ಶ್ರೀ ಕ್ಷಿಪ್ರ ಪ್ರಸಾದ ಮಹಾ ಗಣಪತಿ ದೇವಸ್ಥಾನದಲ್ಲಿ ಜೂನ್ 5 ಮತ್ತು 6 ರಂದು ವಾರ್ಷಿಕೋತ್ಸವ ಹಾಗೂ ದಶಮಾನೋತ್ಸವ ಸಮಾರಂಭ

Facebook
Twitter
Telegram
WhatsApp

 

ಸುದ್ದಿಒನ್, ಚಿತ್ರದುರ್ಗ,(ಜೂ.04) : ನಗರದ ಭೀಮಸಮುದ್ರ ರಸ್ತೆಯ ಧವಳಗಿರಿ ಬಡಾವಣೆ ಎರಡನೇ ಹಂತದಲ್ಲಿರುವ ಶ್ರೀ ಕ್ಷಿಪ್ರ ಪ್ರಸಾದ ಮಹಾ ಗಣಪತಿ ದೇವಸ್ಥಾನದ ವಾರ್ಷಿಕೋತ್ಸವ ಕಾರ್ಯಕ್ರಮ ಹಾಗೂ ದಶಮಾನೋತ್ಸವ ಸಮಾರಂಭ ಇದೇ ಜೂನ್ 5 ಮತ್ತು 6 ರಂದು ಹಮ್ಮಿಕೊಳ್ಳಲಾಗಿದೆ.

ಜೂನ್ 5 ರಂದು ಬೆಳಿಗ್ಗೆ 8 ರಿಂದ ಸ್ವಸ್ತಿಪುಣ್ಯಾಹವಾಚನ, ಆಚಾರ್ಯದಿ ಋತ್ವಿಗ್ವಹಣ, ಕ್ಷಿಪ್ರ ಪ್ರಸಾದ ಮಹಾ ಗಣಪತಿಗೆ ಮಹಾನ್ಯಾಸ ಪೂರ್ವಕ ಲಘು ರುದ್ರಾಭಿಷೇಕ ಮಹಾಭಿಷೇಕ ಪೂಜಾದಿಗಳು ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ನಡೆಯಲಿದೆ. ಸಂಜೆ 5.30 ರಿಂದ ರಕ್ಷೋಘ್ನ ಹೋಮ ನಡೆಯಲಿದೆ. ಸಂಜೆ 7 ಗಂಟೆಗೆ  ಶ್ರೀ ಸದ್ಗುರು ಬ್ರಹ್ಮಚೈತನ್ಯ ಮಹಿಳಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ. ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ನಡೆಯಲಿದೆ.

ಜೂನ್ 6ರಂದು ಬೆಳಿಗ್ಗೆ 8 ರಿಂದ ಕ್ಷಿಪ್ರ ಮಹಾಗಣಪತಿಗೆ ಪಂಚಾಮೃತ ಸಹಿತ ರುದ್ರಾಭಿಷೇಕ ಹಾಗೂ ನವಗ್ರಹ ಪುರಸ್ಪರ ಅಷ್ಟದ್ರವ್ಯ ಮಹಾಗಣಪತಿ ಹೋಮ, ಪೂರ್ಣಾಹುತಿ, ಅಲಂಕಾರ ಮಧ್ಯಾಹ್ನ 12 ರಿಂದ ಅಷ್ಠಾವದಾನ ಮಹಾಮಂಗಳಾರತಿ, ಮಧ್ಯಾಹ್ನ 1 ರಿಂದ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 6 ರಿಂದ ದವಳಗಿರಿ ಬಡಾವಣೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹೆಸರು ನೊಂದಾಯಿಸಲು ಮೊಬೈಲ್ ಸಂಖ್ಯೆ 9945436682 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸರ್ಕಾರಿ ಕೆಲಸ ಕೊಡಿಸುವುದಾಗಿ ಸಚಿವರ ಆಪ್ತರಿಂದ ಕೋಟಿ ಕೋಟಿ ಲೂಟಿ : ರಾಯಚೂರು ನಿರುದ್ಯೋಗಿ ಯುವಕರಿಗೆ ಮೋಸ..!

ರಾಯಚೂರು: ರಾಜ್ಯದಲ್ಲಿ ಚೈತ್ರಾ ಮೋಸ ಇನ್ನು ವಿಧವಿಧವಾಗಿ ತೆರೆದುಕೊಳ್ಳುತ್ತಲೇ ಇದೆ. ಬಿಜೆಪಿ ಎಂಎಲ್ಎ ಟಿಕೆಟ್ ಕೊಡುವುದಾಗಿ ಹೇಳಿ ಮೋಸ ಮಾಡಿದ್ದಾಳೆ‌. ಆದರೆ ಈಗ ಮತ್ತೊಂದು ಮೋಸ ಬಯಲಾಗಿದೆ. ಸಚಿವರ ಆಪ್ತರೊಬ್ಬರು ನಿರುದ್ಯೋಗಿ ಯುವಕರನ್ನೇ ಟಾರ್ಗೆಟ್

ಕಾವೇರಿ ವಿಚಾರಕ್ಕೆ ಕಣ್ಣೀರು ಹಾಕಿದ ಮಾಜಿ ಪ್ರಧಾನಿ ದೇವೇಗೌಡ..!

  ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುವುದಿಲ್ಲ ಎಂದು ಆಗ್ರಹಿಸಿ ಇಂದು ಹಲವಾರು ಸಂಘಟನೆಗಳು ಪ್ರತಿಭಟಿಸುತ್ತಿವೆ. ಈ ಮಧ್ಯೆ ಮಾಜಿ ಪ್ರಧಾನಿ ದೇವೇಗೌಡ್ರು ಸುದ್ದಿಗೋಷ್ಟಿ ನಡೆಸಿ, ಕಾವೇರಿ ವಿಚಾರಕ್ಕೆ ಕಣ್ಣೀರು ಹಾಕಿದ್ದಾರೆ‌. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ

ಹಿರಿಯೂರಿನಲ್ಲಿ ನಡೆದ ಜನತಾ ದರ್ಶನ ಹೇಗಿತ್ತು ? ಸಚಿವ ಸುಧಾಕರ್ ಅಧಿಕಾರಿಗಳಿಗೆ ನೀಡಿದ ಸೂಚನೆ ಏನು ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್…!

  ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.25 : ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಸ್ಥಳದಲ್ಲಿಯೇ ಪರಿಹಾರ ಒದಗಿಸಬೇಕು ಎಂದು ಯೋಜನಾ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ  ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಿರಿಯೂರು

error: Content is protected !!