ಉಚಿತ “ರೆಪ್ರೀಜಿರೇಶನ್ ಮತ್ತು ಎರ್ ಕಂಡಿಷನ್ ರಿಪೇರ್” ತರಬೇತಿಗೆ ಅರ್ಜಿ ಆಹ್ವಾನ

1 Min Read

 

ಮಾಹಿತಿ ಕೃಪೆ :
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ,(ಜನವರಿ 18) : ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟಿ (ಆರ್) ಹಳಿಯಾಳ ಹಾಗೂ ಜೆಸಿಬಿ ಇಂಡಿಯಾ ಇವರ ಜಂಟಿ ಸಹಯೋಗದಲ್ಲಿ  30 ದಿನಗಳ ಉಚಿತ “ರೆಪ್ರೀಜಿರೇಶನ್ ಮತ್ತು ಎರ್ ಕಂಡಿಷನ್ ರಿಪೇರ್” ತರಬೇತಿ ಹಮ್ಮಿಕೊಳ್ಳಲಾಗಿದೆ.

ಈ ತರಬೇತಿಯು 30 ದಿನಗಳಾಗಿದ್ದು, 18 ರಿಂದ 45 ವರ್ಷ ವಯೋಮಿತಿಯ ಯುವಕರು, ತಮ್ಮ ಹೆಸರು, ಹುಟ್ಟಿದ ದಿನಾಂಕ, ಪೂರ್ಣ ಪೋಸ್ಟಲ್ ವಿಳಾಸ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ, ತರಬೇತಿಯ ಅವಶ್ಯಕತೆ, ಈಗ ಮಾಡುತ್ತಿರುವ ಕೆಲಸ ಇತ್ಯಾದಿ ವಿವರಗಳನ್ನು  ಒಳಗೊಂಡ ಅರ್ಜಿಯನ್ನು ಜನವರಿ 31 ರೊಳಗೆ ದೇಶಪಾಂಡೆ ಆರ್‍ಸೆಟಿ (ಆರ್) ವಿಸ್ತರಣಾ ಕೇಂದ್ರ, ಹಸನಮಾಳ್, ದಾಂಡೇಲಿ-581325 ವಿಳಾಸಕ್ಕೆ ಸಲ್ಲಿಸಲು ಕೋರಲಾಗಿದೆ.

9449782425, 9731842849, 9731842849 ಈ ವಾಟ್ಸಪ್ ನಂಬರ್‍ಗೂ ಸಹ ಅರ್ಜಿ ಸಲ್ಲಿಸಬಹುದು.

ತರಬೇತಿಯು ಊಟೋಪಚಾರ ಹಾಗೂ ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿರುತ್ತದೆ. ತರಬೇತಿಯ ನಂತರ ಉದ್ಯೋಗ ನಿಯೋಜನೆ ಮಾರ್ಗದರ್ಶನ ಸೌಲಭ್ಯ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks