ಪಾರ್ಕ್ ಅಭಿವೃದ್ದಿ ನಿರ್ಮಾಣ ಕಾಮಗಾರಿಗೆ ಅನಿತಾ ರಮೇಶ್‍ರವರಿಂದ ಭೂಮಿ ಪೂಜೆ

1 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 23 : ಆನೆಬಾಗಿಲು ಬಳಿ ನಗರಸಭೆಯ ಅನುದಾನ 30 ಲಕ್ಷ ರೂ. ವೆಚ್ಚದಲ್ಲಿ ಪಾರ್ಕ್ ನಿರ್ಮಾಣ ಅಭಿವೃದ್ದಿ ಕಾಮಗಾರಿಗೆ ನಗರಸಭೆ ಅಧ್ಯಕ್ಷೆ ಅನಿತಾ ರಮೇಶ್ ಗುರುವಾರ ಭೂಮಿ ಪೂಜೆ ನೆರವೇರಿಸಿದರು.

 

ನಗರಸಭೆ ಅನುದಾನದಲ್ಲಿ ಕೈಗೊಳ್ಳುವ ಈ ಕಾಮಗಾರಿಯ ಜೊತೆ ಪುರಾತನವಾದ ಆನೆಬಾಗಿಲು ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಅಭಿವೃದ್ದಿಪಡಿಸಲು 30 ರೂ.ಗಳನ್ನು ಖರ್ಚು ಮಾಡಲಾಗುವುದೆಂದು ಅನಿತಾ ರಮೇಶ್ ತಿಳಿಸಿದರು.
ನಗರಸಭೆ ಸದಸ್ಯ ಜೆ.ಶಶಿಧರ್, ಮಾಜಿ ಸದಸ್ಯ ಟಿ.ರಮೇಶ್, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಬದ್ರಿನಾಥ್, ವೇದಪ್ರಕಾಶ್‍ಬಾಬಣ್ಣ, ನಾಗರಾಜ್‍ಬೇದ್ರೆ, ಗೋಪಾಲ್‍ರಾವ್ ಜಾಧವ್, ಶ್ಯಾಂಪ್ರಸಾದ್, ಬಾಬುಲಾಲ್‍ಜೈನ್, ಶ್ರೇಣಿಕ್, ಜ್ಯೋತಿ ಲಕ್ಷ್ಮಣ್, ನಗರಸಭೆ ಪೌರಾಯುಕ್ತೆ ಲಕ್ಷ್ಮಿ, ಇಂಜಿನಿಯರ್‍ಗಳು ಈ ಸಂದರ್ಭದಲ್ಲಿ ಹಾಜರಿದ್ದರು.

Share This Article