ಬೆಂಗಳೂರಿನಲ್ಲಿ ನಾಳೆ ಸಿಇಟಿ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಜೊತೆಗೆ ನಾಳೆಯೇ ನೂತನ ಸರ್ಕಾರ ರಚನೆ ಮಾಡಲಿದ್ದು, ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಕೂಡ ಇದೆ. ಹೀಗಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಾ ಅಂತ ಶಿಕ್ಷಕರು, ಪೋಷಕರು ಆತಂಕದಲ್ಲಿದ್ದರು. ಆದರೆ ಕೆಇಎ ಯಾವುದೇ ತೊಂದರೆಯಾಗದಂತೆ ಪರಿಹಾರವನ್ನು ಕಂಡು ಕೊಂಡಿದೆ.
ಟ್ರಾಫಿಕ್ ಕಿರಿಕಿರಿಯನ್ನು ತಪ್ಪಿಸಲು ವಿದ್ಯಾರ್ಥಿಗಳಿಗೆ ಬೆಳಗ್ಗೆ 8.30ಕ್ಕೆಲ್ಲಾ ಪರೀಕ್ಷಾ ಕೇಂದ್ರದಲ್ಲಿ ಇರಲು ಸೂಚನೆ ನೀಡಲಾಗಿದೆ. ಒಂದು ವೇಳೆ ಬರುವಂತ ವಿದ್ಯಾರ್ಥಿಗಳಿಗೆ ರಸ್ತೆ ಮಧ್ಯೆಯೆ ಟ್ರಾಫಿಕ್ ಸಮಸ್ಯೆಯೋ, ಮತ್ತೊಂದೋ ಎದುರಾದರೆ ಅಲ್ಲಿಯೇಇರುವ ಸಂಚಾರಿ ಪೊಲೀಸರ ಸಹಾಯ ಕೇಳಲು ಸೂಚನೆ ನೀಡಲಾಗಿದೆ. ಜೊತೆಗೆ ಸಂಚಾರಿ ಪೊಲೀಸರಿಗೂ ಕೆಇಎ ಸಹಾಯದ ಮನವಿ ಮಾಡಿಕೊಂಡಿದೆ.
ಇನ್ನು ಊಟೋಪಚಾರದ ವ್ಯವಸ್ಥೆಯನ್ನು ಮಾಡಲಾಗಿದೆ. ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳಿಗೆ ಬೇರೆ ಯಾವುದೇ ತೊಂದರೆಯಾಗಬಾರದೆಂದು ಕೆಇಎ ಮತ್ತು ಸೆಂಟ್ ಜೋಸೆಫ್ ಪಿಯು ಕಾಲೇಜಿನ ಅಧಿಕಾರಿಗಳು ಊಟದ ವ್ಯವಸ್ಥೆ ಮಾಡಿದ್ದಾರೆ. ಈಗಾಗಲೇ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರದ ಮಾಹಿತಿ ಸೇರಿದಂತೆ, ಕೆಲವೊಂದು ಸೂಚನೆಗಳನ್ನು ನೀಡಲಾಗಿದೆ.
ಸಂಚಾರ ನಿಯಂತ್ರಣ ಕೋಣೆ ದೂರವಾಣಿ ಸಂಖ್ಯೆ-080-22943131 ಅಥವಾ 080-22943030 ಗೆ ಕರೆ ಮಾಡಿ ಮಾಹಿತಿ ನೀಡಲು ಸೂಚನೆ ನೀಡಲಾಗಿದೆ. ಪರೀಕ್ಷೆಗೆ ಬರಲು ಸಮಸ್ಯೆಯಾದಲ್ಲಿ ಈ ನಂಬರ್ ಗೆ ಕರೆಮಾಡಿ ಸಹಾಯ ಪಡೆಯಬಹುದಾಗಿದೆ.