ನವದೆಹಲಿ : ಹಳೆಯ ಸಂಸತ್ ಭವನದ ಯುಗ ಇಂದಿಗೆ ಅಂತ್ಯಗೊಂಡಿದೆ. ನಾಳೆಯಿಂದ ಹೊಸ ಕಟ್ಟಡದಲ್ಲಿ ಸಂಸತ್ ಅಧಿವೇಶನ ನಡೆಯಲಿದೆ ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಘೋಷಿಸಿದ್ದಾರೆ.
ಸಂಸತ್ತಿನ ವಿಶೇಷ ಅಧಿವೇಶನದ ಮೊದಲ ದಿನವಾದ ಸೋಮವಾರ ಸಂಜೆ ಕಲಾಪ ಮುಗಿಯುವ ಮುನ್ನ ಈ ಕುರಿತು ಸದಸ್ಯರಿಗೆ ಮಾಹಿತಿ ನೀಡಿದರು.
ಸದನವನ್ನು ನಾಳೆಗೆ ಮುಂದೂಡಲಾಗುವುದು ಎಂದು ಪ್ರಕಟಿಸಿದ ಸ್ಪೀಕರ್ ಓಂ ಬಿರ್ಲಾ, ನಾಳೆಯಿಂದ ಹೊಸ ಸಂಸತ್ ಭವನದಲ್ಲಿ ಸಭೆಗಳು ನಡೆಯಲಿವೆ ಎಂದು ತಿಳಿಸಿದರು.
ನೂತನ ಸಂಸತ್ ಭವನದಲ್ಲಿ ಬೆಳಗ್ಗೆ ಗಣಪತಿ ಪೂಜೆ ನಡೆಯಲಿದೆ ಎಂದು ವರದಿಯಾಗಿದೆ.
Special Session of Parliament | Lok Sabha adjourned to meet at 1:15 pm in the new Parliament building tomorrow.
— ANI (@ANI) September 18, 2023
ಮೊದಲು 9.30. ಪ್ರದೇಶದಲ್ಲಿ ಫೋಟೋ ಸೆಷನ್ ಆಯೋಜಿಸಲಾಗುವುದು. ನಂತರ ಕೇಂದ್ರ ಸಭಾಂಗಣದಲ್ಲಿ ಸಂಸದರು ಸಭೆ ನಡೆಸಲಿದ್ದಾರೆ. ಪ್ರಧಾನಿ ಮೋದಿ ಅವರು ಸಂಸದರೊಂದಿಗೆ ನೂತನ ಸಂಸತ್ ಭವನ ಪ್ರವೇಶಿಸಲಿದ್ದಾರೆ.
ಈ ಸಂದರ್ಭದಲ್ಲಿ ಎಲ್ಲ ಸಂಸದರಿಗೂ ಉಡುಗೊರೆ ನೀಡಲಾಗುವುದು.
ಈ ಉಡುಗೊರೆ ಚೀಲದಲ್ಲಿ ಸಂವಿಧಾನದ ಪುಸ್ತಕ, ಸಂಸತ್ತಿನ ಪುಸ್ತಕಗಳು, ಸ್ಮರಣಾರ್ಥ ನಾಣ್ಯ ಮತ್ತು ಅಂಚೆಚೀಟಿ ಇರುತ್ತದೆ ಎಂದು ವರದಿಯಾಗಿದೆ. ನಂತರ ಮಧ್ಯಾಹ್ನ 1.15ಕ್ಕೆ ಲೋಕಸಭೆ ಅಧಿವೇಶನ ಮತ್ತು 2.15 ನಿಮಿಷಕ್ಕೆ ರಾಜ್ಯಸಭೆ ಅಧಿವೇಶನ ಆರಂಭವಾಗಲಿದೆ.