ಬೆಂಗಳೂರು: ಅಪ್ಪು ಅವರು ಎಲ್ಲರನ್ನ ಅಗಲಿ ಒಂದು ತಿಂಗಳ ಮೇಲಾಗಿದೆ. ಆದ್ರೆ ಅವರು ಯಾವಾಗಲೂ ನಮ್ಮ ನಡುವೆಯೇ ಇದ್ದಾರೇನೋ ಅನ್ನಿಸುತ್ತೆ. ಕಲೆಯಲ್ಲಿ ಜೀವಂತವಾಗಿರುವ ಅಪ್ಪು ಅವರ ಜೀವನ ಚರಿತ್ರೆಯನ್ನ ಪುಸ್ತಕ ರೂಪದಲ್ಲಿ ತರಲು ಸಜ್ಜಾಗಿದೆ ಅಲ್ಲೊಂದು ಬಳಗ.

ಅಪ್ಪು ಅಮರ ಬಯೋಗ್ರಫಿ ರೆಡಿ ಮಾಡಲು ಭದ್ರಾವತಿ ರಾಮಾಚಾರಿ ಹಾಗು ಅಪ್ಪು ವೆಂಕಟೇಶ್ ಸಿದ್ಧತೆ ನಡೆಸಿದ್ದಾರೆ. ತೆರೆ ಮೇಲಷ್ಟೇ ನೋಡಿರುವ ಅಪ್ಪು ಅವರ ಗೊತ್ತಿಲ್ಲದ ಸಂಗತಿಗಳನ್ನ ಪುಸ್ತಕ ರೂಪದಲ್ಲಿ ಹೊರತರೋಕೆ ಪ್ಲಾನ್ ಮಾಡಿದ್ದಾರೆ. ಅಪ್ಪು ಅಮರ ಹೆಸರಿನಲ್ಲಿ ಪುಸ್ತಕ ರೆಡಿಯಾಗ್ತಿದೆ.

ಈಗಾಗ್ಲೆ ಭದ್ರಾವತಿ ರಾಮಾಚಾರಿ ಹಾಗು ಅಪ್ಪು ವೆಂಕಟೇಶ್ ಅವರು ರಾಘವೇಂದ್ರ ರಾಜಕುಮಾರ್ ರನ್ನು ಭೇಟಿಯಾಗಿದ್ದಾರೆ. ಅವರಿಂದ ಹಿನ್ನುಡಿ ಬರೆಯಲು ಮನವಿ ಮಾಡಿದ್ದಾರೆ. ಜೊತೆಗೆ ದೊಡ್ಡರಂಗೇಗೌಡರು ಬರೆದಿರುವ ಅಪ್ಪು ಕುರಿತ ಹಾಡು ಪುಸ್ತಕದಲ್ಲಿ ಮುದ್ರಣ ಮಾಡಲು ಹೊರಟಿದ್ದಾರೆ. ಕನ್ನಡದ ಖ್ಯಾತ ನಟ ನಟಿಯರ ಜತೆ ಮಾತನಾಡಿ, ಅವರ ಅನುಭವ, ಅಭಿಪ್ರಾಯಗಳನ್ನು ದಾಖಲಿಸಲಿದ್ದಾರೆ. 500 ಪುಟಗಳಿರುವ ಪುಸ್ತಕ ಇದಾಗಲಿದೆ.

