ಸುಜಯೇಂದ್ರ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲು: ಆರೋಪವೇನು ?

1 Min Read

ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಆಪ್ತನೆಂದು ಹೇಳಿಕೊಂಡು ವಂಚನೆ ಎಸಗಿದ್ಷ  ಆರೋಪವಿರುವ ಸುಜಯೇಂದ್ರ  ವಿರುದ್ಧ ಮತ್ತೊಂದು ಎಫ್‌ಐಆರ್  ದಾಖಲಾಗಿದೆ. ರಾಜ್ಯಪಾಲರ  ಸಹಿಯನ್ನು ನಕಲು ಮಾಡಿ ಅನಧಿಕೃತವಾಗಿ ಪತ್ರ ಬರೆದ ಆರೋಪ ಕೇಳಿಬರುತ್ತಿದೆ.

ರಾಜ್ಯಪಾಲರ ಸಹಿಯನ್ನು ನಕಲಿ ಮಾಡಿ, ವಿಐಟಿಯು ಕುಲಪತಿಗಳಿಗೆ ಪತ್ರ ರಚಿಸಿ, ವಿದ್ಯಾರ್ಥಿಯೊಬ್ಬರಿಗೆ ಸೀಟ್ ಮಂಜೂರು ಮಾಡುವಂತೆ ಸೂಚನೆ ನೀಡಲಾಗಿದೆ, 2025ರಲ್ಲಿ ಈ ನಕಲಿ ಪತ್ರ ಬರೆಯಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.

ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರದೀಪ್ ಅವರು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಲೋಕಭವನದ ಲೆಟರ್‌ಹೆಡ್ ದುರುಪಯೋಗ ಮಾಡಿಕೊಂಡು ನಕಲಿ ಸಹಿ ಬಳಸಿರುವುದರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ. ಪ್ರಕರಣವನ್ನು ಬಳಿಕ ವಿಧಾನಸೌಧ ಠಾಣೆಯಿಂದ ವಿಜಯನಗರ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

Share This Article
Enable Notifications OK No thanks