ಬೆಂಗಳೂರು: ತೊಗರಿಬೆಳೆಗೆ ನೆಟೆ ರೋಗ ಬಡಿದು ರೈತರು ನಷ್ಟ ಅನುಭವಿಸಿದ್ದರು. ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಾಶವಾಗಿತ್ತು. ರೈತರ ಗೋಳಾಟ ನೋಡಿದ ಸಿಎಂ ಬೊಮ್ಮಾಯಿ ಅವರು, ನಿನ್ನೆ ಸಂಜೆ ಸಭೆ ನಡೆಸಿ, ಪರಿಹಾರ ಘೋಷಿಸಿದ್ದಾರೆ. ಪ್ರತಿ ಹೆಕ್ಟೇರ್ ಬೆಳೆ ನಾಶಕ್ಕೆ 10 ಸಾವಿರ ಪರಿಹಾರ ಹಣವನ್ನು ಘೋಷಣೆ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸಿಎಂ ಬೊಮ್ಮಾಯಿ, ಬೀದರ್, ಕಲಬುರಗಿ, ಯಾದಗಿರಿಯಲ್ಲಿ ನೆಟೆ ರೋಗದಿಂದ ತೊಗರಿಬೆಳೆಗೆ ಸಂಭವಿಸಿದ ಬೆಳೆಹಾನಿಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಲಾಗಿದೆ. ಸರ್ಕಾರವು ಪ್ರತಿ ಹೆಕ್ಟೇರ್ ಗೆ 10 ಸಾವಿರದಂತೆ NDRF ಮತ್ತು SDRF ಮಾರ್ಗಸೂಚಿಯಡಿ ಗರಿಷ್ಠ 2 ಹೆಕ್ಟೇರ್ ಗೆ ಪರಿಹಾರ ಸೀಮಿತಾವಗುವಂತೆ ಸೂಚನೆ ನೀಡಿದೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಸುಮಾರು 2 ಲಕ್ಷ ಹೆಕ್ಟೇರ್ ನಷ್ಟು ತೊಗರಿ ಬೆಳೆ ನಾಶವಾಗಿದೆ. ಇದಕ್ಕೆ ಪರಿಹಾರವಾಗಿ ಒಟ್ಟು 223 ಕೋಟಿ ರೂಪಾಯಿಯನ್ನು ಘೋಷಣೆ ಮಾಡಿದೆ ಸರ್ಕಾರ. ಇಷ್ಟು ಪರಿಹಾರದಲ್ಲಿ ನೆಟೆ ರೋಗವೂ ಮೂರು ಜಿಲ್ಲೆಗಳಲ್ಲಿ ಉಲ್ಭಣಗೊಂಡಿದೆ. ಸದ್ಯ ಸ್ವಲ್ಪಮಟ್ಟಿಗಾದರೂ ಪರಿಹಾರ ಸಿಕ್ಕಿದ್ದಕ್ಕಾಗಿ ರೈತ ನೆಮ್ಮದಿಯ ನಿಟ್ಟುಸಿರು ಬಿಟ್ಟಂತಾಗಿದೆ.