ಡ್ರಗ್ಸ್ ಕೇಸ್ ವಿಚಾರ: ಮುಂಬೈನಿಂದ ಬೆಂಗಳೂರಿಗೆ ಬಂದ ಅನುಶ್ರೀ

suddionenews
1 Min Read

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ ವಿಚಾರದಲ್ಲಿ ಮಂಗಳೂರು ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಅದರಲ್ಲಿ ಎ2 ಆರೋಪಿ ಕಿಶೋರ್ ಅಮನ್ ಶೆಟ್ಟಿ ಅನುಶ್ರೀ ಹೆಸರನ್ನ ಹೇಳಿದ್ದಾನೆಂದು ಹಾಗೆದ ಅನುಶ್ರೀ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದ ನಿಜ ಎಂಬುದಾಗಿ ಚಾರ್ಜ್ ಶೀಟ್ ನಲ್ಲಿ ನಮೂದಾಗಿದೆ.

ಈ ಘಟನೆ ನಡೆದ ಬೆನ್ನಲ್ಲೇ ನಟಿ ಕಂ ಆ್ಯಂಕರ್ ಅನುಶ್ರೀ ಮುಂಬೈಗೆ ಹಾರಿದ್ರು. ಇಂದು ಅಲ್ಲಿಂದ ಬೆಂಗಳೂರಿಗೆ ಬಂದಿದ್ದಾರೆ. ಈ ವೇಳೆ ಮಾಧ್ಯಮದವರ ಬಳಿ ಮಾತನಾಡಿದ್ದು, ಈ ವೇಳೆ ಪ್ರಶಾಂತ್ ಸಂಬರಗಿ ವಿರುದ್ಧ ಹರಿಹಾಯ್ದಿದ್ದಾರೆ. ಪ್ರಶಾಂತ ಸಂಬರ್ಗಿ ಅವ್ರು ಕಾನೂನು ಮೂಲಕ ಹೋಗಲಿ. ನಮ್ಮ ಸಮಾಜದಲ್ಲಿ ಕಾನೂನು ಇದೆ. ಆಗಲು ಉತ್ತರ ಕೊಟ್ಟಿದ್ದೇನೆ, ಈಗಲೂ ಉತ್ತರ ಕೊಟ್ಟಿದ್ದೇನೆ. ಕಳೆದ ವರ್ಷ ಡಿಸ್ಟರ್ಬ್ ಆಗಿದ್ದು ನಿಜ.‌15 ವರ್ಷದಿಂದ ಕೆಲಸ ಮಾಡ್ತಿದ್ದೇನೆ. ಸಾವಿರಾರು ಜನರೊಂದಿಗೆ ಕೆಲಸ ಮಾಡಿದ್ದೇನೆ. ತುಂಬಾ ಜನ ತುಂಬಾ ವಿಷಯ ಮಾತಾಡ್ತಾ ಇರ್ತಾರೆ.

ಸಿಸಿಬಿ‌ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಇದು ನನ್ನ ನೆಲ ಎಲ್ಲೂ ಓಡಿ ಹೋಗಲ್ಲ. ಆರೋಪ, ಆರೋಪಿಗಳು ಸಾವಿರ ಹೇಳ್ತಾರೆ. ಪೊಲೀಸರು ಸತ್ಯಾಸತ್ಯತೆ ಪರಿಶೀಲಿಸಿದ್ದಾರೆ. ಪೋಲಿಸರ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ನನ್ನ ಮೇಲೆ ನೂರಾರು ಆರೋಪ ಇದೆ. ಯಾವ ಪ್ರಭಾವಶಾಲಿಗಳ ಹೆಲ್ಪ್ ಅವಶ್ಯಕತೆ ಇಲ್ಲ. ಕನ್ಸೂಮರ್ ಅಥವಾ ಪೆಡ್ಲರ್ ಆಗಿ ನನ್ನ ವಿಚಾರಣೆಗೆ ಕರೆದಿದ್ದರು. ಪೇಪರ್ಸ್ ಸಬ್ಮಿಟ್ ಮಾಡಿದ್ದೇನೆ.‌ ಭಯ ಇಲ್ಲ.

ನನ್ನ ಬಗ್ಗೆ ಮಾಧ್ಯಮದಲ್ಲಿ ಏನೇನೋ ಓಡ್ತಿದೆ. ಸೋಮವಾರ ಬಾಂಬೆಗೆ ತೆರಳಲು ಟಿಕೆಟ್ ಬುಕ್ ಮಾಡಿದ್ದೇನೆ. ರಿಟರ್ನ್ ಟಿಕೇಟ್ ಕೂಡ ಬುಕ್ ಮಾಡಿಸಿದ್ದೇ. ನಾನೇಲ್ಲೂ ಭಯಪಟ್ಟು ಹಾರು ಹೋಗಿಲ್ಲ. ನನ್ನ ಮೇಲೆ ಮಾಡಿರುವ ಆರೋಪಗಳೆಲ್ಲವೂ ಸುಳ್ಳು. ನನ್ನ ಹೆಸರನ್ನ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿವುದರ ಬಗ್ಗೆ ನನಗೆ ಗೊತ್ತಿಲ್ಲ. ಲಾ ಪ್ರಕಾರ ಉತ್ತರಿಸಿದ್ದೇನೆ, ಮತ್ತೆ ವಿಚಾರಣೆಗೆ ಕರೆದ್ರೂ ಉತ್ತರಿಸ್ತೇನೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *