲಿ ಮಕ್ಕಳ ಮತ್ತು ಸೇವಕರ ಸ್ಥಾನ 4) ಮಗುವಿನ ಸೈಕಾಲಜಿ.

ಈ ರೀತಿಯ ಪ್ರಶ್ನೆ ಹಾಗೂ ಅದಕ್ಕೆ ಕೊಟ್ಟಿರುವ ಆಯ್ಕೆ ವಿಚಾರವಾಗಿ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರಶ್ನೆ ಪತ್ರಿಕೆಯನ್ನು ಶೇರ್ ಮಾಡಿಕೊಂಡಿರುವ ಪ್ರಿಯಾಂಕ ಗಾಂಧಿ, ಇದು ನಂಬಲು ಸಾಧ್ಯವಿಲ್ಲ ! ಇಂಥ ಅಸಂಬದ್ಧ ವಿಚಾರಗಳನ್ನೆಲ್ಲ ಮಕ್ಕಳಿಗೆ ಕಲಿಸಲಾಗುತ್ತಿದೆಯೇ? ಬಿಜೆಪಿ ಸರ್ಕಾರದಕ್ಕೆ ಮಹಿಳೆಯರ ಮೇಲಿರುವ ವಿಮುಖ ದೃಷ್ಟಿಕೋನವನ್ನು ಈ ಪ್ರಶ್ನೆ ಸ್ಪಷ್ಟವಾಗಿ ತೋರಿಸುತ್ತಿದೆ. ಅದಿಲ್ಲದೆ ಇದ್ದರೆ ಸಿಬಿಎಸ್​ಇ ಪ್ರಶ್ನೆ ಪತ್ರಿಕೆಯಲ್ಲಿ ಇಂಥ ವಿಷಯಗಳು ಯಾಕೆ ಬರುತ್ತಿತ್ತು ಎಂದು ಪ್ರಶ್ನಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *