ಸತತ ಸೋಲಿನ ನಡುವೆ ಆರ್ಸಿಬಿಗೆ ಮತ್ತೊಂದು ಶಾಕ್ : ಮುಂದಿ‌ನ ಪಂದ್ಯಕ್ಕೆ ಮ್ಯಾಕ್ಸಿ ಅಲಭ್ಯ

ಆರ್ಸಿಬಿ ಅಭಿಮಾನಿಗಳ ಕನಸು ಈ ಬಾರಿಯ ಐಪಿಎಲ್ ನಲ್ಲಿಯೂ ನುಚ್ಚು ನೂರಾಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿ ಕಾಣಿಸುತ್ತಿದೆ. ಈಗಾಗಲೇ ಆರ್ಸಿಬಿ ಐದು ಮ್ಯಾಚ್ ಸೋತಿದೆ. ಕೇವಲ ಒಂದೇ ಒಂದು ಮ್ಯಾಚ್ ಗೆದ್ದಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದೇ ಗೆಲ್ಲುತ್ತಾರೆ ಎಂಬ ಭರವಸೆಯನ್ನು ಆರ್ಸಿಬಿ ಫ್ಯಾನ್ಸ್ ಇಟ್ಟುಕೊಂಡಿದ್ದರು. ಆದರೆ ಮುಂಬೈ ಕ್ರೀಡಾಂಗಣದಲ್ಲೂ ಹೀನಾಯವಾಗಿ ಸೋಲು ಕಂಡಿದೆ. ಇದರ ಬೆನ್ನಲ್ಲೇ ಇದೀಗ ಆರ್ಸಿಬಿ ಶಾಕ್ ಆಗಿದ್ದು, ಸ್ಟಾರ್ ಪ್ಲೇಯರ್ ಮುಂದಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

 

ಮುಂಬೈ ಇಂಡಿಯನ್ಸ್ ಜೊತೆಗಿನ ಪಂದ್ಯದಲ್ಲಿ ಮ್ಯಾಕ್ಸ್ ವೆಲ್ ಇಂಜೂರಿಗೆ ಒಳಗಾಗಿದ್ದಾರೆ. ಥಂಬ್ ಇಂಜೂರಿಯಾಗಿದ್ದು, ಕೈಗೆ ತೀವ್ರವಾದ ಗಾಯಗಳಾಗಿವೆ. ಹೀಗಾಗಿ ಮ್ಯಾಕ್ಸ್ ಗೆ ಚಿಕಿತ್ಸೆಯ ಅವಶ್ಯಕತೆ ಇದ್ದು ಮುಂದಿನ ಪಂದ್ಯದಲ್ಲಿ ಆಡುವುದಕ್ಕೆ ಕಷ್ಟ ಸಾಧ್ಯವಾಗಿದೆ. ಈ ಮೂಲಕ ಮ್ಯಾಕ್ಸ್ ವೆಲ್ ನೆಕ್ಸ್ಟ ಮ್ಯಾಚ್ ಗೆ ಅಲಭ್ಯರಾಗಿದ್ದಾರೆ.

ಏಪ್ರಿಲ್​ 15ನೇ ತಾರೀಕು ನಡೆಯಲಿರೋ ಸನ್​ರೈಸರ್ಸ್​​​​ ಹೈದರಾಬಾದ್​​​ ತಂಡದ ವಿರುದ್ಧ ಆರ್ಸಿಬಿ ಮ್ಯಾಚ್ ನಡೆಯಲಿದೆ. ಮ್ಯಾಕ್ಸ್‌ವೆಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟ್ಸ್‌ಮನ್. ಇವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡುತ್ತಿಲ್ಲ. ಸತತ 5 ಸೋಲಿನಿಂದ ಕಂಗೆಟ್ಟ ಆರ್​​ಸಿಬಿ ಹೈದರಾಬಾದ್​​ ವಿರುದ್ಧ ಪಂದ್ಯಕ್ಕಾಗಿ ತಂಡದಲ್ಲಿ ಭಾರೀ ಬದಲಾವಣೆ ಮಾಡೋ ಸಾಧ್ಯತೆ ಇದೆ. ಕಳೆದ 6 ಪಂದ್ಯದಲ್ಲೂ ಕಳಪೆ ಪ್ರದರ್ಶನ ನೀಡಿರೋ ಸ್ಟಾರ್​ ಆಲ್​ರೌಂಡರ್​ ಮ್ಯಾಕ್ಸಿ ಅವರು ಗಾಯಗೊಂಡ ಕಾರಣ ಕೈ ಬಿಡೋ ಸಾಧ್ಯತೆ ಇದೆ. ಅವರ ಸ್ಥಾನಕ್ಕೆ ಮ್ಯಾಕ್ಸಿ ಬದಲಿಗೆ ಇಂಗ್ಲೆಂಡ್ ಆಲ್​ರೌಂಡರ್ ಆಗಿರುವ ವಿಲ್​ ಜ್ಯಾಕ್ಸ್​ ಆಯ್ಕೆ ಮಾಡಬಹುದು ಎಂದು ವರದಿಯಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *