ಯಾದಗಿರಿ: ಉತ್ತರ ಕರ್ನಾಟಕದ ಸ್ವಯಂ ಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಫೋಕ್ಸೋ ಪ್ರಕರಣ ದಾಖಲಾಗಿದೆ. ಅಪ್ರಾಪ್ತ ಬಾಲಕಿಯ ಜೊತೆಗೆ ಕೆಟ್ಟದಾಗಿ ನಡೆದುಕೊಂಡಿದ್ದಾರೆಂದು ಎಫ್ಐಆರ್ ದಾಖಲಾಗಿದೆ. ಆದರೆ ಇತ್ತ ಬಾಲಕಿಯ ಪೋಷಕರು ನೋಡಿದ್ರೆ ಮುತ್ಯಾನ ಪರವಾಗಿಯೇ ಮಾತನ್ನಾಡಿದ್ದಾರೆ. ವಿಡಿಯೋ ರಿಲೀಸ್ ಮಾಡುವ ಮೂಲಕ ಮುತ್ಯಾ ಪರವಾಗಿ ಮಾತನ್ನಾಡಿದ್ದಾರೆ.
ಮಗಳ ಹುಟ್ಟುಹಬ್ಬವಿತ್ತು, ಹೀಗಾಗಿ ಆಶೀರ್ವಾದ ಪಡೆಯುವ ಸಲುವಾಗಿ ಹೋಗಿದ್ದೆವು. ಆ ವೇಳೆ ಮಲ್ಲಿಕಾರ್ಜುನ ಮುತ್ಯಾ ಆಶೀರ್ವಾದವನ್ನ ಕೊಟ್ಟಿದ್ದಾರೆ. ಆಶೀರ್ವಾದ ಕೊಟ್ಟಿದ್ದಕ್ಕೆ ಖುಷಿಯಾಗಿ ವಿಡಿಯೋ ಮಾಡಿದೆವು, ಸೋಷಿಯಲ್ ಮೀಡಿಯಾದಲ್ಲೂ ಆಶೀರ್ವಾದ ಅಂತ ಹಾಕಿದ್ದೇವೆ. ಮಗಳು ಅಪ್ಪಾವ್ರ ಜೊತೆಗೆ ಇರುವ ವಿಡಿಯೋ ವೈರಲ್ ಆಗಿದೆ. ವಿಡಿಯೋವನ್ನ ತಿರುಚಿ ಕಿಡಿಗೇಡಿಗಳು ವೈರಲ್ ಮಾಡ್ತಾ ಇದ್ದಾರೆ. ಅಪ್ಪವ್ರದ್ದು ಯಾವ್ದು ಸಹ ತಪ್ಪಿಲ್ಲ. ಆಶೀರ್ವಾದ ಅಂತ ಮಾತ್ರ ಹೇಳಿದ್ದೇವೆ. ವಿಡಿಯೋ ತಿರುಚಿದವರ ಮೇಲೆ ಕ್ರಮ ಆಗ್ಬೇಕು ಅಂತ ಬಾಲಕಿಯ ಪೋಷಕರು ವಿಡಿಯೋ ಬಿಟ್ಟಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಎಂಎಲ್ಸಿ ತಿಪ್ಪಣ್ಣ ಕಮಾಕ್ನೂರ್ ಮಾತನಾಡಿ, ಮಲ್ಲಿಕಾರ್ಜುನ ಮುತ್ಯಾ ಅವರ ಆಶ್ರಮ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಬೆಳೆದಿದೆ. ಬೇರೆ ಬೇರೆ ರಾಜ್ಯದಿಂದ ಆಶ್ರಮಕ್ಕೆ ಬಂದು, ಕಷ್ಟ ನಷ್ಟಗಳನ್ನ ಹಂಚಿಕೊಳ್ಳುತ್ತಾರೆ. ಮಲ್ಲಿಕಾರ್ಜುನ ಮುತ್ಯಾ ಮೇಲೆ ಫೋಕ್ಸೋ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿದ್ದಾರೆ ಅದನ್ನ ಕಡಾಖಂಡಿತವಾಗಿ ನಾನು ಖಂಡಿಸುತ್ತೇನೆ. ಯಾಕಂದ್ರೆ ಮನೆಯವರೊಡನೆ ಮಾತನ್ನಾಡಿದಾಗ ಅವಳು ನಮ್ಮ ಮಗಳಲ್ಲ ಮುತ್ಯಾರ ಮಗಳು. ಅವರ ಮಡಿಲಲ್ಲಿ ಹಾಕಿದ್ದೀವಿ. ಅವರ ಆರೋಗ್ಯ ಸುಧಾರಣೆಗೆ ಹತ್ತಾರು ಸಲ ಹೋಗಿ ಬಂದಿದ್ದೇವೆ. ಮಗಳಿಗೆ ತಲೆ ಮೇಲೆ ಕೈ ಇಟ್ಟು ಆಶೀರ್ವಾದ ಮಾಡಿದ್ದಾರೆ. ಮಗಳ ರೀತಿ ನೋಡಿದ್ದಾರೆ ಅಂತ ಹೇಳಿದ್ರು ಅಂದಿದ್ದಾರೆ.



