ಕೇಂದ್ರ ಬಜೆಟ್ 2025ನೇ ಸಾಲಿನ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರು ಮಂಡನೆ ಮಾಡಿದ್ದಾರೆ. ಸತತ 8ನೇ ಬಾರಿಗೆ ಬಜೆಟ್ ಮಂಡನೆ ಮಾಡುತ್ತಿರುವ ನಿರ್ಮಲಾ ಸೀತರಾಮನ್, ಈ ಬಾರಿಯ ಬಜೆಟ್ ನಲ್ಲಿ ಆರಂಭದಲ್ಲಿಯೇ ರೈತರ ಪರವಾದ ಯೋಜನೆ ಮಂಡಿಸಿದ್ದಾರೆ. ಪಿಎಂ ಧನ ಧಾನ್ಯ ಕೃಷಿ ಯೋಜನೆಯ ಜಾರಿ ಬಗ್ಗೆ ಘೋಷಣೆ ಮಾಡಿದ್ದಾರೆ. ಇದರಿಂದ 1.7 ಕೋಟಿ ರೈತರಿಗೆ ಲಾಭ ಸಿಗಲಿದೆ.

100 ಜಿಲ್ಲೆಗಳಲ್ಲಿ ಪಿಎಂ ಧನಧಾನ್ಯ ಯೋಜನೆಯನ್ನು ಜಾರಿಗೆ ತರಲಿದ್ದಾರೆ. ತರಕಾರಿ, ಹಣ್ಣುಗಳಿಗೆ ಸಮಗ್ರ ಯೋಜನೆ ಜಾರಿಗೆ ತರುವುದು ಹಾಗೂ ಬಿಹಾರದಲ್ಲಿ ಮಕಾನ ಬೋರ್ಡ್ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಮಕಾನ ರೈತರಿಗೆ ಪ್ರೋತ್ಸಾಹ ನೀಡಲು ಬೋರ್ಡ್ ಸ್ಥಾಪನೆ ಮಾಡಲಾಗುತ್ತಿದೆ. ಇದರಿಂದ ಹೆಚ್ಚು ಇಳುವರಿಗೆ ನಿರೀಕ್ಷೆ ಮಾಟಲಾಗುತ್ತಿದೆಮ ಗ್ರಾಮೀಣ ರೈತರು, ಮಹಿಳೆಯರನ್ನು ಒಳಗೊಂಡ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ. ಅಲ್ಪಾವಧಿ ಸಾಲದಿಂದ ಅಭಿವೃದ್ಧಿ ಹೊಂದುವ ಗುರಿಯನ್ನು ಹೊಂದಲಾಗಿದೆ ಎಂದು ತಿಳಿಸಿದ್ದಾರೆ.
ಕೃಷಿ ವಲಯದ ಸುಧಾರಣೆ ಹಾಗೂ ಉತ್ಪಾದನೆಯನ್ನು ಹಡಚ್ಚು ಮಾಡುವುದು, ಗ್ರಾಮೀಣ ಬದುಕಿನ ಸಮೃದ್ಧಿ ಸ್ಥಿತಿತಾಫಕತ್ವವನ್ನು ಅಭಿವಗೊಳಿಸುವುದು. ಎಲ್ಲರನ್ನು ಜೊತೆಗೆ ತೆಗೆದುಕೊಂಡು ಹೋಗೋ ಅಭಿವೃದ್ಧಿಯ ದಾರಿಯಲ್ಲಿ ನಡೆಯುವುದು. ಮೂಲಭೂತ ಸೌಕರ್ಯಗಳ ಹಾಗೂ ಮೇಕ್ ಇಂಡಿಯಾಗೆ ಹೆಚ್ಚು ಬೂಸ್ಟ್ ನೀಡುವುದು ಈ ಬಜೆಟ್ ನ ಪ್ರಮುಖ ಆದ್ಯತೆಯಾಗಿದೆ. ಎಂಎಸ್ಎಂಇಗಳಿಗೆ ಅತಿಹೆಚ್ಚು ಬೆಂಬಲ ನೀಡುವುದು, ಉದ್ಯೋಗ ಸೃಷ್ಟಿಗೆ ಹೆಚ್ಚು ಒತ್ತು ನೀಡುವುದು, ಎಕಾನಮಿ ಮತ್ತು ಇನೋವೇಷನ್ ವಿಷಯದಲ್ಲಿ ಜನರ ಮೇಲೆ ಹೂಡಿಕೆ ಮಾಡುವುದು.


