ಅಮರಾವತಿ: ಚುನಾವಣೆ ಹತ್ತಿರ ಬಂದಾಗ ರಾಜಕೀಯ ನಾಯಕರು ಜನರಿಗೆ ಆಶ್ವಾಸನೆ ನೀಡೋದು ಸಹಜ. ಆ ಪ್ರಣಾಳಿಕೆಯಲ್ಲಿ ಜನರಿಗೆ ಏನು ಬೇಕೋ ಆ ಅಗತ್ಯ ಸೇವೆಗಳ ಮೇಲೆ ಆಶ್ವಾಸಬೆ ನೀಡುತ್ತಾರೆ. ಅಭಿವೃದ್ಧಿ ಬಗ್ಗೆ ಹೆಚ್ಚು ರಾಜಕಾರಣಿಗಳು ಆಶ್ವಾಸನೆ ನೀಡಿದ್ರೆ, ವಿಜಯವಾಡದಲ್ಲಿ ಬಿಜೆಪಿ ಮುಖಂಡರೊಬ್ಬರು ಎಣ್ಣೆ ಪ್ರಿಯರಿಗೆ ಇಷ್ಟವಾಗುವಂತೆ ಯೋಜನೆ ತರಲು ಹೊರಟಿದ್ದಾರೆ.
ಆಂಧ್ರಪ್ರದೇಶದಲ್ಲಿ 2024ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವನ್ನ ಅಧಿಕಾರಕ್ಕೆ ತಂದರೆ ಕೇವಲ 70 ರೂಪಾಯಿಗೆ ಮದ್ಯ ಸಿಗುವಂತೆ ಮಾಡ್ತೇನೆ ಅಂತ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸೋಮು ವೀರಜ್ಜು ಆಶ್ವಾಸನೆ ನೀಡಿದ್ದಾರೆ. ಅಷ್ಟೇ ಅಲ್ಲ ರಾಜ್ಯದ ಖಜಾನೆಯಲ್ಲಿ ಸಾಕಷ್ಟು ಹಣವಿದ್ದರೆ 50 ರೂಪಾಯಿಗೆ ಸಿಗುವಂತೆ ಮಾಡುತ್ತೇವೆ ಎಂದಿದ್ದಾರೆ.
ಇದೇ ವೇಳೆ ಆಂಧ್ರಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ ವೀರಜ್ಜು, ಅಪಾರ ಸಂಪನ್ಮೂಲ, ಸಂಪತ್ತು ಇದೆ. ಆದರೆ ಯಾವುದೇ ಅಭಿವೃದ್ಧಿಯನ್ನೂ ಕಾಣುತ್ತಿಲ್ಲ. ಇದಕ್ಕೆ ಕಾರಣ ಆಂಧ್ರವನ್ನು ಆಳಿದ ರಾಜಕೀಯ ಪಕ್ಷಗಳು ಎಂದು ವೈಎಸ್ಆರ್ ಕಾಂಗ್ರೆಸ್ ಮತ್ತು ತೆಲುಗು ದೇಸಂ ಪಕ್ಷಗಳನ್ನು ದೂಷಿಸಿದರು. ಈ ರಾಜ್ಯದಲ್ಲಿ ಕೋಟ್ಯಂತರ ಜನರು ಮದ್ಯ ಸೇವನೆ ಮಾಡುತ್ತಾರೆ ಎಂಬುದು ನನಗೆ ಗೊತ್ತು. ನೀವು ನಮ್ಮ ಬಿಜೆಪಿಗೆ ಮತ ಹಾಕಿ. ನಾವು ಸರ್ಕಾರ ರಚನೆ ಮಾಡಿದರೆ ಖಂಡಿತವಾಗಿಯೂ ಕಡಿಮೆ ಬೆಲೆಗೆ ಮದ್ಯ ಸಿಗುವಂತೆ ಮಾಡುತ್ತೇವೆ ಎಂದಿದ್ದಾರೆ.