ಚಿತ್ರದುರ್ಗ, (ಜುಲೈ 13) : ತಾಲ್ಲೂಕಿನ ಗೋನೂರು ಗ್ರಾಮದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-48 ರಸ್ತೆಯಲ್ಲಿ ವಿಂಡ್ ಮಿಲ್ ಮತ್ತು ಗೋನೂರು ಬ್ರಿಡ್ಜ್ ಮಧ್ಯದ ರಸ್ತೆಯಲ್ಲಿ ಅನಾಮಧೇಯ ಶವ ಪತ್ತೆಯಾಗಿರುವ ಪ್ರಕರಣ 2022ರ ಜುಲೈ 13ರಂದು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಜುಲೈ 13ರಂದು ಬೆಳಗಿನ ಜಾವ ಸುಮಾರು 5 ಗಂಟೆಗೆ ಡಿ.ಎಸ್.ಹಳ್ಳಿ ಕಡೆಯಿಂದ ಸೀಬಾರ ಗೋಶಾಲೆ ಕಡೆಗೆ ಹೋಗುವ ಎನ್ ಹೆಚ್-48 ರಸ್ತೆಯಲ್ಲಿ ವಿಂಡ್ ಮಿಲ್ ಮತ್ತು ಗೋನೂರು ಬ್ರಿಡ್ಜ್ ಮಧ್ಯದ ರಸ್ತೆಯನ್ನು ಅಪರಿಚಿತ ಮಹಿಳೆಯು ರಸ್ತೆ ದಾಟುತ್ತಿರುವಾಗ ಯಾವುದೋ ವಾಹನ ಚಾಲಕನು ತನ್ನ ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಹೋಗಿರುತ್ತಾನೆ. ಮಹಿಳೆಯು ಅಪಘಾತದಲ್ಲಿ ರಕ್ತ ಮಾಂಸ ಹೊರಬಂದು ತೀವ್ರ ಸ್ವರೂಪದ ಗಾಯಗಳಿಂದ ಸ್ಥಳದಲ್ಲಿಯೇ ಮೃತವಾಗಿರುತ್ತಾರೆ.
ಅನಾಮಧೇಯ ಮಹಿಳೆಯ ಚಹರೆ ಇಂತಿದೆ. ಕೋಲುಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, 4.5 ಅಡಿ ಎತ್ತರ, ಕೆಂಪು ಬಣ್ಣದ ಜರ್ಕಿನ್, ಹಳದಿ ದಡಿಯ ಕೆಂಪು ಬಣ್ಣ, ಬಿಳಿ ಬಣ್ಣದ ಸೀರೆ ಧರಿಸಿದ್ದಾರೆ. ಮೃತ ಮಹಿಳೆಯು ಅನಾಮಧೇಯ ವ್ಯಕ್ತಿಯಾಗಿರುವುದರಿಂದ, ಅಪರಿಚಿತ ಶವದ ವಾರಸುದಾರರು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ಸಂಪರ್ಕಿಸಬೇಕು ಪೊಲೀಸ್ ಸಬ್ಇನ್ಸ್ಪೆಕ್ಟರ್ ತಿಳಿಸಿದ್ದಾರೆ.