ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729
ಸುದ್ದಿಒನ್, ಚಳ್ಳಕೆರೆ, ಅಕ್ಟೋಬರ್.25 : ಬೆಳೆಗಾರರಿಗೆ ಹನಿ ನೀರಾವರಿ ಪದ್ದತಿ ಅಳವಡಿಸಿಕೊಳ್ಳಲು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಆರ್. ವಿರೂಪಾಕ್ಷಪ್ಪ ತಿಳಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಹನಿನೀರಾವರಿ ಪದ್ದತಿಯನ್ನು ರೈತರ ಅಳವಡಿಸಿಕೊಳ್ಳಲು ತಾಲ್ಲೂಕಿನ ಎಸ್ ಸಿ.ಎಸ್ ಟಿ ರೈತರಿಗೆ ಶೇ 90 ರಷ್ಟು ಸಹಾಯಧನ, ಸಾಮಾನ್ಯ ವರ್ಗಕ್ಕೆ ಶೇ 70ರಷ್ಟು ಸಹಾಯಧನ ನೀಡಲಾಗುವುದು, ಎಸ್‌ಸಿ ಜನಾಂಗದ ರೈತರಿಗೆ 20 ಲಕ್ಷ , ಸಾಮಾನ್ಯ ವರ್ಗ ರೈತರಿಗೆ ೪೦೦ ಲಕ್ಷ ಗುರಿ ನೀಡಲಾಗಿದೆ. ಎಸ್‌ಟಿ ರೈತರಿಗೆ ಹನಿನೀರಾವರಿರಿ ಪದ್ದತಿ ಅಳವಡಿಕೊಳ್ಳಲು ಅನುದಾನ ಬಿಡುಗಡೆಯಾಗಿಲ್ಲ, ಇವರು ಅರ್ಜಿ ಸಲ್ಲಿಸಲು ಬರುವುದಿಲ್ಲ ಎಂದು ಸ್ವಷ್ಟನೆ ನೀಡಿದ್ದಾರೆ.
ಎಸ್‌ಸಿ, ಸಾಮಾನ್ಯ ವರ್ಗ ರೈತರು ಹನಿನೀರಾವರಿ ಪದ್ದತಿ ಅಳವಡಿಸಿಕೊಳ್ಳಲು ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ರೈತರು ಪಹಣಿ, ಆಧಾರ್ ಕಾರ್ಡ್, ಪಾಸ್ ಬುಕ್, ಜಾತಿ ಪ್ರಮಾಣ ಪತ್ರದೊಂದಿಗೆ ತೋಟಗಾರಿಕೆ ಇಲಾಖೆ ಅರ್ಜಿ ಸಲ್ಲಿಸಿ, ರೈತರು ಅನುಮೋದಿತ ಕಂಪನಿಯಿಂದ ಹನಿನೀರಾವರಿ ಪದ್ದತಿ ಅಳವಡಿಕೊಂಡು ಸಹಾಯಧನ ಪಡೆಬಹುದುಕೊಳ್ಳಬಹುದು ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ವಿರೂಪಾಕ್ಷಪ್ಪ ತೋಟಗಾರಿಕೆ ಬೆಳೆ ಬೆಳೆಯು ರೈತರಲ್ಲಿ ಮನವಿ ಮಾಡಿದ್ದಾರೆ.