ಬೆಂಗಳೂರು : ಮಧುರ ಕಂಠದ, ಅಪ್ಪಟ ಕನ್ನಡ ಕಲಾವಿದೆ ಅಪರ್ಣಾ ವಸ್ತಾರೆ ಇಂದು ಇಹಲೋಕ ತ್ಯಜಿಸಿದ್ದಾರೆ. ಅವರಿಗೆ ಕಳೆದ ಎರಡು ವರ್ಷದಿಂದ ಶ್ವಾಸಕೋಶದ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ಈ ಕ್ಯಾನ್ಸರ್ ಧೂಮಪಾನ ಮಾಡದೆ ಇರುವವರಲ್ಲಿಯೂ ಕಾಣಿಸಿಕೊಳ್ಳುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ.
ಕ್ಯಾನ್ಸರ್ ನಲ್ಲಿ ನಾನಾ ವಿಧಗಳಿವೆ. ಅದರಲ್ಲಿ ಶ್ಚಾಸಕೋಶದ ಕ್ಯಾನ್ಸರ್ ಕೂಡ ಒಂದು. ಧೂಮಪಾನ ಮಾಡಿದರೆ ಕ್ಯಾನ್ಸರ್ ಬರುತ್ತೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯಾದರೂ ಧೂಮಪಾನ ಮಾಡದ ಶೇಕಡ 50 ರಷ್ಟು ಮಂದಿ ಇದಕ್ಕೆ ತುತ್ತಾಗಿದ್ದಾರೆ ಎಂಬುದು ಶಾಕಿಂಗ್ ನ್ಯೂಸ್. ಮುಂಬೈ ಟಾಟಾ ಮೆಮೋರಿಯಲ್ ಸೆಂಟರ್ ನ ವೈದ್ಯರ ತಂಡ ಈ ಸಂಬಂಧದ ವರದಿಯನ್ನು ಪ್ರಕಟ ಮಾಡಿದೆ. ಲಂಗ್ ಕ್ಯಾನ್ಸರ್ ಮೂರನೇ ಅತ್ಯಂತ ಸಾಮಾನ್ಯವಾದ ಕ್ಯಾನ್ಸರ್ ಆಗಿ ಪತ್ತೆಯಾಗಿದೆ. 2020ರಲ್ಲಿ ಸುಮಾರು 18.5 ಲಕ್ಷ ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರಿಂದಾಗಿ 16.6 ಲಕ್ಷ ಅಥವಾ 10.9% ಸಾವುಗಳಿಗೆ ಕಾರಣವಾಗಿದೆ.
ಧೂಮಪಾನ ಮಾಡದೆ ಹೋದರೂ ಈ ರೀತಿ ಶ್ವಾಸಕೋಶದ ಕ್ಯಾನ್ಸರ್ ಗೆ ತುತ್ತಾಗುವುದಕ್ಕೆ ಒಂದು ವಾಯುಮಾಲಿನ್ಯ ಕೂಡ ಕಾರಣವಾಗಿದೆ. ವಾಯು ಮಾಲಿನ್ಯ ಶ್ವಾಸಕೋಶದ ಕ್ಯಾನ್ಸರ್ ಗೆ ಪ್ರಮುಖ ಅಪಾಯಕಾರಿ ಅಂಶವಾಗಿದೆ. ಧೂಮಪಾನ ಮಾಡದವರು ಇದ್ದಕ್ಕೆ ತುತ್ತಾಗುತ್ತಾರೆ. ಕಲ್ನಾರಿನ, ಕ್ರೋಮಿಯಂ, ಕ್ಯಾಡಿಯಂ, ಆರ್ಸೆನಿಕ್ ಮತ್ತು ಕಲ್ಲಿದ್ದಲು, ಮನೆಯ ಹೊಗೆ ಇವೆಲ್ಲವೂ ಶ್ವಾಸಕೋಶದ ಕ್ಯಾನ್ಸರ್ ಹರಡಲು ಕಾರಣವಾಗುತ್ತವೆ ಎಂದು ಹೇಳಲಾಗುತ್ತದೆ. ಜೊತೆಗೆ ಸಿಗರೇಟು ಸೇದುವವರಿಗಿಂತ ಅದರ ಹೊಗೆ ಕುಡಿಯುವವರಲ್ಲಿಯೂ ಹೆಚ್ಚು ಅಪಾಯಕಾರಿ ಎಂದು ವೈದ್ಯರೇ ಹೇಳುತ್ತಾರೆ. ಈ ರೀತಿಯ ಪರಿಸರದಿಂದೆಲ್ಲಾ ಕೊಂಚ ದೂರ ಇರುವುದು ಒಳಿತು.