ಕೊಪ್ಪಳ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರಬೇಕು ಎಂಬುದು ಬಿಜೆಪಿ ನಾಯಕರ ಆಶಯವಾಗಿದೆ. ಅದಕ್ಕೆಂದೆ ಶತಾಯಗತಾಯ ಪ್ರಯತ್ನ ಮಾಡುತ್ತಿರುವ ಬಿಜೆಪಿ ಹೈಕಾಂಡ್ ನಾಯಕರು ಸಹ ಕರ್ನಾಟಕದ ಅಖಾಡಕ್ಕೆ ಇಳಿಯುತ್ತಿದ್ದಾರೆ. ತಮ್ಮ ಅಭ್ಯರ್ಥಿಗಳ ಪರ ಕೊಪ್ಪಳದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರೋಡ್ ಶೋ ನಿಗದಿಯಾಗಿತ್ತು. ಆದರೆ ಈಗ ಅದು ರದ್ದಾಗಿದೆ.
ಅಮಿತ್ ಶಾ ಇಂದು ಮಧ್ಯಾಹ್ನ ಮಸ್ಕಿಯಿಂದ ಕಾರಟಗಿಗೆ ಬಂದು ಒಂದು ಕಿಮೀ ರೋಡ್ ಶೋ ನಡೆಸಿ, ಬಳಿಕ ಕನಕಗಿರಿಯಲ್ಲಿ ಪ್ರಚಾರ ನಡೆಸಬೇಕಿತ್ತು. ಸಂಜೆ ವೇಳೆಗೆ ಕೊಪ್ಪಳದಲ್ಲಿ ರೋಡ್ ಶೋ ನಿಗದಿಯಾಗಿತ್ತು. ಆದರೆ ಇವತ್ತಿನ ಅವರ ಎಲ್ಲಾ ಕಾರ್ಯಕ್ರಮಗಳು ರದ್ದಾಗಿದೆ. ಯಾಕಂದ್ರೆ ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ.
ಪರಿಶಿಷ್ಟ ಪಂಗಡಕ್ಕೆ ಸಮುದಾಯವೊಂದನ್ನು ಸೇರಿಸುವ ನಿರ್ಧಾರದಿಂದ ಅಲ್ಲಿನ ಜನ ರೊಚ್ಚಿಗೆದ್ದಿದ್ದಾರೆ. ಪ್ರತಿಭಟನೆ ಈಗ ಹಿಂಸಾಚಾರಕ್ಕೆ ತಿರುಗಿದೆ. ಹಿಂಸಾಚಾರ ತಡೆಯಲು ಭದ್ರತಾ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ. ಐದು ದಿನದಿಂದ ಮೊಬೈಲ್, ಇಂಟರ್ನೆಟ್ ಕೂಡ ಸ್ಥಗಿತಗೊಂಡಿದೆ. ಹೀಗಾಗಿ ಅಲ್ಲಿ ಹಿಂಸಾಚಾರ ಜಾಸ್ತಿಯಾಗುತ್ತಿರುವ ಹಿನ್ನೆಲೆ ಇಲ್ಲಿನ ಕಾರ್ಯಕ್ರಮ ರದ್ದು ಮಾಡಿಕೊಂಡಿದ್ದಾರೆ.