ಮಂಗಳೂರು: ಸ್ಯಾಂಡಲ್ ವುಡ್ ಡ್ರಗ್ ಕೇಸ್ ಗೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಸಲ್ಲಿಸಿದ್ದ ಚಾರ್ಜ್ ಶೀಟ್ ನಲ್ಲಿ ಅನುಶ್ರಿ ಹೆಸರು ಉಲ್ಲೇಖವಾಗಿತ್ತು. ಡ್ರಗ್ ಪೆಡ್ಲರ್ ಕಿಶೋರ್ ಶೆಟ್ಟಿ ಹೇಳಿಕೆ ಆಧರಿಸಿ ಅನುಶ್ರೀ ಹೆಸರು ಉಲ್ಲೇಖ ಮಾಡಲಾಗಿತ್ತು.
ಅನುಶ್ರೀ ಕೂಡ ಡ್ರಗ್ಸ್ ಸೇವನೆ ಮಾಡ್ತಾ ಇದ್ರು. ಜೊತೆಗೆ ಆಕೆ ಮಾರಾಟವನ್ನು ಮಾಡ್ತಾ ಇದ್ಲು. ಡ್ರಗ್ಸ್ ಸೇವಿಸಿದ್ರೆ ಎನರ್ಜಿ ಹೆಚ್ಚು ಸಮಯ ಇರ್ತಾ ಇತ್ತು ಅಂತ ಆಕೆಯೇ ಹೇಳ್ತಾ ಇದ್ಲು. ಊಟಕ್ಕೂ ಮುನ್ನ ಡ್ರಗ್ಸ್ ಸೇವನೆ ಮಾಡ್ತಾ ಇದ್ರು ಅಂತ ಕಿಶೋರ್ ಹೇಳಿಕೆ ನೀಡಿರುವ ರೀತಿ ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆ.
ಆದ್ರೆ ಕಿಶೋರ್ ಆ ಹೇಳಿಕೆಗೆ ಉಲ್ಟಾ ಹೊಡೆದಿದ್ದಾರೆ. ಅನುಶ್ರೀ ಡ್ರಗ್ಸ್ ತಂದು ಕೊಟ್ಟಿದ್ದಾರೆಂದು ಎಲ್ಲೂ ಹೇಳಿಲ್ಲ
ಪೊಲೀಸ್ರು ಸುಳ್ಳು ಸುಳ್ಳು ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಸಹಿ ಹಾಕು ಅಂತ ಪೊಲೀಸ್ರು ಹೇಳಿದ್ರು ಹಾಕಿದೆ ಅಷ್ಟೆ. ಅವರು ಏನ್ ಟೈಪ್ ಮಾಡಿಕೊಂಡಿದ್ದಾರೆಂದು ನನಗೆ ಗೊತ್ತಿಲ್ಲ. ಪೊಲೀಸರು ನನ್ನ ಹೇಳಿಕೆಯನ್ನು ಓದಲು ಕೂಡಾ ಬಿಡಲಿಲ್ಲ. ನಾನು ಎರಡು ಸಾರಿ ಡ್ರಗ್ಸ್ ತಗೊಂಡಿರೋದು ನಿಜ. ಒಮ್ಮೆ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಮಾಡಿದ್ದು ನಿಜ. ಅನುಶ್ರೀ ಅವರಿಗೂ ನಾನು ಡ್ರಗ್ಸ್ ಸೇವಿಸಿದಕ್ಕೂ ಸಂಬಂಧವಿಲ್ಲ. ಅನುಶ್ರೀ ನನಗೆ ಯಾವತ್ತೂ ಡ್ರಗ್ಸ್ ತಂದು ಕೊಟ್ಟಿಲ್ಲ . ಡ್ರಗ್ಸ್ ಸೇವಿಸಿರೋದು ನಿಜ ಆದ್ರೆ ಯಾರಿಗೂ ಮಾರಾಟ ಮಾಡಿಲ್ಲ.
2019ರಲ್ಲಿ ನಾನು ಎರಡು ಬಾರಿ ಡ್ರಗ್ಸ್ ಸೇವಸಿದ್ದೆ. ಡ್ರಗ್ಸ್ ತಗೊಂಡು ಡ್ಯಾನ್ಸ್ ಮಾಡೋದಕ್ಕೆ ಸಾಧ್ಯ ಇಲ್ಲ. ಜಾಕೀರ್ ಕಡೆಯಿಂದ ನಾನು ಡ್ರಗ್ಸ್ ತಗೆದುಕೊಳ್ತಿದ್ದೆ. ನಾನು, ಅನುಶ್ರೀ ಮತ್ತೆ ಅವರು ಯಾವತ್ತೂ ಪಾರ್ಟಿನೇ ಮಾಡಿಲ್ಲ ಎಂದಿದ್ದಾರೆ.