Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಪ್ಪು ಹುಟ್ಟುಹಬ್ಬ : ಅಭಿಮಾನಿಗಳಿಗೆ ಒಂದು ಕಡೆ ಸಂಭ್ರಮ.. ಮತ್ತೊಂದು ಕಡೆ ಅಪ್ಪು ಇಲ್ಲದ ಬೇಸರ..!

Facebook
Twitter
Telegram
WhatsApp

 

 

ಇಂದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಹುಟ್ಟುಹಬ್ಬ. 48ನೇ ವರ್ಷದ ಹುಟ್ಟುಹಬ್ಬ. ಅವರಿಲ್ಲದೆ ಅಭಿಮಾನಿಗಳೇ ಆಚರಿಸುತ್ತಿರುವ ಎರಡನೇಯ ಹುಟ್ಟುಹಬ್ಬ. ವಿಧಿಯ ಕರೆಗೆ ಅಪ್ಪು ಹೊರಟು ಹೋಗಿ ಒಂದು ವರ್ಷದ ಮೇಲಾಯ್ತು. ಆದ್ರೆ ಅಭಿಮಾನಿಗಳು ಅವರಿಗಾಗಿ ತಮ್ಮ ಅಭಿಮಾನವನ್ನು ಮರೆತಿಲ್ಲ. ಅವರ ಸಮಾಧಿಯ ಬಳಿಯೇ ಅವರನ್ನು ಕಾಣುತ್ತಿದ್ದಾರೆ.

ನಿನ್ನೆ ಮಧ್ಯರಾತ್ರಿಯಿಂದಾನೇ ಅಪ್ಪು ಅಭಿಮಾನಿಗಳು ಅವರ ಸಮಾಧಿ ಬಳಿ ತೆರಳಿ ಪೂಜೆ ಸಲ್ಲಿಸಿದ್ದಾರೆ. ಫಲ, ಪುಷ್ಪಗಲನ್ನು ತಂದು ಅಪ್ಪು ಅವರ ಬಳಿ ಇಟ್ಟು, ನಮಸ್ಕಾರ ಮಾಡಿ, ಶುಭಕೋರುತ್ತಿದ್ದಾರೆ. ಇನ್ನು ಬೆಳಗ್ಗೆ ಕೂಡ ಅಭಿಮಾನಿಗಳೆಲ್ಲ ಸಮಾಧಿ ಬಳಿ ಸಾಲುಗಟ್ಟಿ ನಿಂತಿದ್ದಾರೆ.

ಕುಟುಂಬಸ್ಥರು ಈಗಾಗಲೇ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಜೊತೆಗೆ ಅಪ್ಪು ಅಭಿಮಾನಿಗಳಿಗಾಗಿ ಗಿಡಗಳನ್ನು ನೀಡುತ್ತಿದ್ದಾರೆ. ಅಪ್ಪು ಸಮಾಧಿಗೆ ಬಂದು ಪೂಜೆ ಸಲ್ಲಿಸಿ, ರಾಜ್‍ಕುಮಾರ್ ಅವರ ಸಮಾಧಿ ಬಳಿ ಬಂದು ಗಿಡಗಳನ್ನು ತೆಗೆದುಕೊಂಡು ಸಾಗುತ್ತಿದ್ದಾರೆ. ಸುಮಾರು ಹತ್ತು ಸಾವಿರ ಗಿಡಗಳನ್ನು ದೊಡ್ಮನೆ ಕುಟುಂಬ ಹಂಚಿಕೆ ಮಾಡ್ತಾ ಇದೆ.

