ಬೆಂಗಳೂರು: ಬಿಪಿಎಲ್ ಕಾರ್ಡುದಾರರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಿದೆ. ಇಂದಿನಿಂದ ಒಂಭತ್ತು ದಿನಗಳ ಕಾಲ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಹೊಸ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡುವುದಕ್ಕೂ ಶೀಘ್ರದಲ್ಲಿಯೇ ಸಮಯ ನಿಗದಿ ಮಾಡಲಾಗುತ್ತದೆ.
ಹೊಸ ಬಿಪಿಎಲ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ನೀಡಿದರು ಸಹ, ಹೊಸ ಬಿಪಿಎಲ್ ಕಾರ್ಡುದಾರರಿಗೆ ಸರ್ಕಾರದ ಗ್ಯಾರಂಟಿ ಯೋಜನೆಗಳು ಸಿಗುವುದು ಕಷ್ಟಸಾಧ್ಯವಾಗಿದೆ. ಅನಾರೋಗ್ಯದ ಸಂದರ್ಭದಲ್ಲಿ ಈ ಹೊಸ ಬಿಪಿಎಲ್ ಕಾರ್ಡನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಚಿಕಿತ್ಸೆಗೆಂದು ಸರ್ಕಾರದಲ್ಲಿರುವ ಸವಲತ್ತನ್ನು ಬಿಪಿಎಲ್ ಕಾರ್ಡ್ ಮೂಲಕ ಪಡೆದುಕೊಳ್ಳಬಹುದಾಗಿದೆ.
ಇನ್ನು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡಬೇಕು ಎಂದುಕೊಂಡಾಗೆಲ್ಲಾ ಸರ್ವರ್ ಸಮಸ್ಯೆಯೇ ಹೆಚ್ಚಾಗಲಿದೆ. ಹೀಗಾಗಿ ಈ ಬಾರಿ ಸರ್ವರ್ ಸಮಸ್ಯೆಗೂ ಮುಕ್ತಿ ಕೊಡಲಿದ್ದು, ಈಗಾಗಲೇ ಹೊಸ ಸರ್ವರ್ ಗೆ ಆರ್ಡರ್ ನೀಡಲಾಗಿದೆ. ಈ ಹಿನ್ನೆಲೆ ಅರ್ಜಿ ಸಲ್ಲಿಕೆಯ ಸಮಯದಲ್ಲಿ ಯಾವುದೇ ರೀತಿಯ ಸಮಸ್ಯೆ ಕಾಡುವುದಿಲ್ಲ.