ಶಿವಮೊಗ್ಗ : ಧ್ವನಿವರ್ಧಕ ನಿಲ್ಲಿಸದೆ ಇದ್ದರೆ ಭಜನೆ ಮಾಡುವ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದು, ಶಬ್ಧದ ಬಗ್ಗೆ ಎಲ್ಲಾ ಮಸೀದಿಗಳಿಗೆ ಗೊತ್ತಿದೆ. ಚರ್ಚ್ ಗಳಿಗೂ, ದೇವಸ್ಥಾನಗಳಿಗೂ ಗೊತ್ತಿದೆ. ಭಾರೀ ದೊಡ್ಡ ಪ್ರಮಾಣ ಶಬ್ಧ ಆಗಬಾರದು, ಅಕ್ಕಪಕ್ಕದವರಿಗೂ ತೊಂದರೆಯಾಗಬಾರದು ಎಂಬ ಕಾರಣಕ್ಕೆ ದೇವಸ್ಥಾನಕ್ಕೂ ಕೊಟ್ಟಿದೆ. ಪೂಜೆ ನಡೆಯಬಾರದು ಎಂಬ ಅರ್ಥವಲ್ಲ. ಅದೊಂದು ವ್ಯವಸ್ಥಿತ ಅಷ್ಟೆ ವಿನಃ ಬೇರೆ ದುರುದ್ದೇಶ ಅಲ್ಲ.
ಸೌಂಡ್ ಪೊಲಿಷನ್ ನ ಕಂಟ್ರೋಲ್ ಮಾಡೋದು. ಇಷ್ಟೆ ಡೆಸಿಬಲ್ ಇರಬೇಕು ಅಂತ ನಿಯಂತ್ರಣ ಮಾಡಲು ಹೇಳಿದ್ದಷ್ಟೇ ಬೇರೆ ಏನು ಉದ್ದೇಶ ಅಲ್ಲ. ಅದನ್ನು ಕಂಟ್ರೋಲ್ ಮಾಡುತ್ತೇವೆ. ಈ ಬಗ್ಗೆ ಪ್ರತಿಭಟನೆ ಮಾಡಲು ಹೊರಟಿದ್ದಾರೆ ಎಂದಾಗ ನೋಡಣಾ ಎಂದಿದ್ದಾರೆ.
ಅವರನ್ನು ಕರೆದುಕೊಂಡು ಬಂದು ಸಿಸಿ ಕ್ಯಾಮೆರಾದಲ್ಲಿ ಮುಖ ತೋರಿಸುತ್ತಾರೆ. ನೀನೆಪ್ಪ ಇದು ಅಂತ. ಇಷ್ಟು ಸ್ಪಷ್ಟ ಅಂತು ಇದೆ. ಹಾಗಾಗಿ ಕಾಂಗ್ರೆಸ್ ಮುಖಂಡರನ್ನು, ಬಿಜೆಪಿ ಮುಖಂಡರನ್ನ, ಇನ್ನೊಂದ್ ಮುಖಂಡರು ಇಲ್ಲ. ಯಾರು ಆ ದೊಂಬಿಯಲ್ಲಿ, ಗಲಾಟೆಯಲ್ಲಿ ಕಾನೂನನ್ನು ಕೈಗೆ ಎತ್ತಿಕೊಂಡಿದ್ದರೋ, ಅವರೆಲ್ಲರನ್ನು ಬಂದೋಬಸ್ತ್ ಮಾಡುತ್ತಾರೆ. ಇದರಲ್ಲಿ ಕಾಂಗ್ರೆಸ್ ನಾಯಕರಾಗಲಿ, ಇನ್ಯಾರೆ ಆಗಲಿ ರಿಯಾಯಿತಿ ನೀಡಲು ಆಗುವುದಿಲ್ಲ.
ವಿರೋಧ ಪಕ್ಷದವರು ಎಂದ ಕೂಡಲೇ ಜೈಲಿಗೆ ಹಾಕಿಸಲು ಆಗುವುದಿಲ್ಲ. ಪೊಲೀಸರು ಯಾವ ಕ್ರಮ ತೆಗೆದುಕೊಳ್ಳಬೇಕಾಗಿತ್ತೋ ಅದನ್ನು ಮಾಡ್ತಾ ಇದ್ದಾರೆ. ಇವರು ಅನವಶ್ಯಕವಾಗಿ ಗಲಾಟೆ ಮಾಡುವ ವ್ಯಕ್ತಿಗಳಿಗೆ ಸಪೋರ್ಟ್ ಮಾಡುವ ದೃಷ್ಟಿಯಿಂದ ಈ ತರದ್ದೆಲ್ಲ ಮಾಡ್ತಾರೆ. ತನಿಖೆ ಹಾದಿ ತಪ್ಪಿಸುವಂತದ್ದು ಕಾಂಗ್ರೆಸ್ ನವರು ಮಾಡುತ್ತಿದ್ದಾರೆ. ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಲ್ಲ ಎಂದಿದ್ದಾರೆ.