ಆದ್ರೆ ಅಪ್ಪು ಕಳೆದುಕೊಂಡು ಒಂದು ವರ್ಷ ನಾಲ್ಕು ತಿಂಗಳು. ಆ ನೋವಿನಲ್ಲಿಯೇ ಕರ್ನಾಟಕದ ಜನತೆ ದಿನದೂಡಿ ಬಿಟ್ಟರು. ಆದರೂ ಅಪ್ಪು ನಮ್ಮೊಂದಿಗಿಲ್ಲ ಅಂತ ಅನ್ನಿಸೋದೆ ಇಲ್ಲ. ಅವರ ಸಿನಿಮಾ, ಅವರ ಮಾತುಗಳೇ ಎಲ್ಲರಿಗೂ ಸ್ಪೂರ್ತಿ. ಅವರ ಸಮಾಧಿ ನೋಡಿದಾಗ, ಅವರ ಫೋಟೋಗೆ ಹಾರ ಹಾಕಿರುವುದನ್ನು ನೋಡಿದಾಗಲೇ ಅಪ್ಪು ಇಲ್ಲ ಎಂಬ ಬೇಸರ ಕಾಡುತ್ತೆ. ಜೊತೆಗಿರದ ಜೀವ ಎಂದಿಗಿಂತ ಜೀವಂತ ಎಂಬ ಮಾತಿನಂತೆ ಸದಾ ಅಭಿಮಾನಿಗಳ ಮನದಲ್ಲಿ ಜೀವಂತವಾಗಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕನ್ನಡ ಭಾಷೆಗೆ ಮೊದಲ ಪ್ರಾಶಸ್ತ್ಯ ನೀಡಿ : ಲೇಖಕ ಯೋಗೀಶ್ ಸಹ್ಯಾದ್ರಿ

  ಸುದ್ದಿಒನ್, ಚಿತ್ರದುರ್ಗ, ನ. 23 : ಕನ್ನಡಿಗರು ಎಷ್ಟೇ ಭಾಷೆಗಳನ್ನು ಕಲಿತರೂ ಕನ್ನಡಕ್ಕೆ ಮೊದಲ ಪ್ರಾಶಸ್ತ್ಯ ನೀಡಬೇಕು. ಭಾರತದ ನೆಲದಲ್ಲಿ ಕನ್ನಡ ಭಾಷೆಗೆ ತನ್ನದೇ ಆದ ವಿಶಿಷ್ಟ ಸ್ಥಾನಮಾನವಿದೆ ಎಂದು ಲೇಖಕ ಹಾಗೂ

ಚಿತ್ರದುರ್ಗ | ನವೆಂಬರ್ 28 ರಂದು ಸೀರೆಗಳು, ಕರಕುಶಲ ಹಾಗೂ ಅಲಂಕಾರಿಕ ವಸ್ತುಗಳ ಮಾರಾಟ ಮೇಳ…!

  ಸುದ್ದಿಒನ್, ಚಿತ್ರದುರ್ಗ, ನವೆಂಬರ್. 24 : ಅರ್ಬನ್ ಇಂಡಿಯಾ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ನಗರದ ಹೋಟೆಲ್ ದುರ್ಗದ ಸಿರಿಯಲ್ಲಿ ನವೆಂಬರ್ 28ರಂದು ಆಯೋಜಿಸಿದ್ದು, ವಿವಿಧ ರಾಜ್ಯಗಳ ಸೀರೆಗಳು, ಕರಕುಶಲ ಹಾಗೂ

ಹೀಟರ್ ಬಳಸದೆಯೇ‌ಚಳಿಗಾಲದಲ್ಲಿ ಮನೆಯನ್ನು ಬೆಚ್ಚಗಿರುವಂತೆ ಮಾಡಬಹುದು..!

ಈ ವರ್ಷ ಮುಂಗಾರು ಹಾಗೂ ಹಿಂಗಾರು ಮಳೆ ಅತ್ಯಧಿಕವಾಗಿ ಸುರಿದ ಪರಿಣಾಮ ಈ ಬಾರಿ ಚಳಿಯೂ ಜಾಸ್ತಿ ಇರಲಿದೆ. ಕಳೆದ ವರ್ಷಕ್ಕಿಂತ ಅತ್ಯಧಿಕವಾಗಿರಲಿದೆ. ಈಗಾಗಲೇ ಚಳಿಗಾಲ ಶುರುವಾಗಿದೆ ಕೂಡ. ಚಳಿಗಾಲದಲ್ಲಿ ಮನೆಯೆಲ್ಲಾ ತಂಪಾಗಿರುತ್ತದೆ. ಕೆಲವೊಬ್ಬರಿಗೆ

error: Content is protected !!