ಕೊಪ್ಪಳ: ವರ್ಷದಿಂದಲೂ ಹಿಂದೂಯೇತರರಿಗೆ ವ್ಯಾಪಾರ ನಿಷೇಧ ಮಾಡುವ ಅಭಿಯಾನ ಜೋರಾಗಿದೆ. ಆರಂಭದಲ್ಲಿ ಸದ್ದು ಮಾಡಿದ್ದ ನಿಷೇಧ ಬಳಿಕ ತಣ್ಣಗಾಗಿತ್ತು. ಇದೀಗ ಮತ್ತೆ ವ್ಯಾಪಾರ ನಿಷೇಧದ ಕೂಗು ಕೇಳಿಸುತ್ತಿದೆ. ಅದು ಆಂಜನೇಯ ಹುಟ್ಟಿದ ಅಂಜನಾದ್ರಿ ಬೆಟ್ಟಕ್ಕೂ ತಲುಪಿದೆ.
ಕೊಪ್ಪಳದ ಅಂಜನಾದ್ರಿ ಸ್ಥಳ ದೇಶ ವಿದೇಶದಲ್ಲೂ ಖ್ಯಾತಿ ಪಡೆದಿದೆ. ಇಲ್ಲಿಯೂ ಹಿಂದೂಯೇತರರಿಗೆ ವ್ಯಾಪಾರ ನೀಷೇಧ ಮಾಡಲಾಗಿದೆ. ಡಿಸೆಂಬರ್ 5ರಂದು ಅಂಜನಾದ್ರಿ ಬೆಟ್ಟದಲ್ಲಿ ಮಾಲಾಧಾರಿಗಳು ಬಂದು ಸೇರಲಿದ್ದಾರೆ. ಮಾಲಾಧಾರಿಗಳ ವಿಸರ್ಜನಾ ಯಾತ್ರೆಗೆ ಹಲವು ಜಿಲ್ಲೆಗಳಿಂದ ಹನುಮನ ಭಕ್ತರು ಬರಲಿದ್ದಾರೆ. ಈ ವೇಳೆ ವ್ಯಾಪಾರ ವಹಿವಾಟಿಗೆ ಹಿಂದೂಗಳಿಗೆ ಮಾತ್ರ ಅವಕಾಶ ಕೊಡಬೇಕು ಎಂದು ಮನವಿ ಮಾಡಲಾಗಿದೆ.
ಜಿಲ್ಲಾಧಜಕಾರಿಗೆ ಈ ಸಂಬಂಧ ಹಿಂದೂ ಜಾಗರಣಾ ವೇದಿಕೆ ಮನವಿ ಪತ್ರ ಸಲ್ಲಿಸಿದ್ದು, ವ್ಯಾಪಾರಕ್ಕೆ ಹಿಂದೂ ಹೊರತು ಪಡಿಸಿ, ಮುಸ್ಲಿಂ, ಕ್ರಿಶ್ಚಿಯನ್ ಬೇರೆ ಧರ್ಮದವರಿಗೆ ಅವಕಾಶ ನೀಡಬಾರದು ಎಂದಿದ್ದಾರೆ. ಮನವಿ ಜೊತೆಗೆ ಈ ಸಂಬಂಧ ಬೆಟ್ಟದಲ್ಲಿ ಬ್ಯಾನರ್ ಕೂಡ ಅಳವಡಿಸಿದ್ದಾರೆ.