ಬೆಂಗಳೂರು: ಇತ್ತೀಚಿಗೆ ನಡೆಯುತ್ತಿರುವಂತ ಘಟನೆಗಳು, ವರದಿಯಾಗುತ್ತಿರುವ ಕೇಸ್ ಗಳನ್ನ ನೋಡಿದ್ರೆ ಸಿಲಿಕಾನ್ ಸಿಟಿಗೆ ಏನಾಗಿದೆ ಎಂಬ ಪ್ರಶ್ನೆಗಳು ಎದುರಾಗುತ್ತಿವೆ. ಯಾಕಂದ್ರೆ ದಿನ ಬೆಳಗಾದ್ರೆ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಒಂದೇ ಕುಟುಂಬದ ಐವರ ಆತ್ಮಹತ್ಯಾ ಕೇಸ್ ಇನ್ನು ಎಲ್ಲರ ಕಣ್ಮುಂದೆ ಹಾಗೆ ಇದೆ. ಅಷ್ಟೇ ಅಲ್ಲ ಅದಾದ ಬಳಿಕವೂ ಸಾಕಷ್ಟು ಆತ್ಮಹತ್ಯೆ ಬಗ್ಗೆ ವರದಿಯಾಗಿದೆ. ಇದೆಲ್ಲವೂ ಚಾಲ್ತಿಯಲ್ಲಿರುವಾಗಲೆ ಮತ್ತೊಂದು ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
40 ವರ್ಷದ ವಸಂತ, 13 ವರ್ಷದ ಯಶ್ವಂತ್, 6 ವರ್ಷದ ನಿಶ್ವಿಕಾ ಆತ್ಮಹತ್ಯೆಯಿಂದ ಸಾವನ್ನಪ್ಪಿದವರು. ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮಾನಸಿಕವಾಗಿ ನೊಂದಿದ್ದ ವಸಂತ ಇಬ್ಬರು ಮಕ್ಕಳಿಗೂ ನೇಣು ಬಿಗಿದು, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಸಂತಾಳ ಗಂಡ ಕೊರೊನಾದಿಂದ ಸಾವನ್ನಪ್ಪಿದ್ದರಂತೆ. ಗಂಡನಿಲ್ಲದೆ ಮನೆ ನಿಭಾಯಿಸೋದು ವಸಂತಾಗೆ ಕಷ್ಟಕರವಾಗಿದೆ. ಈ ಬಗ್ಗೆ ಸಂಬಂಧಿಕರೊಟ್ಟಿಗೆ ಅಳಲು ತೋಡಿಕೊಂಡಿದ್ದಳಂತೆ. ಇದೀಗ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.