ಸಂಡೂರಿನಲ್ಲಿ ಅನ್ನಪೂರ್ಣ ತುಕರಾಂ ಗೆಲುವು..!

suddionenews
1 Min Read

ಬಳ್ಳಾರಿ: ಸಂಡೂರು ಉಪಚುನಾವಣಾ ಕ್ಷೇತ್ರದಲ್ಲಿ ಅನ್ನಪೂರ್ಣ ತುಕರಾಂ ಇದೀಗ ಗೆಲುವು ಸಾಧಿಸಿದ್ದಾರೆ. ಇನ್ನು ಅಧಿಕೃತ ಘೋಷಣೆಯೊಂದೆ ಬಾಕಿ ಇದೆ. 8,239 ಮತಗಳ ಅಂತರದಲ್ಲಿ ಅನ್ನಪೂರ್ಣ ತುಕರಾಂ ಗೆಲುವು ಕಂಡಿದ್ದಾರೆ. ಸಂಡೂರಿನಲ್ಲಿ ಅನ್ನಪೂರ್ಣ ಖುಷಿ ವ್ಯಕ್ತಪಡಿಸಿದ್ದು, ಕಾರ್ಯಕರ್ತರು ಸಹ ಸಂಭ್ರಮಾಚರಣೆಯಲ್ಲಿ ಮುಳುಗಿದ್ದಾರೆ. ಈಗಾಗಲೇ ಪಟಾಕಿ ಸಿಡಿ, ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ.

ಚನ್ನಪಟ್ಟಣದಲ್ಲಿ ಗೆಲುವಿನತ್ತ ಸಿಪಿ ಯೋಗೀಶ್ವರ್ ಮುನ್ನಡೆ ಸಾಧಿಸಿದ್ದಾರೆ. 14ನೇ ಸುತ್ತಿನಲ್ಲಿಯೂ ಸಿಪಿ ಯೋಗೀಶ್ವರ್ ಅವರು ಮುನ್ನಡೆ ಸಾಧಿಸಿದ್ದಾರೆ. 24 ಸಾವಿರಕ್ಕಿಂತ ಹೆಚ್ಚಿನ ಮತಗಳ ಮುನ್ನಡೆಯನ್ನು ಸಿಪಿ ಯೋಗೀಶ್ವರ್ ಸಾಧಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಡಿಕೆ ಶಿವಕುಮಾರ್ ಅವರ ಫೋಟೋ ಹಿಡಿದು ಮೆರವಣಿಗೆ ಮಾಡುತ್ತಿದ್ದಾರೆ. ಪಟಾಕಿ ಸಿಡಿಸಿ, ಜೋರು ಸಂಭ್ರಮ ಮಾಡುತ್ತಿದ್ದಾರೆ. ಡಿಕೆ ಬ್ರದರ್ಸ್ ಗೆ ಜೈಕಾರ ಹಾಕುತ್ತಿದ್ದಾರೆ. ಸಿಪಿ ಯೋಗೀಶ್ವರ್ ಪತ್ನಿ ಶೀಲಾ ಯೋಗೀಶ್ವರ್ ಕೂಡ ಬಂದು ಆ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ.

 

ಭರತ್ ಬೊಮ್ಮಾಯಿ ಅವರಿಗೆ ಇದು ಮೊದಲ ಚುನಾವಣೆ. ತಂದೆಯವರ ಜೊತೆಗೆ ರಾಜಕೀಯ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ತಂದೆ ಬಸವರಾಜ್ ಬೊಮ್ಮಾಯಿ ಅವರು ಕೂಡ ಮಗನಿಗೆ ಈಗಲೇ ಚುನಾವಣೆ ಬೇಡ ಎನ್ನುತ್ತಿದ್ದರು. ಭರತ್ ಬೊಮ್ಮಾಯಿ ಅವರು ಕೂಡ ನಾನು ಉದ್ಯಮಿಯಾಗಿ ಮುಂದುವರೆಯಬೇಕು ಎಂಬುದನ್ನು ಹೇಳುತ್ತಿದ್ದರು. ಆದರೆ ಹೈಕಮಾಂಡ್ ನೀಡಿದ ಟಿಕೆಟ್ ನಿಂದಾಗಿ ಈಗ ಮೊದಲ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಭರತ್ ಬೊಮ್ಮಾಯಿ ವಿರುದ್ಧ ಯಾಸೀರ್ ಪಠಾಣ್ ಗೆಲುವು ಕಂಡಿದ್ದಾರೆ. ಚುನಾವಣಾ ಉಸ್ತುವಾರಿಯನ್ನು ಸತೀಶ್ ಜಾತಕಿಹೊಳಿ ಒಪ್ಪಿಕೊಂಡಿದ್ದರು. ಸಾಕಷ್ಟು ಕೆಲಸಗಳನ್ನು ಮಾಡಿದ್ದು, ಎಸ್ಸಿ/ಎಸ್ಟಿ ಮತಗಳೆಲ್ಲಾ ಭರತ್ ಬೊಮ್ಮಾಯಿ ಅವರ ಕೈ ತಪ್ಪಿದವಾ ಎಂಬ ಚರ್ಚೆ ಶುರುವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *