ಮಂಗಳೂರು: ಡ್ರಗ್ ಕೇಸ್ ವಿಚಾರದಲ್ಲಿ ಆಂಕರ್ ಅನುಶ್ರೀಯ ಹೆಸರು ಕೂಡ ತಳುಕು ಹಾಕಿಕೊಂಡಿತ್ತು. ಕಳೆದ ವರ್ಷವೆ ವಿಚಾರಣೆಯನ್ನು ಎದುರಿಸಿದ್ದರು. ಒಂದು ವರ್ಷದ ಬಳಿಕ ಡ್ರಗ್ ವಿಚಾರದಲ್ಲಿ ಮತ್ತೆ ಅನುಶ್ರೀಯ ಹೆಸರು ಬಹಿರಂಗವಾಗಿದೆ. ಪೊಲೀಸರು ಹಾಕಿರುವ ಚಾರ್ಜ್ ಶೀಟ್ ನಲ್ಲಿ ಅನುಶ್ರೀ ಹೆಸರು ಕೂಡ ಉಲ್ಲೇಖವಾಗಿದೆ.
ಈ ವಿಚಾರ ಸಾಕಷ್ಟು ಸುದ್ದಿಯಾಗುತ್ತಿದ್ದು, ಮಂಗಳೂರು ಪೊಲೀಸ್ ಆಯುಕ್ತರು ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಚಾರ್ಜ್ ಶೀಟ್ ನಲ್ಲಿ ಅನುಶ್ರೀಯನ್ನು ಆರೋಪಿ ಎಂದು ಉಲ್ಲೇಖ ಮಾಡಿಲ್ಲ. ಕಿಶೋರ್ ನೀಡಿದ ಹೇಳಿಕೆಯಲ್ಲಿ ಅನುಶ್ರೀ ಹೆಸರನ್ನು ನಮೂದು ಮಾಡಲಾಗಿದೆ ಎಂದಿದ್ದಾರೆ.
ಒಂಭತ್ತು ತಿಂಗಳ ಹಿಂದೆಯೇ ವರದಿ ಸಲ್ಲಿಸಿದ್ದೇವೆ. ಡ್ರಗ್ಸ್ ಕೇಸ್ ಸಂಬಂಧ ಈಗ ಸಂಪೂರ್ಣ ತನಿಖೆ ಮುಗಿದಿದೆ. ಮತ್ತೆ ಕಿಶೋರ್ ಕರೆದು ವಿಚಾರಣೆ ನಡೆಸುವ ಅಗತ್ಯವಿಲ್ಲ. ಅನುಶ್ರೀ ಮೇಲೆ ಬಂದ ಆರೋಪಕ್ಕೆ ಪೂರಕ ಸಾಕ್ಷಿಗಳು ಲಭ್ಯವಾಗಿಲ್ಲ ಎಂದಿದ್ದಾರೆ.