ದಾವಣಗೆರೆ (ಅ.03) : ಕೇಂದ್ರ ಸರ್ಕಾರದ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ಲೆಕ್ಕಪರಿಶೋಧನಾಧಿಕಾರಿ, ಸಹಾಯಕ ಲೆಕ್ಕಾಧಿಕಾರಿ, ಸಹಾಯಕ ಶಾಖಾಧಿಕಾರಿ, ಆದಾಯ ತೆರಿಗೆ, ಅಬಕಾರಿ ನಿರೀಕ್ಷಕರು, ಸಿಬಿಐ, ಎನ್ಐಎ, ಎನ್ಸಿಬಿ ಯಲ್ಲಿ ಸಬ್- ಇನ್ಸ್ಪೆಕ್ಟರ್ಗಳು ಮತ್ತು ಕಿರಿಯ ಸಂಖ್ಯಾ ಸಂಗ್ರಹಣಾಧಿಕಾರಿ ಹುದ್ದೆಗಳ ಭರ್ತಿಗಾಗಿ ಸಿಬ್ಬಂದಿ ನೇಮಕಾತಿ ಆಯೋಗದ (SSಅ) ವತಿಯಿಂದ (20,000ಕ್ಕೂ ಅಧಿಕ ಹುದ್ದೆಗಳು) ಕಂಬ್ಯೆನ್ಡ್ ಗ್ರಾಜುಯೇಟ್ ಲೆವೆಲ್ ಪರೀಕ್ಷೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳು ಸ್ಪರ್ಧಾತ್ಮಕ ಪರೀಕ್ಷೆಯು ಕಂಪ್ಯೂಟರ್ ಆಧಾರಿತವಾಗಿದ್ದು, ಆಸಕ್ತ ಅಭ್ಯರ್ಥಿಗಳು ಈ ವೆಬೆಸೈಟ್ hಣಣಠಿs://ssಛಿ.ಟಿiಛಿ.iಟಿ oಡಿ ತಿತಿತಿ.ssಞಞಡಿ.ಞಚಿಡಿ.ಟಿiಛಿ.iಟಿ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ವಯೋಮಿತಿ 18 ರಿಂದ 30ವರ್ಷಗಳು. ಅರ್ಜಿ ಸಲ್ಲಿಸಲು ಅ.08 ಕೊನೆಯ ದಿನಾಂಕ ವಾಗಿದ್ದು,
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ: 080-25502520/9483862020 ಅಥವಾ 08192-259446 ಯನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಗಿರೀಶ್ ಕೆ.ಎನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.