ಜನರ ಯಾವುದೇ ಸಮಸ್ಯೆಗೂ ಸಿಎಂ ಕಚೇರಿಯಿಂದ ಸಿಗುತ್ತಿದೆ ಪರಿಹಾರ : ಅದರ ಹಿಂದಿನ ಮಹಿಳಾ ಮಣಿ ಯಾರು ಗೊತ್ತಾ…?

suddionenews
1 Min Read

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ನೂರು ದಿನಗಳನ್ನು ಪೂರೈಸಿದೆ. ಇದರ ಮಧ್ಯೆ ಗ್ಯಾರಂಟಿಗಳನ್ನ ಜಾರಿ ಮಾಡಿದ್ದಾರೆ. ಐದು ಗ್ಯಾರಂಟಿಗಳಿಗೇನೆ ಕೋಟ್ಯಾಂತರ ರೂಪಾಯಿ ಹಣ ಬೇಕು. ಆದರೂ ಸಿಎಂ ಸಿದ್ದರಾಮಯ್ಯ ಎಲ್ಲವನ್ನು ಸಮಾಧಾನದಿಂದ ನಿಭಾಯಿಸುತ್ತಿದ್ದಾರೆ. ಇದರ ನಡುವೆ ಯಾವುದೋ ಹಳ್ಳಿಗಳಿಂದ ಬರುವಂತ ಸಮಸ್ಯೆಗಳನ್ನು ಸಿಎಂ ಕಚೇರಿಯೇ ನಿಭಾಯಿಸುತ್ತೆ ಅಂದ್ರೆ ಆಶ್ಚರ್ಯ ಅಲ್ಲವೆ. ಅಂದರೆ ಸಿಎಂ ಕಚೇರಿ ಜನರಿಗಾಗಿ ತನ್ನೆಲ್ಲಾ‌ಸಮಯವನ್ನು ಮೀಸಲಿಟ್ಟಿದೆ. ಅದಕ್ಕೆ ಉದಾಹರಣೆಗಳು ಸಾಕಷ್ಟಿವೆ. ಕೇವಲ ಟ್ವಿಟ್ಟರ್, ಫೇಸ್ಬುಕ್ ಮೂಲಕ ಇಂಥ ಸಮಸ್ಯೆವೆಂದರೆ ಸಾಕು, ದಿನ ಕಳೆಯುವುದರಲ್ಲಿ ಆ ಸಮಸ್ಯೆ ಬಗೆಹರಿದಿರುತ್ತೆ.

ಚಿತ್ರದುರ್ಗದಲ್ಲಿ ಒಬ್ಬ ಬಾಲಕನ ಶಿಕ್ಷಣಕ್ಕೆ ಕಾರಣವಾಗಿದ್ದು ಒಂದು ಟ್ವೀಟ್, ಅಜ್ಜಿಯ ಮನೆಗೆ ವಿದ್ಯುತ್ ಬಂದಿತ್ತು ಒಂದು ಟ್ವೀಟ್ ನಿಂದಾನೇ. ಸಿಎಂ ಸಿದ್ದರಾಮಯ್ಯ ಅವರಿಗೆ ನೂರೆಂಟು ತಲೆ ಬಿಸಿ ಇದ್ದರು. ಮೊದಲು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ನೇರವಾಗಿ ಅವರ ಕಚೇರಿಯಿಂದಾನೇ ಆಗುತ್ತಿದೆ. ಜನರ ಕುಂದು ಕೊರತೆಗಳನ್ನು ನಿಭಾಯಿಸುವುದಕ್ಕಾಗಿಯೇ ಸಿಎಂ ಕಚೇರಿಯಲ್ಲಿ ಕುಂದುಕೊರತೆ ಕೋಶ ತೆರೆಯಲಾಗಿದೆ. ಈ ಮೂಲಕ ಜನರ ಸಮಸ್ಯೆ ಗಮನಕ್ಕೆ ಬಂದ ಕೂಡಲೇ ಅದನ್ನು ಬಗೆ ಹರಿಸುವ ಕೆಲಸವಾಗುತ್ತಿದೆ.

ಸಿದ್ದರಾಮಯ್ಯ ಅವರ ಕನಸನ್ನು ನನಸು ಮಾಡಲು ಶ್ರಮಿಸುತ್ತಿರುವುದು ಡಾ. ಕೆ ವೈಷ್ಣವಿ. ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಯಾಗಿ ವೈಷ್ಣವಿ ಅವರು ನೇಮಕಗೊಂಡಿದ್ದಾರೆ. ಇವರು ಸಿಎಂ ಎಕ್ಸ್ ಖಾತೆಗೆ ಹಾಗೂ ಕಚೇರಿಯ ಖಾತೆಗೆ ದಾಖಲಾಗುವ ದೂರುಗಳನ್ನೆಲ್ಲ ಪಟ್ಟಿ ಮಾಡಿಕೊಳ್ಳುತ್ತಾರೆ‌. ಬಳಿಕ ಸಂಬಂಧಪಟ್ಟ ಅಧಿಕಾರಿಗಳು, ಡಿಸಿಗಳು, ಜಿಲ್ಲಾ ಪಂಚಾಯತ್ ಹೀಗೆ ಮಾಹಿತಿ ನೀಡಿ ಆ ಸಮಸ್ಯೆಗಳ ಪರಿಹಾರಕ್ಕೆ ಗಮನ ಹರಿಸುತ್ತಾರೆ. ಈ ರೀತಿಯಾಗಿ ಕೆಲಸ ನಡೆಯುತ್ತಿರುವುದರಿಂದಾನೇ ಜನರ ಸಮಸ್ಯೆಗಳು ಸಲೀಸಾಗಿ ಬಗೆಹರಿಯುತ್ತಿವೆ. ರಾಜ್ಯದ ಜನರು ಹೆಮ್ಮೆ ಪಡುವಂತೆ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *