ಬೆಂಗಳೂರು: ಜೈಲುಗಳಲ್ಲಿ ಗಾಂಜಾ ಪೂರೈಕೆ, ಅಕ್ರಮ ನಡೆಯದಂತೆ ಬಿಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಒಂದೆರಡು ಜೈಲುಗಳಲ್ಲಿ ಕೆಲವರು ಇದ್ದಾರೆ ಅದನ್ನು ಸರಿಪಡಿಸುತ್ತೇವೆ. ಮುರುಗನ್ ಸಮಿತಿ ವರದಿ ಆಧಾರದಲ್ಲಿ ಹರಪ್ಪನ ಅಗ್ರಹಾರದಲ್ಲಿ 15 ಸಿಬ್ಬಂದಿ ಅಮಾನತು ಮಾಡಲಾಗಿದೆ.
30 ಸಿಬ್ಬಂದಿ ವರ್ಗಾವಣೆ ಮಾಡಲಾಗಿದೆ. ಇವಾಗ ಬಹುತೇಕ ಹೊಸ ಸಿಬ್ಬಂದಿಗಳು ಇದ್ದಾರೆ. ಜೈಲು ಸಿಬ್ಬಂದಿ ಅಲರ್ಟ್ ಆಗಿದ್ದಾರೆ, ಎಲ್ಲವನ್ನು ಹಿಡಿಯುತ್ತಿದ್ದಾರೆ. ಫೋನ್, ನಿಷೇಧಿತ ವಸ್ತು ಬಳಕೆ ಮಾಡಿದರೆ ಎಫ್ ಐ ಆರ್ ಆಗುತ್ತಿದೆ. ಕೈದಿಗಳ ಶಿಕ್ಷೆ ಪ್ರಮಾಣ ಮುಗಿದ ಬಳಿಕ ಐದು ವರ್ಷ ಶಿಕ್ಷೆ ವಿಧಿಸುವ ಅವಕಾಶ ಇದೆ. ಸಿಬ್ಬಂದಿಯ ವಿರುದ್ಧವೂ ಎಫ್ ಐ ಆರ್ ದಾಖಲು ಮಾಡಲಾಗುತ್ತಿದೆ.
ಈ ರೀತಿ ಬಿಗಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಪರಪ್ಪನ ಅಗ್ರಹಾರದಲ್ಲಿ 4ಜಿ ಜಾಮರ್ ಹಾಕಲಾಗುವುದು. ಅತ್ಯಂತ ಶೀಘ್ರವಾಗಿ ಈ ಕ್ರಮ ಕೈಗೊಳ್ಳಲಾಗುವುದು. ಕೆಲವು ಸಿಬ್ಬಂದಿ ಅನಾಚಾರದಲ್ಲಿ ಕೈಜೋಡಿಸಿದ್ದರು ಆದರೆ ಇವಾಗ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.
ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆ ವಿಚಾರವಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದು, ಅದು ವಿಚಾರಣೆ ಹಂತದಲ್ಲಿ ಇರೋದ್ರಿಂದ ನಾನು ಏನು ಹೇಳಲ್ಲ. ಪತ್ರವನ್ನು ಯಾರು ಬೇಕಾದರೂ ರಾಜ್ಯಪಾಲರಿಗೆ ಬರೆಯಬಹುದು. ಆದರೆ ಪ್ರಾಮಾಣಿಕವಾಗಿ ಮಾತ್ರ ತನಿಖೆ ನಡೆಯುತ್ತಿದೆ ಎಂದಿದ್ದಾರೆ.
ಸ್ವಾತಂತ್ರ್ಯ ದಿನದ ಅಂಗವಾಗಿ ಸನ್ನಡತೆ ಆಧಾರದ ಮೇಲೆ 84 ಕೈದಿಗಳನ್ನು ಬಿಡುಗಡೆ ಮಾಡಲಾಗ್ತಿದೆ. ಆಜಾದಿ ಕಾ ಅಮೃತ ಮಹೋತ್ಸವ ದಿನದ ಅಂಗವಾಗಿ ನಮ್ಮ 1 ಲಕ್ಷದ ಪೊಲೀಸ್ ಅಧಿಕಾರಿಗಳ ಮನೆ ಮೇಲೆ ತಿರಂಗ ಹಾರಿಸಲಾಗುತ್ತದೆ
ಪಿಎಸ್ಐ ಅಕ್ರಮದ ತನಿಖೆಯನ್ನು ಅತ್ಯಂತ ಗಂಭೀರವಾಗಿ ತನಿಖೆ ಮಾಡಿಸುತ್ತಿದ್ದೇವೆ. ಸಿಐಡಿಗೆ ಯಾವುದೇ ಒತ್ತಡ ಕೊಟ್ಟಿಲ್ಲ ಅವರಿಗೆ ನಾವು ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೇವೆ. ಇಡೀ ದೇಶದಲ್ಲೇ ಮೊದಲು ತಪ್ಪಿತಸ್ಥ ಐಪಿಎಸ್ ಅಧಿಕಾರಿಯನ್ನು ಬಂಧಿಸಿದ್ದೇವೆ. ಆದರೆ ಇದರಲ್ಲಿ ಯಾರೇ ಆದರೂ ರಾಜಕೀಯ ಲಾಭ ಪಡೆದುಕೊಳ್ಳಬಾರದು. ಅವರ ಕಾಲದಲ್ಲಿ ಎಷ್ಟು ವಲಸ್ಸು ದುರ್ನಾತ ನಡೆದಿತ್ತು ಎಂಬುದನ್ನು ನಾನು ದಾಖಲೆ ಸಮೇತ ಹೇಳಬಲ್ಲೇ. ನಮ್ಮ ಕಣ್ಣ ಮುಂದೆ ಇರೋದು ಪಿಎಸ್ಐ ಅಕ್ರಮದ ತನಿಖೆ ಬಗ್ಗೆ. ಪ್ರಕರಣದ ತನಿಖೆ ಹಂತದಲ್ಲಿ ಇರುವಾಗ ನಾನು ಇದಂತೆ ಅದಂತೆ ಹೇಳೋದು ತಪ್ಪಾಗುತ್ತದೆ. ಅಮೃತ ಪೌಲ್ ವೀಡಿಯೋ ಸಂದೇಶ ಬಹಿರಂಗ ಕುರಿತ ಡಿಕೆಶಿ ಹೇಳಿಕೆಗೆ ಆರಗ ತಿರುಗೇಟು ನೀಡಿದ್ದಾರೆ.
ಚಂದ್ರು ಹತ್ಯೆ ಪ್ರಕರಣ ಚಾರ್ಜ್ ಶೀಟ್ ಸಲ್ಲಿಕೆ ವಿಚಾರದಲ್ಲಿ ಚಂದ್ರು ಹತ್ಯೆಗೆ ಭಾಷೆಯೂ ಒಂದು ಕಾರಣವಾಗಿದೆ. ಚಾರ್ಜ್ ಶೀಟ್ ಬಗ್ಗೆ ನಾನು ಓದಿದ್ದೇನೆ. ಆದ್ರೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿಲ್ಲ. ಚಂದ್ರು ಹತ್ಯೆಗೆ ಭಾಷೆಯೂ ಒಂದು ಕಾರಣ ಅನ್ನೋದು ಚಾರ್ಜ್ ಶೀಟ್‌ನಲ್ಲಿ ಉಲ್ಲೇಖ ಆಗಿದೆ ಎಂದಿದ್ದಾರೆ.