Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನಾಲ್ಕು ವರ್ಷದ ಮಗನನ್ನು ಕೊಂದ ಬೆಂಗಳೂರು ಸ್ಟಾರ್ಟಪ್ ಸಿಇಒ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್

Facebook
Twitter
Telegram
WhatsApp

ಸುದ್ದಿಒನ್,ಬೆಂಗಳೂರು :  ಸ್ಟಾರ್ಟಪ್ ಕಂಪನಿಯ ಸಿಇಒ ಸುಚನಾ ಸೇಠ್ ತನ್ನ ನಾಲ್ಕು ವರ್ಷದ ಮಗನನ್ನು ಕೊಂದ ಪ್ರಕರಣದಲ್ಲಿ ಮತ್ತಷ್ಟು ವಿಷಯಗಳು ಬೆಳಕಿಗೆ ಬರುತ್ತಿವೆ. ಮೃತ ದೇಹವನ್ನು ಬಚ್ಚಿಟ್ಟಿದ್ದ ಸೂಟ್‌ಕೇಸ್‌ನಲ್ಲಿ ಸುಚನಾ ಸೇಠ್ ಬರೆದಿದ್ದ ಪತ್ರವನ್ನು ಗೋವಾ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೇಪರ್ ಬದಲು ಟಿಶ್ಯೂ ಪೇಪರ್ ನಲ್ಲಿ ಬರೆದಿದ್ದ ಸುಜನಾ ಸೇಠ್, ಪೆನ್ ಬದಲಿಗೆ ಐಲೈನರ್ ಬಳಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪತ್ರವನ್ನು ಹೆಚ್ಚಿನ ತನಿಖೆಗಾಗಿ ವಿಧಿವಿಜ್ಞಾನ ತಂಡಕ್ಕೆ ಕಳುಹಿಸಲಾಗಿದೆ. ಐಲೈನರ್‌ನಿಂದ ಬರೆದ ಆರು ಸಾಲಿನ ಪತ್ರವನ್ನು ವಿಧಿವಿಜ್ಞಾನ ತಂಡದ ಕೈಬರಹ ತಜ್ಞರು ಪರಿಶೀಲಿಸುತ್ತಿದ್ದಾರೆ.

ಆದರೆ, ‘ಕೋರ್ಟ್, ನನ್ನ ಮಾಜಿ ಪತಿ ನನ್ನ ಮಗನನ್ನು ಕಸ್ಟಡಿಗೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ.. ಇನ್ನು ಮುಂದೆ ನಾನು ಅದನ್ನು ಸಹಿಸಲಾರೆ.. ಮಾಜಿ ಪತಿ ತುಂಬಾ ಕ್ರೂರಿ,… ಅವನು (ನನ್ನ) ಮಗನಿಗೆ ಕೆಟ್ಟ ಅಭ್ಯಾಸಗಳನ್ನು ಕಲಿಸುತ್ತಾನೆ. ಅವನು ನನ್ನ ಮಗುವನ್ನು ನೋಡುವುದು ನನಗೆ ಇಷ್ಟವಿಲ್ಲ’ ಎಂದು ಅದರಲ್ಲಿ ಬರೆದಿರುವಂತಿದೆ. ಆದರೆ, ಆಕೆ ತನ್ನ ಮಗನನ್ನು ಕೊಲ್ಲುವ ಮುನ್ನ ಲಾಲಿ ಹಾಡುವ ಮೂಲಕ ಮಗನನ್ನು ಮಲಗಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ಮನಸ್ಥಿತಿಯನ್ನು ಈ ಪತ್ರದ ಸಾಲುಗಳು ನಿರ್ಣಾಯಕ ಸಾಕ್ಷ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಗನನ್ನು ಪತಿ ಭೇಟಿಯಾಗುವುದು ಆಕೆಗೆ ಇಷ್ಟವಿರಲಿಲ್ಲ ಎಂದು ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು, ಇದೇ ಕಾರಣದಿಂದ ಆಕೆ ಈ ಹಂತಕ್ಕೆ ಹೋಗಲು ಕಾರಣವಾಗಿತ್ತು. ‘ಕೊಲೆಗೂ ಮುನ್ನ ಆಕೆ ತನ್ನ ವೈದ್ಯರಾದ ಪೇರೆಂಟಲ್ ಥೆರಪಿಸ್ಟ್ ಜೊತೆ ಸಂಪರ್ಕದಲ್ಲಿದ್ದಳು. ಬಾಲಕನ ಸಾವಿನ ನಂತರ ಆಕೆ ಯಾರಿಗೆ ಕರೆ ಮಾಡಿದ್ದಾಳೆ ಎಂದು ತಿಳಿಯಲು ನಾವು ಕರೆ ವಿವರಗಳನ್ನು ಪರಿಶೀಲಿಸುತ್ತಿದ್ದೇವೆ,” ಎಂದು ಅಧಿಕಾರಿ ತಿಳಿಸಿದ್ದಾರೆ.

ಸುಚನಾ ಸೇಠ್-ವೆಂಕಟ್ ರಾಮನ್ ದಂಪತಿಯ ಭಿನ್ನಾಭಿಪ್ರಾಯದಿಂದ ವಿಚ್ಛೇದನ ಪಡೆದಿದ್ದರು. ಕೋರ್ಟ್ ಕೂಡ ದಂಪತಿಗೆ ವಿಚ್ಛೇದನ ನೀಡಿದೆ. ಆದರೆ ವಾರಕ್ಕೊಮ್ಮೆ ಮಗನನ್ನು ಭೇಟಿಯಾಗಲು ತಂದೆಗೆ ನ್ಯಾಯಾಲಯ ಅನುಮತಿ ನೀಡಿದೆ. ಸುಚನಾಗೆ ಇದು ಅಷ್ಟಾಗಿ ಇಷ್ಟವಾಗಲಿಲ್ಲ. ಭಾನುವಾರ ತನ್ನ ಮಗನನ್ನು ತಂದೆಯ ಬಳಿಗೆ ಕಳುಹಿಸಲು ಆಕೆಗೆ ಸುತರಾಂ ಇಷ್ಟವಿರಲಿಲ್ಲ. ಅದಕ್ಕಾಗಿಯೇ ಆಕೆ ತನ್ನ ಮಗನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಗ್ಯಾರಂಟಿಗಳ ಹೊರತಾಗಿ ಅಭಿವೃದ್ಧಿಗೂ ಹಣ ಮೀಸಲಿಟ್ಟು ಖರ್ಚು ಮಾಡಿದ್ದೇವೆ : ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು ಮೇ 20: ಬಿಜೆಪಿಯ ನಿರಂತರ ಅಪಪ್ರಚಾರದ ನಡುವೆಯೂ ಗ್ಯಾರಂಟಿಗಳು ಜನರ ಮನೆ ಮನೆ ತಲುಪಿವೆ. ಗ್ಯಾರಂಟಿಗಳ ಹೊರತಾಗಿ ಅಭಿವೃದ್ಧಿಗೂ ಹಣ ಮೀಸಲಿಟ್ಟು ಖರ್ಚು ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಕಿ ಅಂಶಗಳ

ಬೆಂಗಳೂರಿನಲ್ಲಿ ನಟ-ನಟಿಯರ ರೇವ್ ಪಾರ್ಟಿಯಲ್ಲಿ ಸಿಕ್ಕಿದ್ದೇನು..?

  ಬೆಂಗಳೂರು: ಇಂದು ಬೆಳಗಿನ ಜಾವ 3 ಗಂಟೆ ವೇಳೆಗೆ ಎಲೆಕ್ಟ್ರಾನಿಕ್ ಸಿಟಿ ಬಳಿಯ ಫಾರ್ಮ್ ಹೌಸ್ ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ತೆಲುಗು

ಸವಾಲುಗಳ ನಡುವೆಯೇ ಜಯಭೇರಿ ಬಾರಿಸಿದ ಸಿದ್ದರಾಮಯ್ಯ ಸರ್ಕಾರ : ಇಂದಿಗೆ ಒಂದು ವರ್ಷ

  2023 ಮೇ 20ರಂದು ಕಾಂಗ್ರೆಸ್ ಪಕ್ಷ ಸರ್ಕಾರ ರಚನೆ ಮಾಡಿತ್ತು, ಸಿದ್ದರಾಮಯ್ಯ ಅವರು ಸಿಎಂ ಆಗಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದರು. ಇಂದಿಗೆ ಆ ಸಂಭ್ರಮದ ದಿನಕ್ಕೆ ವರ್ಷದ ಸಂಭ್ರಮ. ಸಿದ್ದರಾಮಯ್ಯ ಸರ್ಕಾರ

error: Content is protected !!