ಆಯೋಗಕ್ಕೆ ನ್ಯಾಯಮೂರ್ತಿ ನೇಮಕ : ಮಾದಿಗ ಸಮುದಾಯಕ್ಕೆ ಆತಂಕ ಬೇಡ : ಸಿಎಂ ಭರವಸೆ

suddionenews
2 Min Read

 

 

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 07 : ಆಂಜನೇಯ ನಿನ್ಯಾಕೆ ಚಿಂತೆ ಮಾಡ್ತಿಯಾ, ನನ್ನ ಮೇಲೆ ನಂಬಿಕೆ ಇಲ್ವಾ, ನನಗೆ ರಾಜಕಾರಣಕ್ಕಿಂತಲೂ ಸಾಮಾಜಿಕ ನ್ಯಾಯ ಮುಖ್ಯ. ನಿನಗೆ ಗೊತ್ತು ತಾನೇ? ಒಳಮೀಸಲಾತಿ ಜಾರಿಗೊಳಿಸಿಯೇ ಸಿದ್ಧ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದ್ದಾರೆ.

 

ಸಂಡೂರು ವಿಧಾನಸಭಾ ಕ್ಷೇತ್ರದ ಚೋರನೂರು ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸಂದರ್ಭ ಸಿಎಂ ಸಿದ್ದರಾಮಯ್ಯ ನನ್ನೊಂದಿಗೆ ಚರ್ಚೆ ನಡೆಸಿದ ವೇಳೆ ಈ ಭರವಸೆ ನೀಡಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 

ಆದಿಜಾಂಬ ಸಮುದಾಯಕ್ಕೆ ಆತಂಕ ಬೇಕಿಲ್ಲ. ನಿನಗೂ ಅಷ್ಟೇ. ಒಳಮೀಸಲಾತಿ ಜಾರಿಗೊಳಿಸುವುದು ನನ್ನ ಬದ್ಧತೆ ಆಗಿದೆ. ಆದ್ದರಿಂದಲೇ ಒಳಮೀಸಲಾತಿ ಜಾರಿಗೊಳಿಸಿದ ಸಂದರ್ಭ ಯಾವುದೇ ರೀತಿ ಕಾನೂನು ತೊಡಕು ಆಗದ ರೀತಿ ಎಚ್ಚರಿಕೆ ಹೆಜ್ಜೆ ಇಡಲು ದಿಟ್ಟ ಕ್ರಮಕೈಗೊಂಡಿದ್ದೇನೆ ಎಂದು ಹೇಳಿದ್ದಾರೆ.
ಆದ್ದರಿಂದಲೇ ದತ್ತಾಂಶ ಪಡೆಯಲು ಆಯೋಗ ರಚಿಸಲು ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆಯಲಾಗಿದೆ. ಆಯೋಗಕ್ಕೆ ನ್ಯಾಯಮೂರ್ತಿ ನೇಮಕ ವಿಳಂಬ ಆಗಿಲ್ಲ. ನಾಳೆಯೇ ನ್ಯಾಯಮೂರ್ತಿಯೊಬ್ಬರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡುವೆ. ಈ ವಿಷಯದಲ್ಲಿ ಯಾಕಪ್ಪ ನಿನಗೆ ಆತಂಕ ಎಂದು ಪ್ರಶ್ನೀಸಿದರು ಎಂದು ಆಂಜನೇಯ ತಿಳಿಸಿದ್ದಾರೆ.

 

ಎಸ್‍ಸಿಎಸ್‍ಪಿ, ಟಿಎಸ್‍ಪಿ ಕಾಯ್ದೆ ಜಾರಿಗೆ ತಂದಿದ್ದು, ಕಾಮಗಾರಿ ಗುತ್ತಿಗೆಯಲ್ಲಿ ಎಸ್ಸಿ, ಎಸ್ಟಿಗೆ ಮೀಸಲಾತಿ ಜಾರಿಗೊಳಿಸಿದ್ದು ಯಾರೂ? ನಾನೇ ತಾನೇ. ಅದೇ ರೀತಿ ಒಳಮೀಸಲಾತಿಯನ್ನು ನಾನೇ ಜಾರಿಗೊಳಿಸುವೇ ಎಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

 

ಕಾಂಗ್ರೆಸ್ ಪಕ್ಷ ಎಲ್ಲ ವರ್ಗದ ಬಡವರ ಪರ ಆಡಳಿತ ನಡೆಸುತ್ತದೆ. ಅದರಲ್ಲೂ ನಾವೇ ಪ್ರಾಣಾಳಿಕೆಯಲ್ಲಿ ಹೇಳಿದ ಭರವಸೆ ಈಡೇರಿಸುವುದು ನಮ್ಮ ಪ್ರಥಮ ಆದ್ಯತೆ, ಬದ್ಧತೆ ಆಗಿದೆ. ಆದ್ದರಿಂದ ಆದಿಜಾಂಬವ ಸಮುದಾಯ ಯಾವುದೇ ರೀತಿ ಸಂಶಯ ಪಡುವುದು ಬೇಡ ಎಂದಿದ್ದಾರೆ ಎಂದು ಹೇಳಿದ್ದಾರೆ.

 

ರಾಜಕೀಯ ಕಾರಣಕ್ಕೆ, ಚುನಾವಣೆಯಲ್ಲಿ ಮತಗಳಿಕೆಗಾಗಿ ವಿಪಕ್ಷದವರು ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಾರೆ. ಅದಕ್ಕೆಲ್ಲ ಗಮನ ಕೊಡುವುದು ಬೇಡ. ನನ್ನ ಮತ್ತು ಕಾಂಗ್ರೆಸ್ ಆಡಳಿತದಲ್ಲಿ ಅಹಿಂದ ವರ್ಗಕ್ಕೆ ಸದಾ ಒಳಿತನ್ನೇ ಮಾಡಲಾಗಿದೆ. ಮುಂದೆಯೂ ಮಾಡುತ್ತೇವೆ. ಎಂತಹ ಷಡ್ಯಂತ್ರ ನಡೆಸಿದರೂ ನಾನು ಹಾಗೂ ನನ್ನ ಕಾಂಗ್ರೆಸ್ ಪಕ್ಷ ನೊಂದ ಜನರ ಪರ ಕಾನೂನು, ಯೋಜನೆ ರೂಪಿಸುವಲ್ಲಿ ಹೆಜ್ಜೆ ಹಿಂದಿಡುವುದಿಲ್ಲ. ಈಗಾಗಲೇ ಉದ್ಯೋಗ ನೇಮಕಾತಿಗೆ ತಡೆ ಹಾಕಿದ್ದೇವೆ. ಅದರರ್ಥ ನಾವು ಒಳಮೀಸಲಾತಿಯನ್ನು ಶೀಘ್ರ ಜಾರಿಗೊಳಿಸುವ ಬದ್ಧತೆ ಹೊಂದಿದ್ದೇವೆ ಎಂದರ್ಥ ಎಂದು ಸಿದ್ದರಾಮಯ್ಯ ಚರ್ಚೆ ವೇಳೆ ಸಿದ್ದರಾಮಯ್ಯ ಅಭಯ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *