ಬೆಂಗಳೂರು: ಅಪ್ಪು ಅವರ ಸೋಷಿಯಲ್ ಮೀಡಿಯಾ ಫಾಲೋ ಮಾಡ್ತಿದ್ದವರಿಗೆ ಆ ಪ್ರಾಜೆಕ್ಟ್ ನ ಅರಿವಿದ್ದೆ ಇರುತ್ತೆ. ಅಪ್ಪು ನಿಧನದ ಬಳಿಕವೂ ಆ ಪೋಸ್ಟರ್ ನೋಡಿ ಎಲ್ಲರಿಗೂ ನೋವು ಕಾಡಿತ್ತು. ಯಾಕಂದ್ರೆ ನವೆಂಬರ್ 1ಕ್ಕೆ ಆ ಪ್ರಾಜೆಕ್ಟ್ ಅನೌನ್ಸ್ ಮಾಡೋದಾಗಿ ಪೋಸ್ಟ್ ಹಾಕಿದ್ರು. ಆದ್ರೆ ವಿಧಿ ಬೇರೆಯದ್ದೇ ಆಟ ಆಡಿತ್ತು. ಈಗ ಆ ಕನಸನ್ನ ಅಶ್ವಿನಿ ಪುನೀತ್ ರಾಜ್ ಕುಮಾರ್ ನನಸು ಮಾಡಿದ್ದಾರೆ.
ಅಪ್ಪು ಇನ್ನಿಲ್ಲ ಅನ್ನೋ ನೋವು ಅಶ್ವಿನಿ ಅವರನ್ನ ಬೆಂಬಿಡದೆ ಕಾಡುತ್ತಿದೆ. ಆದ್ರೆ ಆ ನೋವಿನಲ್ಲೂ ಅವರ ಕನಸುಗಳಿಗೆ ನೀರೆರೆಯುತ್ತಿದ್ದಾರೆ. ಹೀಗಾಗಿನೇ ಗಂಧದಗುಡಿ ಪ್ರಾಜೆಕ್ಟ್ ಅನ್ನ ಬಿಡುಗಡೆ ಮಾಡಿದ್ದಾರೆ. ಗಂಧದಗುಡಿಯ ಡಾಕ್ಯುಮೆಂಟರಿ ಟೀಸರ್ ಇಂದು ರಿಲೀಸ್ ಆಗಿದೆ.
ಅಪ್ಪುಗೆ ಸುತ್ತಾಡೋದು ಅಂದ್ರೆ ಇಷ್ಟ. ಪ್ರಕೃತಿ, ಅದರೊಳಗಿರುವ ಪ್ರಾಣಿ ಪಕ್ಷಿಗಳ ವೈಶಿಷ್ಟ್ಯತೆಯನ್ನ ಡಾಕ್ಯುಮೆಂಟರಿ ಮಾಡುವ ಕನಸನ್ನ ಹೊತ್ತಿದ್ದರು. ಅದರಂತೆ ಎಲ್ಲಾ ಶೂಟಿಂಗ್ ಕೂಡ ಮುಗಿದಿತ್ತು. ಇದೀಗ ಅದರ ಟೀಸರ್ ರಿಲೀಸ್ ಆಗಿದ್ದು, ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದೆ.