ಚಳಿಗಾಲದ ಅಧಿವೇಶನಕ್ಕೆ ಮೊದಲು ಹಾಜರಾಗುವ ಶಾಸಕರಿಗೆ ಬಹುಮಾನ ಘೋಷಣೆ

1 Min Read

 

ಬೆಳಗಾವಿ: ನಾಳೆಯಿಂದ 10 ದಿನಗಳ ಕಾಲ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಸುವರ್ಣ ಸೌಧದಲ್ಲಿ ನಡೆಯಲಿವೆ ಅಧಿವೇಶನಕ್ಕೆ ಮೊದಲು ಹಾಜರಾಗುವ ಶಾಸಕರಿಗೆ ವಿಶೇಷ ಬಹುಮಾನವನ್ನು ಘೋಷಣೆ ಮಾಡಲಾಗಿದೆ.

 

ಚಳಿಗಾಲದ ಅಧಿವೇಶನದ ಹಿನ್ನೆಲೆ, ಇಂದು ಸ್ಪೀಕರ್ ಯುಟಿ ಖಾದರ್ ಹಾಗೂ ಬಸವರಾಜ್ ಹೊರಟ್ಟಿ ಅವರು ಸುದ್ದಿಗೋಷ್ಟಿ ನಡೆಸಿ, ಅದರ ಮಾಹಿತಿ ಹಂಚಿಕೊಂಡಿದ್ದಾರೆ. ಡಿಸೆಂಬರ್ 4ರಿಂದ 15ರ ವರೆಗೂ ಚಳಿಗಾಲದ ಅಧಿವೇಶನ ನಿಗಧಿಯಾಗಿದೆ. ಈ ಬಾರಿಯ ಕಲಾಪದಲ್ಲಿ ಒಟ್ಟು ಮೂರು ಬಿಲ್ ಗಳ ಬಗ್ಗೆ ಚರ್ಚೆಯಾಗಲಿದೆ. ಉತ್ತರ ಕರ್ನಾಟಕದ ಮಹದಾಯಿ, ಕೃಷ್ಣಾ ಹಾಗೂ ಬರಗಾಲದ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡಲಾಗುತ್ತದೆ. ಈ ಅಧಿವೇಶನದಲ್ಲಿ ಭಾಗಿಯಾಗುವ ಸಚಿವರಿ, ಶಾಸಕರಿಗೆ, ಅಧಿಕಾರಿಗಳಿಗೆ ಊಟ, ವಸತಿ ವ್ಯವಸ್ಥೆಯನ್ನು ಮಾಡಲಾಗಿದೆ. ಸುವರ್ಣ ಸೌಧಕ್ಕೆ ವರ್ಷವಿಡಿ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ.

 

ಬೆಳಗಾವಿ ಅಧಿವೇಶನ ಅಂದ್ರೆ ಬರೀ ಪ್ರತಿಭಟನೆ ಎಂಬುದನ್ನು ಹೋಗಲಾಡಿಸಲು ಚರ್ಚೆ ನಡೆಸಲಾಗುತ್ತದೆ. ಅಧಿವೇಶನ ನಡೆಯುವಾಗ ಹೊರಗಡೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಕಲಾಪ ವೀಕ್ಷಣೆಗೆ ಬರುವ ಶಾಲಾ ಮಕ್ಕಳ ಆರೋಗ್ಯದ ಬಗ್ಗೆಯೂ ಗಮನ ಹರಿಸಲಾಗುತ್ತಿದೆ. ಬಿಸಿಲಿನಲ್ಲಿ ನಿಲ್ಲದಂತೆ ವ್ಯವಸ್ಥೆ ಮಾಡಲಾಗಿದ್ದು, ತಂಪು ಪಾನೀಯಗಳನ್ನು ನೀಡಲಾಗುತ್ತಿದೆ. ಮಕ್ಕಳು ಅರ್ಧ ಗಂಟೆ ಕಲಾಪವನ್ನು ನೋಡಲು ಅವಕಾಶ ನೀಡಲಾಗಿದೆ. ಜೊತೆಗೆ ಕಲಾಪಕ್ಕೆ ಮೊದಲು ಹಾಜರಾಗುವ ಶಾಸಕರಿಗೆ ವಿಶೇಷ ಬಹುಮಾನ ನೀಡಲಾಗುತ್ತಿದೆ. ಅಶೋಕ ಚಕ್ರ ಇರುವ ಚಹಾ ಕಪ್ ಬಹುಮಾನವಾಗಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *