ಬೆಂಗಳೂರು: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಒಬ್ಬರಿಗೆ ಹತ್ತು ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಅಕ್ಕಿಯ ಕೊರತೆಯಿಂದಾಗಿ ಐದು ಕೆಜಿ ಅಕ್ಕಿ, ಹಣವನ್ನು ನೀಡಲಾಗುತ್ತಿದೆ. ಈಗಾಗಲೇ ಸಿದ್ದರಾಮಯ್ಯ ಅಕ್ಕಿಗೂ ವ್ಯವಸ್ಥೆ ಮಾಡಿದ್ದು, ಶೀಘ್ರದಲ್ಲಿಯೇ ಹತ್ತು ಕೆಜಿ ಅಕ್ಕಿ ನೀಡಲಿದ್ದಾರೆ ಎಂಬ ಮಾತಿದೆ. ಇದರ ಜೊತೆಗೆ ಮತ್ತೊಂದು ಗುಡ್ ನ್ಯೂಸ್ ಕೂಡ ಇದೆ. ಅದೇನಪ್ಪ ಅಂದ್ರೆ ಅದೇನಪ್ಪ ಅಂದ್ರೆ ಅನ್ನಭಾಗ್ಯ ಯೋಜನೆ ಇನ್ಮುಂದೆ ಡೋರ್ ಡೆಲಿವರಿ ಆಗಲಿದೆ.
ಮನೆ ಬಾಗಿಲಿಗೆ ಅಕ್ಕಿಯನ್ನು ನೀಡಲು ಸರ್ಕಾರ ಯೋಜನೆ ಹಾಕಿಕೊಳ್ಳುತ್ತಿದೆ ಎನ್ನಲಾಗಿದೆ. ಆದರೆ ಅದಕ್ಕೆ ಕಂಡಿಷನ್ ಅಪ್ಲೈ ಹೇಳಲಾಗಿದೆ. ವಯಸ್ಸಾದವರಿಗೆ ಮಾತ್ರ ಈ ಸೌಲಭ್ಯ ಸಿಗುತ್ತದೆ. ಹಾಗಂತ ಮನೆಯಲ್ಲಿ ವಯಸ್ಸಾದವರು ಇದ್ದು, ಮಕ್ಕಳು ಗಟ್ಟಿಯಾಗಿದ್ದಾರೆ ಅಂಥವರಿಗೆಲ್ಲಾ ಈ ಯೋಜನೆ ಸಿಗುವುದಿಲ್ಲ. ಬದಲಿಗೆ 90 ವರ್ಷ ಮೇಲ್ಪಟ್ಟವರು ಮನೆಯಲ್ಲಿ ಒಬ್ಬರೇ ಇದ್ದರೆ ಅಂತಹ ಕಾರ್ಡುದಾರರಿಗೆ ಈ ಯೋಜನೆ ಲಭ್ಯವಾಗುತ್ತದೆ.
ಸರ್ಕಾರದ ಈ ರೀತಿಯ ತೀರ್ಮಾನದಿಂದ ಸಾಕಷ್ಟು ಹಿರೊಯರಿಗೆ ಅನುಕೂಲವಾಗಲಿದೆ. ಒಬ್ಬೊಬ್ಬರೆ ಇರುವ ವೃದ್ಧರು, ಅಕ್ಕಿ ತರುವಾಗ ಇನ್ನೊಬ್ಬರ ಕೈಕಾಲು ಹಿಡಿಯಬೇಕಿತ್ತು. ಆದರೆ ಸರ್ಕಾರ ಇಂಥದ್ದೊಂದು ಯೋಜನೆ ಜಾರಿಗೆ ತಂದರೆ, ಹಿರಿಯರು ನೆಮ್ಮದಿಯಾಗಿ ಜೀವನ ನಡೆಸುವುದಕ್ಕೆ ಅನುಕೂಲವಾಗಲಿದೆ.