ಮಂಗಳೂರು: ಬಿಜೆಪಿಯಿಂದ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಚೈತ್ರಾ ಕೋಟಿ ಕೋಟಿ ಮೋಸ ಮಾಡಿದ್ದಳು. ಉದ್ಯಮಿ ಗೋವಿಂದ ಬಾಬುಗೆ ವಂಚಿಸಿದ್ದ ಆರೋಪಕ್ಕೆ ಈಗ ಜೈಲಿನಲ್ಲಿದ್ದಾಳೆ. ಇದೀಗ ಮಂಗಳೂರಿನಲ್ಲಿ ಮತ್ತೆ ಅಂಥದ್ದೆ ವಂಚನೆಯ ಕೇಸ್ ಮತ್ತೆ ಬಯಲಿಗೆ ಬಂದಿದೆ. ಬಿಜೆಪಿಯ ನಳೀನ್ ಕುಮಾರ್ ಕಟೀಲ್ ಹೆಸರೇಳಿಕೊಂಡು ಕೋಟ್ಯಾಂತರ ರೂಪಾಯಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಸುಮಾರು 2.55 ಕೋಟಿ ಹಣ ತೆಗೆದುಕೊಂಡ ಆರೋಪ ಇದಾಗಿದೆ. ಹಗರಿಬೊಮ್ಮನಹಳ್ಳಿಯ ಶಿವಮೂರ್ತಿ ಎನ್ನುವವರು ಈ ಸಂಬಂಧ ದೂರು ದಾಖಲಿಸಿದ್ದಾರೆ. ವಿಜಯಪುರದ ರೇವಣ್ಣ ಸಿದ್ಧಪ್ಪ ಹಾಗೂ ಪುತ್ತೂರಿನ ಬಿಜೆಪಿ ಮುಖಂಡ ಶೇಖರ್ ಎನ್ ಪಿ ಅವರ ಮೇಲೆ ದೂರು ದಾಖಲಾಗಿದೆ. ಈ ಸಂಬಂಧ ವಿಜಯನಗರ ಜಿಲ್ಲೆ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಎನ್ ದಾಖಲಾಗಿದೆ. ವಿಧಾನಸಭೆ ಟಿಕೆಟ್ ಕೊಡಿಸುವುದಾಗಿ, ಕೋಟ್ಯಾಂತರ ಹಣ ತೆಗೆದುಕೊಂಡಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ನಳೀನ್ ಕುಮಾರ್ ಹೆಸರು ಕೂಡ ಕೇಳಿ ಬಂದಿದೆ. ದೂರು ನೀಡಿರುವ ಶಿವಮೂರ್ತಿ, ಬೆಂಗಳೂರಿನ ಬಿಜೆಪಿ ರಾಜ್ಯಾಧ್ಯಕ್ಷರ ಕಚೇರಿಯಲ್ಲಿ, ನಳೀನ್ ಕುಮಾರ್ ಕಟೀಲ್ ರನ್ನ ಶೇಖರ್ ಭೇಟಿಯಾಗಿದ್ದರು. ಬಳಿಕ ಶೇಖರ್ ಕಟೀಲು ಕರೆ ಮಾಡಿ ಟಿಕೆಟ್ ವಿಚಾರವಾಗಿ ಶೇಖರ್ ಬಳಿ ಮಾತನಾಡಿ ಎಂದಿದ್ದರು. ವಿಜಯನಗರ ಜಿಲ್ಲೆ, ಹಗರಿಬೊಮ್ಮನಹಳ್ಳಿ ಎಸ್ಸಿ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೊಟ್ಟರಿನ ಬಿಜೆಪಿ ಮುಖಂಡ ರೇವಣ್ಣ ಸಿದ್ದಪ್ಪ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಬಿಜೆಪಿ ಮುಖಂಡ ಶೇಖರ್ ಎನ್.ಪಿ ಎಂಬುವವರು ಒತರೆ ಕಾರ್ಯಕ್ರಮಗಳಿಗೆ ಹೋದಾಗ ಪರಿಚಯವಾಗಿತ್ತು. ಬಳಿಕ 2023ರ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ನನ್ನನ್ನು ಪದೇ ಪದೇ ಭೇಟಿ ಮಾಡಿ ಬಿಜೆಪಿ ಟಿಕೆಟ್ ಕೊಡಿಸುವೇ. ನೀವು ಟಿಕೆಟ್ ಪಡೆಯಲು ಯೋಗ್ಯರು ಎನ್ನುವ ಮಾತುಗಳನ್ನಾಡಿದ್ದರು. ನಂತರ 2022ರ ಅಕ್ಟೋಬರ್ 23ರಂದಯ ರೇವಣ್ಣ ಸಿದ್ದಪ್ಪ ನನ್ನನ್ನು ಬೆಂಗಳೂರಿಗೆ ಕರೆತಂದು ಒಂದು ಹೋಟೆಲ್ನಲ್ಲಿ ಪುತ್ತೂರಿನ ಬಿಜೆಪಿ ಮಖಂಡ ಶೇಖರ್ ಅವರನ್ನು ಪಡಿಚಯಿಸಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ.