ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮಿತಿಮೀರಿದೆ. ನಾಗರಿಕರ ಮೇಲೆ ಮತ್ತೊಮ್ಮೆಗುಂಡಿನ ದಾಳಿ ನಡೆಸಿದ್ದು, ಕಿರುತೆರೆಯ ನಟಿಯ ಪ್ರಾಣ ತೆಗೆದಿದ್ದಾರೆ. ಅಮ್ರಿನಾ ಭಟ್ ಎಂಬ ಕಿರುತೆರೆ ನಟಿ ಜಮ್ಮು ಕಾಶ್ಮೀರದಲ್ಲಿ ಉಗ್ರರ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.
ಚದೂರ ಪ್ರದೇಶದಲ್ಲಿ ಅಮ್ರಿನಾ ಭಟ್ ನಿವಾಸವಿದೆ. ಅಮ್ರಿನಾ ಕಿರುತೆರೆಯ ನಟಿಯಾಗಿದ್ದಾರೆ. ಆದರೆ ಇಸ್ಲಾಂ ಧರ್ಮದಲ್ಲಿ ನಟನೆಗೆ ಅವಕಾಶವಿಲ್ಲವೆಂದು ಉಗ್ರರು ನಟಿಗೆ ಗುಂಡೇಟು ಹೊಡೆದಿದ್ದಾರೆ. ಅಮ್ರಿನಾ ಭಟ್ ನಿವಾಸದ ಮೇಲೆ ದಾಳಿ ನಡೆಸಿದ ಉಗ್ರರು, ದಾಳಿ ನಡೆಸಿ, ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಆಕೆಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾಳೆ.
ಜಮ್ಮು ಕಾಶ್ಮೀರದ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ನುನ್ನೆ ಬೆಳಗ್ಗೆ 7.55 ಕ್ಕೆ ಈ ಘಟನೆ ನಡೆದಿದೆ. ಸದ್ಯ ಘಟನೆ ನಡೆದ ಪ್ರದೇಶದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಘಟನೆಯಲ್ಲಿ ಆಕೆಯ ಸೋದರಳಿಯ ಫರಾನ್ ಜುಬೈರ್ ಕೈಗೆ ಗಾಯವಾಗಿದ್ದು, ಆತನಿಗೂ ಚಿಕಿತ್ಸೆ ನೀಡಲಾಗುತ್ತಿದೆ.