ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ರನ್ಯಾ ರಾವ್ ಸದ್ಯಕ್ಕೆ ಪೊಲೀಸ್ ಠಾಣೆಯಲ್ಲಿದ್ದಾರೆ. ತನಿಖೆ ಕೂಡ ನಡೆಯುತ್ತಿದೆ. ಇದೀಗ ರನ್ಯಾ ರಾವ್ ಅವರಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಎದುರಾಗಿದೆ. ಅದುವೆ ಪತಿ ದೂರವಾಗುವ ನಿರ್ಧಾರ ಮಾಡಿದ್ದಾರೆ. ಗೋಲ್ಡ್ ಸ್ಮಗ್ಲಿಂಗ್ ನಲ್ಲಿ ಲಾಕ್ ಆದ ಮೇಲೆ ಪತಿ ಜಿತಿನ್ ಹುಕ್ಕೇರಿ ಅವರು ಡಿವೋರ್ಸ್ ತೆಗೆದುಕೊಳ್ಳುವುದಕ್ಕೆ ನಿರ್ಧಾರ ಮಾಡಿದ್ದಾರೆ. ಮದುವೆಯಾದಾಗಿನಿಂದ ಜಿತಿನ್ ಹುಕ್ಕೇರಿ ಹಾಗೂ ರನ್ಯಾ ರಾವ್ ಸಂಬಂಧ ಹೇಳಿಕೊಳ್ಳುವಷ್ಟು ಚೆನ್ನಾಗಿಲ್ಲ. ಹೀಗಾಗಿ ಈಗ ಡಿವೋರ್ಸ್ ಗೆ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

ಗೋಲ್ಡ್ ಸ್ಮಗ್ಲಿಂಗ್ ನಲ್ಲಿ ಲಾಕ್ ಆಗಿರುವ ರನ್ಯಾ ರಾವ್ ಜಾಮೀನಿಗಾಗಿ ಒದ್ದಾಡುತ್ತಿದ್ದಾರೆ. ಜಾಮೀನು ಸಿಕ್ಕರೆ ಸಾಕು ಎನ್ನುತ್ತಿದ್ದಾರೆ. ಜಾಮೀನು ಪಡೆಯಲು ಹೈಕೋರ್ಟ್ ಮೊರೆ ಹೋಗಲು ನಿರ್ಧಾರ ಮಾಡಿದ್ದಾರೆ. ಹೀಗಿರುವಾಗ ಪತಿಯಿಂದಾನೂ ಶಾಕಿಂಗ್ ನ್ಯೂಸ್ ಎದುರಾಗಿದೆ.

ಜೈಲಿನಲ್ಲಿರುವ ರನ್ಯಾ ರಾವ್ ಅವರಿಗೆ ಪತಿ ಜಿತಿನ್ ಹುಕ್ಕೇರಿ ಅವರು ಡಿವೋರ್ಸ್ ನೀಡುತ್ತಿದ್ದಾರೆ. ಇಂದು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಕೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಮದುವೆಯಾದಾಗಿನಿಂದ ರನ್ಯಾ ರಾವ್ ಹಾಗೂ ಜಿತಿನ್ ನಡುವೆ ಒಂದಲ್ಲ ಒಂದು ಭಿನ್ನಾಭಿಪ್ರಾಯಗಳು ಇದ್ದವು. ಹೀಗಾಗಿ ಜಿತಿನ್ ಕೊನೆಯದಾಗಿ ದಾಂಪತ್ಯ ಜೀವನಕ್ಕೆ ಅಂತ್ಯವಾಡಲು ನಿರ್ಧಾರ ಮಾಡಿದ್ದಾರೆ.
ರನ್ಯಾ ರಾವ್ ತಂದೆ ಎಡಿಜಿಪಿ ಆಗಿದ್ದ ಕಾರಣ, ಅವರ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಪ್ರೋಟೋಕಾಲ್ ಬಳಕೆ ಮಾಡಿಕೊಂಡು ಗೋಲ್ಡ್ ಸ್ಮಗ್ಲಿಂಗ್ ಅನ್ನು ಸುಲಭವಾಗಿ ಮಾಡ್ತಾ ಇದ್ದರು. ಸದ್ಯ ಪೊಲೀಸರಿಂದ ಲಾಕ್ ಆಗಿರುವ ರನ್ಯಾ ರಾವ್ ಕಂಬಿ ಎಣಿಸುವಂತೆ ಆಗಿದೆ.

