Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ವಿಧ್ಯಾಭ್ಯಾಸ ಮುಂದುವರೆಸಲು ಅಮೆರಿಕಾಗೆ ಹೊರಟ ಅಪ್ಪು ಮೊದಲ ಪುತ್ರಿ..!

Facebook
Twitter
Telegram
WhatsApp

ಬೆಂಗಳೂರು: ಅಕ್ಟೋಬರ್ 29 ಈ ದಿನಾಂಕ ಕನ್ನಡಿಗರ ಪಾಲಿನ ಕರಾಳ ದಿನ. ಯಾರು ಯಾವತ್ತಿಗೂ ಮರೆಯೋದಕ್ಕೆ ಸಾಧ್ಯವಿಲ್ಲ. ಯಾಕಂದ್ರೆ ಕನ್ನಡಿಗರ ರಾಜಕುಮಾರನನ್ನ ಕಳೆದುಕೊಂಡ ದಿನವದು. ಅಂದು ಇಡೀ ಕರುನಾಡು ಸೂತಕದ ಮನೆಯಂತಿತ್ತು. ಎಲ್ಲೋ ದೂರದ ದೇಶದಲ್ಲಿದ್ದ ಮಗಳಿಗೆ ಅಪ್ಪನ ಸಾವಿನ ಸುದ್ದಿ ಗರ ಬಡಿದಂತೆ ಮಾಡಿತ್ತು.

ಅಪ್ಪನ ಆಸೆಯಂತೆ ಓದಲು ಅಮೆರಿಕಾಗೆ ಹೋಗಿದ್ದ ಅಪ್ಪು ಮೊದಲ ಪುತ್ರಿ ದೃತಿ, ಅಪ್ಪ ಸಾವಿನ ಸುದ್ದಿ ಕೇಳಿ ಅಂದು ಅಮೆರಿಕಾದಿಂದ ಒಬ್ಬರೇ ಬೆಂಗಳೂರಿನವರೆಗೆ ಪಯಣ ಬೆಳೆಸಿ ಬಂದಿದ್ದರು. ಆ ನೋವು, ದುಃಖದ ಕಟ್ಟೆ ಹೊಡೆದಿದ್ದು ಅಪ್ಪು ಮಲಗಿದ್ದನ್ನ ನೋಡಿದಾಗ. ಮಗಲಕ ಬರುವಿಕೆಗಾಗಿ ಕಾದಿದ್ದ ಕುಟುಂಬ ಅಪ್ಪು ನಿಧನರಾದ ಮೂರನೇ ದಿನಕ್ಕೆ ಅಂತ್ಯಸಂಸ್ಕಾರವನ್ನು ಮಾಡಿ‌ ಮುಗಿಸಿದ್ರು.

ಅಪ್ಪನ ಹನ್ನೊಂದನೇ ಪುಣ್ಯ ಕಾರ್ಯದ ಸಲುವಾಗಿ ದೃತಿ ಬೆಂಗಳೂರಲ್ಲೇ ಉಳಿದುಕೊಂಡಿದ್ದರು. ಪುಣ್ಯ ಕಾರ್ಯ, ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಎಲ್ಲಾ ಕಾರ್ಯ ಮುಗಿದಿದೆ. ಅಪ್ಪನಿಲ್ಲದ ದುಃಖದ ಭಾರವನ್ನ ಮನಸ್ಸಿನಲ್ಲೇ ಹೊತ್ತಿಕೊಂಡು, ಅಮ್ಮನಿಗೆ ಸಮಾಧಾನ ಮಾಡಿ ಧೃತಿ ಅಪ್ಪನ ಆಸೆಯಂತೆ ಮತ್ತೆ ಅಮೆರಿಕಾಗೆ ಹೊರಟಿದ್ದಾರೆ.

ಇಂದು ಅಶ್ವಿನಿ ಪುನೀತ್ ರಾಜ್‍ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಮಗಳಿಗೆ ಧೈರ್ಯ ತುಂಬಿ ಏರ್ಪೋರ್ಟ್ ಗೆ ಬಿಟ್ಟು ಬಂದಿದ್ದಾರೆ. ಬರುವಾಗ ಅಪ್ಪ ಇಲ್ಲ ಅನ್ನೋ ನೋವು.. ಈಗ ಹೋಗುವಾಗಲೂ ಅಪ್ಪ ಇನ್ನಿಲ್ಲ ಅನ್ನೋ ನೋವು ದೃತಿಯನ್ನ ಕಾಡುತ್ತಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮನು ಕುಲದ ಆಯಸ್ಸನ್ನು ಹೆಚ್ಚಿಸಿದ್ದು ವೈದ್ಯರು: ಸಿ.ಎಂ.ಸಿದ್ದರಾಮಯ್ಯ ಪ್ರಶಂಸೆ

ಮೈಸೂರು ಸೆ 28 : ವೈದ್ಯರು ಮತ್ತು ವೈದ್ಯಕೀಯ ಕ್ಷೇತ್ರ ಮನುಕುಲದ ಆಯಸ್ಸನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ ಎಂದು ಸಿ.ಎಂ.ಸಿದ್ದರಾಮಯ್ಯ ಪ್ರಶಂಸೆ ವ್ಯಕ್ತಪಡಿಸಿದರು.   ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಶತಮಾನೋತ್ಸವದ ಸಮಾರೋಪ

ಈ ಬಾರಿಯ ಬಿಗ್ ಬಾಸ್ ಗೆ ಹೋಗ್ತಿದ್ದಾರೆ ಈ ಸ್ಟಾರ್ ಗಳು : ಕನ್ಫರ್ಮ್ ಸುದ್ದಿ ಇದು..!

ಬೆಂಗಳೂರು : ಬಿಗ್ ಬಾಸ್ ಕನ್ನಡ‌ ಸೀಸನ್ 11ಗೆ ಕ್ಷಣಗಣನೆ ಶುರುವಾಗಿದೆ. ಬಿಗ್ ಬಾಸ್ ಮನೆಯೊಳಗೆ ಹೋಗೋದು ಯಾರು ಎಂಬ ಕುತೂಹಲ ಇಡೀ ಕರ್ನಾಟಕದ ಜನತೆಗೆ ಇದೆ. ಇಂದು ಸಂಜೆ ಅದಕ್ಕೆ ಕೊಂಚ ತೆರೆ

ಅಜೀಂ ಪ್ರೇಮ್‍ಜಿ ಫೌಂಡೇಶನ್ ಕಾರ್ಯ ಪ್ರಪಂಚಕ್ಕೆ ಮಾದರಿ: ಕೆ.ರಾಜಶೇಖರ ಹಿಟ್ನಾಳ

  ಸುದ್ದಿಒನ್, ಕೊಪ್ಪಳ, ಸೆಪ್ಟೆಂಬರ್. 28 : ಅಜೀಂ ಪ್ರೇಮ್‍ಜಿ ಫೌಂಡೇಶನ ಮಾಡುತ್ತಿರುವ ಸೇವಾ ಕಾರ್ಯವು ಪ್ರಪಂಚಕ್ಕೆ ಮಾದರಿಯಾಗಿದೆ ಎಂದು ಲೋಕಸಭಾ ಸದಸ್ಯರಾದ ಕೆ.ರಾಜಶೇಖರ ಹಿಟ್ನಾಳ ಹೇಳಿದರು. ಅವರು ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಅಜೀಂ ಪ್ರೇಮ್‍ಜಿ

error: Content is protected !!