ಕೇಂದ್ರ ಗೃಹ ಸಚಿವ ಅಮಿತ್ ಶಾ ಇದ್ದಕ್ಕಿದ್ದ ಹಾಗೇ ಸರ್ವಪಕ್ಷ ಸಭೆ ಕರೆದಿದ್ದಾರೆ. ಜೂನ್ 24 ರಂದು ಈ ಸಭೆ ನಡೆಯಲಿದೆ. ಮಧ್ಯಾಹ್ನ 3 ಗಂಡೆಯ ವೇಳೆಗೆ ಸಭೆ ನಡೆಯಲಿದೆ. ಮಣಿಪುರದಲ್ಲಿ ನಡೆಯುತ್ತಿರುವ ಘಟನೆಯನ್ನು ಹತೋಟಿಗೆ ತರಬೇಕು ಎಂದು ಕೇಂದ್ರ ಸರ್ಕಾರದಿಂದ ಈ ಸಭೆ ಚರ್ಚಿಸಲಾಗುತ್ತದೆ.
ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ. ಮೊದಲ ಬಾರಿಗೆ ಮೋದಿ ಸರ್ಕಾರದಲ್ಲಿ ಈ ರೀತಿಯ ಸರ್ವಪಕ್ಚ ಸಭೆ ಕರೆಯಲಾಗಿದೆ. ಈಶಾನ್ಯದಲ್ಲಿ ಉಂಟಾಗಿರುವ ಕಾನೂನು ಸುವ್ಯವಸ್ಥೆಯನ್ನು ಹತೋಟಿಗೆ ತರುವ ವಿಚಾರವಾಗಿ ಚರ್ಚೆ ನಡೆಯಲಿದೆ. ಮಣಿಪುರದ ಘಟನೆಗೆ ಬಿಜೆಪಿ ನಾಯಕರಿಂದಾನೇ ಸಮಧಾನ ವ್ಯಕ್ತವಾಗಿದೆ.
ಬಿಜೆಪಿಯ 9 ಶಾಸಕರು, ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಬೇಸರ ಹೊರಹಾಕಿದ್ದಾರೆ. ಮಾತ್ರವಲ್ಲ, ಮಣಿಪುರ ಗಲಾಟೆಯಲ್ಲಿ ಕೇಂದ್ರ ಸರ್ಕಾರ ಎಂಟ್ರಿಯಾಗಿ ಪರಿಸ್ಥಿತಿಯನ್ನು ಹತೋಟಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ. ಮೇಟಿಗಳಿಗೆ ಪರಿಶಿಷ್ಟ ಪಂಗಡ (ST) ಸ್ಥಾನಮಾನ ನೀಡಿರೋದನ್ನು ವಿರೋಧಿಸಿ ಆದಿವಾಸಿಗಳು ನಡೆಸುತ್ತಿರುವ ಪ್ರತಿಭಟನೆಗಳು ಹಿಂಸಾರೂಪಕ್ಕೆ ತಿರುಗಿವೆ. ಮಣಿಪುರದಲ್ಲಿ ಮೇಟಿಗಳು ಬಹುಸಂಖ್ಯಾತರಾಗಿದ್ದಾರೆ. ಈ ಸಮುದಾಯ ತಮಗೆ ST ಸ್ಥಾನಮಾನ ನೀಡಬೇಕು ಎಂದು ದಶಕಗಳಿಂದ ಹೋರಾಟ ಮುಂದುವರೆಸಿದ್ದಾರೆ.