ಬೆಂಗಳೂರು: ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಡೆದ ಭಿನ್ನಾಭಿಪ್ರಾಯದಿಂದ ಅನಿರುದ್ದ್ ಅವರನ್ನು ಬ್ಯಾನ್ ಮಾಡಲಾಗಿತ್ತು. ಸ್ವಲ್ಪ ಕಾಲ ಸುಮ್ಮನಿದ್ದ ಅನಿರುದ್ದ್ ಇತ್ತಿಚೆಗೆ ಸೂರ್ಯವಂಶ ಧಾರಾವಾಹಿ ಮಾಡುತ್ತಿರುವುದಾಗಿ ಘೋಷಣೆ ಮಾಡಿದ್ದರು. ಎಸ್ ನಾರಾಯಣ್ ಅವರೇ ನಿರ್ದೇಶನ ಮಾಡುತ್ತಿದ್ದರು. ಎಸ್ ನಾರಾಯಣ್ ಅವರಿಗೂ ಕಿರುತೆರೆ ನಿರ್ಮಾಪಕರ ಸಂಘದವರು ಹಳೆಯದ್ದನ್ನು ತಿಳಿಸಿದ್ದು, ಅವರನ್ನು ಹಾಕಿಕೊಂಡು ಸೀರಿಯಲ್ ಮಾಡದಂತೆ ತಿಳಿಸಿದ್ದರು.
ಈ ವಿಚಾರ ನಿನ್ನೆ ಮತ್ತು ಇಂದು ಫಿಲ್ಮ್ ಚೆಂಬರ್ ಗೆ ಕೂಡ ಬಂದಿತ್ತು. ಸಭೆ ನಡೆಸಿದ್ದರು. ಮಧ್ಯಾಹ್ನ ಅನಿರುದ್ದ್ ಮತ್ತು ಫಿಲ್ಮ್ ಚೆಂಬರ್ ಅಧ್ಯಕ್ಷರು ಸುದ್ದಿಗೋಷ್ಠಿ ನಡೆಸಿ ಕ್ಲಾರಿಟಿ ಕೊಟ್ಟಿದ್ದರು. ಮತ್ತೆ ಸಂಜೆ ನಿರ್ಮಾಪಕರ ಜೊತೆಗೂ ಸಂಧಾನ ಸಭೆ ನಡೆದಿದೆ.
ಸಭೆಯ ಬಳಿಕ ನಟ ಅನಿರುದ್ದ್ ಭಾವುಕ ನುಡಿದಿದ್ದಾರೆ. ಜೊತೆ ಜೊತೆಯಲಿ ಧಾರವಾಹಿಗೆ ಹೀಗೆ ಆಗಬಾರದಿತ್ತು. ೩ ವರ್ಷ ಅವರ ಜೊತೆ ಕೆಲಸ ಮಾಡಿದ್ದಿನಿ. ಅಭಿಮಾನಿಗಳಿಗೆ ಕ್ಷಮೆ ಕೇಳ್ತಿನಿ ಎಂದಿದ್ದಾರೆ. ಇದೆ ವೇಳೆ ನಿರ್ದೇಶಕ ಆರೂರು ಜಗದೀಶ್ ಮಾತನಾಡಿ, ಒಟ್ಟಿಗೆ ಕೆಲಸ ಮಾಡೋದು ಕಾಲ ನಿರ್ಧಾರ ಮಾಡುತ್ತೆ ಎಂದಿದ್ದಾರೆ.
ಇನ್ನು ಇದೆ ವೇಳೆ ಕಿರುತೆರೆ ಪರವಾಗಿ ಮಾತನಾಡಿದ ಹಿರಿಯ ನಿರ್ದೇಶಕ ಪಿ.ಶೇಷಾದ್ರಿ, ನಾವೆಲ್ಲ ಒಮ್ಮತದಿಂದ ಒಂದು ನಿರ್ಧಾರಕ್ಕೆ ಬಂದಿದ್ದೀವಿ. ಇಂಡಸ್ಟ್ರಿಯಲ್ಲಿ ಯಾರು ಯಾರನ್ನು ಬ್ಯಾನ್ ಮಾಡೊಕೆ ಆಗಲ್ಲ. ಎಲ್ಲಾ ವಿವಾದ ಇತ್ಯರ್ಥ ಆಗಿದೆ. ಅನಿರುದ್ದ್ ಹೊಸ ಧಾರವಾಹಿಯಲ್ಲಿ ನಟಿಸ್ತಾರೆ ಎಂದಿದ್ದಾರೆ.