ಬೆಂಗಳೂರು: ಅಷ್ಟು ದೊಡ್ಡ ನಟ.. ಸರಳ ಸಜ್ಜನಿಕೆಗೆ ಹೆಸರಾದ ಅಪ್ಪು.. ನಿನ್ನೆಯೆಲ್ಲಾ ಓಡಾಡಿಕೊಂಡಿದ್ದವರು ಇಂದು ಇಲ್ಲ.. ಇದನ್ನ ಯಾರಿಗೂ ಅರಗಿಸಿಕೊಳ್ಳಲಾಗ್ತಾ ಇಲ್ಲ ಅನ್ನೋದು ಎಷ್ಟು ಸತ್ಯವೋ, ಅವರಿಲ್ಲ ಅನ್ನೋದು ಅಷ್ಟೇ ಸತ್ಯ. ಆದ್ರೆ ಅಪ್ಪುಗೆ ಏನಾಯ್ತು..? ಯಾಕೆ ಅಷ್ಟು ಅವಸರವಾಗಿ ಉಸಿರು ನಿಲ್ತು ಅನ್ನೋ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಅವರನ್ನ ಪರೀಕ್ಷಿಸಿದ ವೈದ್ಯರು ಆ ಬಗ್ಗೆ ವಿವರಣೆ ನೀಡಿದ್ದಾರೆ.

ರಮಣ ರಾವ್ ಹಲವು ವರ್ಷಗಳಿಂದಲೂ ಡಾ. ರಾಜ್ ಕುಮಾರ್ ಕುಟುಂಬದ ವೈದ್ಯರಾಗಿದ್ದಾರೆ. ಅಪ್ಪು ನಿಧನದ ಸುದ್ದಿ ಕೇಳಿ ಅವರಿಗೂ ಶಾಕ್ ಆಗಿದೆ. ನಿನ್ನೆ ಬೆಳಗ್ಗೆ 11.15ಕ್ಕೆ ಅಶ್ವಿನಿ ಹಾಗೂ ಪುನೀತ್ ಇಬ್ಬರು ಆಸ್ಪತ್ರೆಗೆ ಬಂದಿದ್ದರು. ನಡೆದುಕೊಂಡೆ ಬಂದಿದ್ದರು. ಜಿಮ್ ಮಾಡಿದ್ದೇನೆ ಅಂದಿದ್ರು. ತಕ್ಷಣ ಇಸಿಜಿ ಮಾಡಿದಾಗ ಎಲ್ಲವು ನಾರ್ಮಲ್ ಇತ್ತು.

ಆದ್ರೆ ಆ ವೇಳೆ ಪುನೀತ್ ತುಂಬಾ ಬೆವರುತ್ತಿದ್ದರು. ಕೇಳಿದಾಗ ವರ್ಕೌಟ್ ಮಾಡಿದ್ದೇನಲ್ಲ ಅದಕ್ಕೆ ಎಂದಿದ್ದರು. ಅಪ್ಪು ಬೆವರುತ್ತಿದ್ದಕ್ಕೆ ವಿಕ್ರಂ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹೆರಳಿದ್ದೆ. ಅದರಂತೆ ಅಶ್ವಿನಿ ಆಸ್ಪತ್ರೆಗೆ ಕೃದುಕೊಂಡು ಹೋದ್ರು. ಅಷ್ಟರಲ್ಲಿ ಆಸ್ಪತ್ರೆಯಲ್ಲಿ ಎಲ್ಲರೂ ಅಲರ್ಟ್ ಆಗಿದ್ರು. ಚಿಕಿತ್ಸೆ ಕೊಡೋದಕ್ಕೆ ಸಿದ್ಧತೆ ಮಾಡಿಕೊಂಡಿದ್ರು. ಅವರ ಹಿಂದೆಯೇ ಆಸ್ಪತ್ರೆಗೆ ಹೊರಟಿದ್ದೆ. ಆದ್ರೆ ಅಪ್ಪು ಇನ್ನಿಲ್ಲ ಎಂಬ ಮಾತು ಕೇಳಿ ಶಾಕ್ ಆಯ್ತು ಎಂದು ಮನದ ನೋವನ್ನ ತೋಡಿಕೊಂಡಿದ್ದಾರೆ.


