ವಿಜಯಪುರ: ‘ಅಂಬಲಿ ಹಳಸಿತು ಕಂಬಳಿ ಬೀಸಿತಲೆ ಪರಾಕ್’ ಎಂದು ಮೈಲಾರಲಿಂಗೇಶ್ವರ ಕಾರ್ಣಿಕ ನುಡಿದಿದೆ. ಹೂವಿನಡಗಲಿ ಗ್ರಾಮದ ಮೈಲಾರ ಗ್ರಾಮದಲ್ಲಿ ಗೊರವಯ್ಯ ರಾಮಪ್ಪ ಕಾರ್ಣಿಕ ನುಡಿದಿದ್ದಾರೆ. ಸುಮಾರು 14 ಅಡಿ ಎತ್ತರದ ಬಿಲ್ಲನೇರಿ ಕಾರ್ಣಿಕ ನುಡಿದಿದ್ದಾರೆ.
ಈ ಬಾರಿಯ ಕಾರ್ಣಿಕದಲ್ಲಿ ರಾಜ್ಯ ರಾಜಕೀಯದ ಬಗ್ಗೆ ನುಡಿದಿದ್ದು, ಈ ವರ್ಷ ಪ್ರಾಮಾಣಿಕ ಹಾಗೂ ನಿಷ್ಠೆ ಉಳ್ಳಂತಹ ವ್ಯಕ್ತಿ ರಾಜ್ಯ ಹಾಗೂ ರಾಷ್ಟ್ರವನ್ನು ಆಳುತ್ತಾನೆ. ಮಳೆ ಬೆಳೆ ಚೆನ್ನಾಗಿ ಆಗಲಿದೆ. ರೈತನಿಗೆ ಒಳ್ಳೆಯದ್ದಾಗುತ್ತೆ. ಇದರ ಜೊತೆಗೆ ಮಳೆ ಹೆಚ್ಚಾಗಿ ಬೆಳೆ ನಾಶವೂ ಆಗುತ್ತದೆ ಎಂದಿದ್ದಾರೆ.
ಪ್ರತಿ ವರ್ಷವೂ ಮೈಲಾರದಲ್ಲಿ ಕಾರ್ಣಿಕ ಭವಿಷಗಯ ನಡೆಯಲಿದೆ. 11 ದಿನ ಉಪವಾಸ ವ್ರತ ಇದ್ದು ಕಾರ್ಣಿಕ ಭವಿಷ್ಯ ನುಡಿಯುತ್ತಾರೆ. ಈ ಭವಿಷ್ಯ ಕೇಳುವುದಕ್ಕೆ ವಿವಿದೆಢೆಯಿಂದ ಲಕ್ಷಾಂತರ ಭಕ್ತರು ಬಂದಿರುತ್ತಾರೆ. ಇಂದು ರಾಜಕೀಯದ ಭವಿಷ್ಯ ಜೊತೆಗೆ ರೈತರ ಬಗೆಗಿನ ಭವಿಷ್ಯವನ್ನು ನುಡಿದಿದ್ದಾರೆ.