ಆಗಸ್ಟ್ 1ರಂದು ಯಶ್ ತಾಯಿ ಪುಷ್ಪ ಅರುಣ್ ಕುಮಾರ್ ಅವರ ನಿರ್ಮಾಣದ ಕೊತ್ತಲವಾಡಿ ಸಿನಿಮಾ ರಿಲೀಸ್ ಆಗಿತ್ತು. ಅಂದುಕೊಂಡ ಮಟ್ಟಿಗೆ ಯಶಸ್ಸು ಕಾಣಲಿಲ್ಲ. ಇದೀಗ ಆ ಸಿನಿಮಾದ ಕಲಾವಿದರಿಗೆ ಪೇಮೆಂಟ್ ಆಗಿಲ್ಲ ಎಂಬ ಆರೋಪ ಓಡಾಡುತ್ತಿದೆ.
ವಿಡಿಯೋ ಮೂಲಕ ಸಂಭಾವನೆ ಬಂದಿಲ್ಲ ಅಂತ ನಟ ಮಹೇಶ್ ಗುರು ಆರೋಪ ಮಾಡಿದ್ದಾರೆ. ನಿರ್ಮಾಪಕಿ ಪುಷ್ಪ ಅವ್ರ ಗಮನಕ್ಕೆ ತರೋದಕ್ಕೆ ವಿಡಿಯೋ ಮಾಡಿದ್ದರು. ಮಹೇಶ್ ಗುರು, ಖಳನಟನಾಗಿ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡಿದ್ದಾರೆ. ನಿರ್ದೇಶಕರ ಕಡೆ ಯಿಂದ ನಮಗೆ ಚಾನ್ಸ್ ಸಿಕ್ತು ಅವಾಗ ಒಂದು ಪ್ಯಾಕೇಜ್ ಮಾತಾಡಿದ್ರು ಅಡ್ವಾನ್ಸ್ ದುಡ್ಡುಕೊಡ್ತೀವಿ ಅಂದ್ರು ಓಕೆ ಅಂತ ಒಪ್ಪಿಕೊಂಡೆ. ಅದಾದ ನಂತ್ರ ಮುಹೂರ್ತ ಅಯ್ತು ದುಡ್ಡು ಕೊಡ್ಲಿಲ್ಲ ಮೂರು ತಿಂಗಳು ಕೆಲಸ ಮಾಡುದ್ವಿ ಶೂಟಿಂಗ್ ಮುಗಿದ ಮೇಲು ಪೇಮೆಂಟ್ ಕೊಡ್ಲಿಲ್ಲ.
ಡಬ್ಬಿಂಗ್ ಮಾಡಿ ಬಂದು ಮುಗಿದ್ಮೇಲೆ ಪೇಮೆಂಟ್ ಕೊಡ್ತೀನಿ ಅಂದ್ರು ನಿರ್ದೇಶಕ್ರು ಅದು ಮಾಡುದ್ವಿ ಪೇಮೆಂಟ್ ಕೊಡ್ಲಿಲ್ಲ. ಸಿನಿಮಾ ಪ್ರಮೋಷನ್ ಜೋರಾಗಿ ಮಾಡಿದ್ರು ನಮ್ಮನ್ನ ಎಲ್ಲಿಗೂ ಕರೀಲಿಲ್ಲ ದುಡ್ಡು ಕೊಡ್ಲಿಲ್ಲ. ಈಗ ಓಟಿಟಿಗೆ ಬಂದಿದೆ ಆದ್ರು ದುಡ್ಡು ಕೊಟ್ಟಿಲ್ಲ ಪ್ರೊಡ್ಯೂಸರ್ಗೆ ಗೊತ್ತೋ ಗೊತ್ತಿಲ್ವ ಗೊತ್ತಿಲ್ಲ. ಪ್ರೊಡ್ಯೂಸರ್ ಪುಷ್ಪ ಅವ್ರಿಗೆ ಹೇಳೋಣ ಅಂದ್ರೆ ಯಾರು ನಂಬರ್ ಕೂಡ ಕೊಡ್ತಿಲ್ಲ. ನಮಗೆ ಆಗಿರೋ ಮೋಸನ ನಿರ್ಮಾಪಕಿಗೆ ತಿಳಿಸಿ ನಮಗೆ ಆಗಿರೋ ಅನ್ಯಾಯಕ್ಕೆ ನ್ಯಾಯ ಸಿಗ್ಬೇಕು ಅನ್ನೋದೇ ನಾನು ಈ ವಿಡಿಯೋ ಮಾಡಿರೋ ಉದ್ದೇಶ ಅಷ್ಟೇ.ಶ್ರೀರಾಜ್ ನಿರ್ದೇಶನದ ಸಿನಿಮಾ ಕೊತ್ತಲವಾಡಿ. ಮಹೇಶ್ ಗುರು ಈ ಮೊದಲು ಫೇಸ್ಬುಕ್ ನಲ್ಲಿ ಈ ಸಂಬಂಧ ವಿಡಿಯೋ ಮಾಡಿ ಹಾಕಿದ್ದರು. ಈಗ ಆ ವಿಡಿಯೋ ಡಿಲೀಟ್ ಆಗಿದೆ.
