
ಮೈಸೂರು : ತಿ.ನರಸೀಪುರ ತಾಲ್ಲೂಕಿನಲ್ಲಿ ನರಭಕ್ಷಕ ಚಿರತೆಯ ಅಟ್ಟಹಾಸ ಮುಂದುವರಿದಿದ್ದು, ಶನಿವಾರ ರಾತ್ರಿ 11 ವರ್ಷದ ಬಾಲಕನ ಮೇಲೆ ಚಿರತೆ ದಾಳಿ ನಡೆಸಿ, ಬಾಲಕನನ್ನು ಒಂದು ಕಿಮೀ ಎಳೆದೊಯ್ದು ಕೊಂದು ಹಾಕಿದೆ.

ತಾಲ್ಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ ತಡರಾತ್ರಿ ಘಟನೆ
ನಡೆದಿದ್ದು, 11 ವರ್ಷದ ಜಯಂತ್ ಮೃತ ಬಾಲಕ ಎಂದು ಗುರುತಿಸಲಾಗಿದೆ.
ಜಯಂತ್‍ನನ್ನು ಚಿರತೆ ಎಳೆದೊಯ್ದ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಹುಡುಕಾಟ ನಡೆಸಿದರು. ಘಟನಾ ಸ್ಥಳದಿಂದ 1 ಕಿಮೀ ದೂರದಲ್ಲಿ ಬಾಲಕನ ಮೃತ ದೇಹ ಪತ್ತೆಯಾಗಿದ್ದು, ಬಾಲಕನ ದೇಹವನ್ನು ಚಿರತೆ ತಿಂದು ಹಾಕಿದೆ.
ಸ್ಥಳಕ್ಕೆ ಜಿಲ್ಲಾಧಿಕಾರಿಗಳು, ಅರಣ್ಯಧಿಕಾರಿಗಳು, ಶಾಸಕ ಅಶ್ವಿನ್ ಕುಮಾರ್, ಪೊಲೀಸರು ಭೇಟಿ ನೀಡಿದ್ದಾರೆ.
ಹೊರಳಹಳ್ಳಿ ಗ್ರಾಮದಲ್ಲಿ ಈಗ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.

GIPHY App Key not set. Please check settings