ಬೆಂಗಳೂರು: ಬಿಟ್ ಕಾಯಿನ್ ದಂಧೆಯಲ್ಲಿ ಪೊಲೀಸರ ಬಲೆಗೆ ಸಿಕ್ಕಿದ್ದ ಹ್ಯಾಕರ್ ಶ್ರೀಕಿಯ ಮತ್ತೊಂದು ಭಯಾನಕ ಮುಖ ಬಯಲಾಗಿದೆ. ಶ್ರೀಮಂತರ ಖಾತೆಗಷ್ಟೇ ಅಲ್ಲ, ಕಡು ಬಡವರ ಖಾತೆಯಲ್ಲಿದ್ದ ಹಣವನ್ನು ಈತ ಎಗರಿಸಿದ್ದಾನೆ.
ಒಂದೆರಡಲ್ಲ ಬರೋಬ್ಬರಿ 80 ಕೋಟಿ ಹಣವನ್ನ ಯಾಮಾರಿಸಿದ್ದಾನೆ. ಈ ಸಂಬಂಧ ಪ್ರಧಾನಿ ಮೋದಿಗೆ ಪತ್ರವೊಂದು ಬಂದಿದೆಯಂತೆ. ಕೇಂದ್ರ ಸರ್ಕಾರ ತೀರಾ ಬಡವರಿಗೆ ಉಪಯೋಗವಾಗಲಿ ಎಂದು ಜನಧನ್ ಯೋಜನೆಯನ್ನ ಜಾರಿಗೆ ತಂದಿದೆ. ಅದನ್ನೇ ಹ್ಯಾಕರ್ ಶ್ರೀಕಿ ತನ್ನ ಬಂಡವಾಳವನ್ನಾಗಿಸಿಕೊಂಡಿದ್ದಾನೆ.
ಸುಮಾರು 80 ಕೋಟಿ ಜನ್ ಧನ್ ಅಕೌಂಟ್ ಹ್ಯಾಕ್ ಮಾಡಿದ್ದು, ಸರ್ಕಾರದಿಂದ ಜಮೆಯಾಗುತ್ತಿದ್ದ ಬಡವರ ಹಣವನ್ನು ಎಗರಿಸಿದ್ದಾನೆ ಎನ್ನಲಾಗಿದೆ. ಬಡವರ ಹಣವನ್ನು ಶ್ರೀಕಿ ಗುಳುಂ ಮಾಡಿದ್ದಾನೆ ಎನ್ನುವ ಆರೋಪ ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ಬಹಿರಂಗವಾಗಿದೆ.